ಕೊಪ್ಪಳ ಜಿಲ್ಲೆ ೪ ಪಾಜಿಟಿವ್ ಕೇಸ್ ದೃಡ

ಕೊಪ್ಪಳ : ಕೊಪ್ಪಳ ಜಿಲ್ಲೆ ೪ ಪಾಜಿಟಿವ್ ಕೇಸ್ ದೃಡವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

– ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ನಿನ್ನೆ ತಡರಾತ್ರಿ ನಾಲ್ವರಿಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿದೆ ಎಂದು ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ 31 ವರ್ಷದ ಪುರುಷ, ಗಂಗಾವತಿ ನಗರದ 41 ವರ್ಷದ ಪುರುಷ, ಗಂಗಾವತಿ ನಗರದ 30 ವರ್ಷದ ಮಹಿಳಾ ಆರೋಗ್ಯ ಸಿಬ್ಬಂದಿ ಹಾಗೂ ಕಾರಟಗಿ ತಾಲೂಕಿನ ತಿಮ್ಮಾಪುರ ಗ್ರಾಮದ 29 ವರ್ಷದ ಮಹಿಳೆ ಸೋಂಕು ತಗುಲಿದೆ ಎಂದು ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ. ಸೋಂಕಿತ ತಿಮ್ಮಾಪುರದ ಮಹಿಳೆ P-5838 ನ ಪ್ರಾಥಮಿಕ ಸಂಪರ್ಕಿತೆಯಾಗಿದ್ದಾಳೆ. ಗಂಗಾವತಿಯ 41 ವರ್ಷದ ಪುರುಷ ಮೂರು ವರ್ಷದ ಮಗು P-7103 ನ ತಂದೆಯಾಗಿದ್ದಾರೆ. ಇನ್ನು ಶ್ರೀರಾಮನಗರದಲ್ಲಿ ಪತ್ತೆಯಾಗಿರುವ ಸೋಂಕಿತ ಉಡುಪಿಯಿಂದ ಬಂದಿರುವ ಮಾಹಿತಿ ಇದೆ. ಆರೋಗ್ಯ ಸಿಬ್ಬಂದಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಈ ಎಲ್ಲ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಕಾರ್ಯ ನಡೆದಿದೆ ಎಂದು ಕೊಪ್ಪಳ ಜಿಲ್ಲಾಡಳಿತ ತಿಳಿಸಿದೆ.

Please follow and like us:
error