ಕೊಪ್ಪಳ ಜಿಲ್ಲೆಯ 10 ಕಡೆ ನಾಳೆ ಲಾಕಡೌನ್ ಇರುತ್ತಾ ? ಇಲ್ವಾ?

ಕೊಪ್ಪಳ : ಕೊಪ್ಪಳ ಜಿಲ್ಲೆಯ ಗಂಗಾವತಿ, ಭಾಗ್ಯನಗರ ಸೇರಿದಂತೆ ಒಟ್ಟು 10 ಕಡೆ ಇಂದು ರಾತ್ರಿಯಿಂದ ಲಾಕಡೌನ್ ಆರಂಭವಾಗಲಿದೆ. ಕರೋನಾ ತಡೆಗಟ್ಟುವ ನಿಟ್ಟಿನಲ್ಲಿ 10 ದಿನಗಳ ಕಾಲ ಲಾಕಡೌನ್ ನ್ನು ಜಿಲ್ಲಾಡಳಿತ ಘೋಷಣೆ ಮಾಡಿದೆ .

ಆದರೆ ಸಿಎಂ  ಬಿ.ಎಸ್.ಯಡಿಯೂರಪ್ಪ ತಮ್ಮ ಲೈವ ಭಾಷಣದಲ್ಲಿ ಬೆಂಗಳೂರಿನಲ್ಲಿ ಲಾಕ್ ಡೌನ್ ಇರುವುದಿಲ್ಲ. ಅಷ್ಟೇ ಅಲ್ಲ ರಾಜ್ಯದ ಯಾವ ಭಾಗದಲ್ಲೂ ಲಾಕಡೌನ್ ಇರುವುದಿಲ್ಲ ಎಂದು ಹೇಳಿರುವುದು ಇಡೀ ಜಿಲ್ಲೆಯ ಜನತೆಯನ್ನು ಗೊಂದಲಕ್ಕೀಡು ಮಾಡಿದೆ.  ಎಲ್ಲ ರೀತಿಯ ಸಿದ್ದತೆಗಳು ಈಗಾಗಲೇ ಪೂರ್ಣಗೊಂಡಿವೆ. ಈ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ಜನರನ್ನು ಗೊಂದಲದಲ್ಲಿ ಮುಳುಗಿಸಿದೆ. ಜಿಲ್ಲಾಧಿಕಾರಿ ಇದುವರೆಗೆ ನಮಗೆ ಯಾವುದೇ ಆದೇಶ ಬಂದಿಲ್ಲ. ಅದರಬಗ್ಗೆ ಪರಿಶೀಲನೆ ನಡೆಸುತ್ತಿದ್ಧೇವೆ. ಸರಕಾರ ಆದೇಶ ನೀಡಿದ್ದರೆ ನಾವು ಆದೇಶವನ್ನು ಪಾಲಿಸಬೇಕಾಗುತ್ತೆ ಎಂದು ಹೇಳಿದ್ಧಾರೆ.

Please follow and like us:
error