ಕೊಪ್ಪಳ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತದಾರರ ವಿವರ

ಕೊಪ್ಪಳ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತದಾರರ ವಿವರ

ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯಕ್ರಮದ ವೇಳಾ ಪಟ್ಟಿ ಪ್ರಕಟ : ಎಂ. ಕನಗವಲ್ಲಿ
ಕೊಪ್ಪಳ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯಕ್ರಮದ ವೇಳಾ ಪಟ್ಟಿ ಪ್ರಕಟಿಸಲಾಗಿದೆ ಎಂದು ಜಿಲ್ಲಾದಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು. .
ಅರ್ಹತಾ ದಿನಾಂಕ ೦೧-೦೧-೨೦೧೮ ರ ಆಧಾರದ ಮೇಲೆ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದ ಭಾರತ ಚುನಾವಣಾ ಆಯೋಗವು ನೀಡಿರುವ ವೇಳಾಪಟ್ಟಿ ಕುರಿತು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ, ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನ. ೩೦ ರಂದು ಕರಡು ಮತದಾರರ ಪಟ್ಟಿಗಳನ್ನು ಪ್ರಕಣಿಸಲಾಗಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿ. ೨೯ ಕೊನೆಯ ದಿನವಾಗಿರುತ್ತದೆ. ಡಿ. ೦೬ ಮತ್ತು ೨೧ ರಂದು ಗ್ರಾಮೀಣ/ ನಗರ ಸ್ಥಳೀಯ ಸಂಸ್ಥೆಗಳ ಗ್ರಾಮ ಸಭೆಗಳಲ್ಲಿ ಮತದಾರರ ಪಟ್ಟಿಗಳ ಓದುವಿಕೆ. ಡಿ. ೦೩ ಮತ್ತು ೧೭ ರಂದು ರಾಜಕೀಯ ಪಕ್ಷಗಳಿಂದ ನೇಮಿಸಿದ ಬೂತ್ ಮಟ್ಟದ ಏಜೆಂಟ್ (ಬಿ.ಎಲ್.ಎ) ಗಳಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸುವ ವಿಶೇಷ ಆಂದೋಲನ ಜಿಲ್ಲೆಯಲ್ಲಿ ಕೈಗೊಳ್ಳಲಾಗುವುದು. ೨೦೧೮ ರ ಜನೇವರಿ. ೨೦ ರಂದು ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳ ವಿಲೆವಾರಿ ನಡೆಯಲಿದ್ದು, ಫೇಬ್ರವರಿ. ೧೫ ರಂದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ಅಂಕಿ-ಸಂಖ್ಯೆ ವಿವರ : ೬೦-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರು-೧೧೧೪೨೭, ಮಹಿಳೆಯರು-೧೦೮೧೨೪, ಇತರರು ೯ ಒಟ್ಟು ೨೧೯೫೬೦ ಮತದಾರರಿದ್ದಾರೆ. ೬೧-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರು-೧೦೨೨೪೧, ಮಹಿಳೆಯರು-೧೦೨೭೮೪, ಇತರರು ೬ ಒಟ್ಟು ೨೦೫೦೩೧ ಮತದಾರರಿದ್ದಾರೆ. ೬೨-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರು-೯೫೨೪೬, ಮಹಿಳೆಯರು-೯೫೦೧೪ ಒಟ್ಟು ೧೯೦೨೬೦ ಮತದಾರರಿದ್ದಾರೆ. ೬೩-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರು-೧೦೧೭೪೧, ಮಹಿಳೆಯರು-೯೯೩೦೩, ಇತರರು ೫ ಒಟ್ಟು ೨೦೧೦೪೯ ಮತದಾರರಿದ್ದಾರೆ. ಮತ್ತು ೬೪-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರು-೧೧೭೩೫೨, ಮಹಿಳೆಯರು-೧೧೬೭೪೬, ಇತರರು ೧೫ ಒಟ್ಟು ೨೩೪೧೧೩ ಮತದಾರರಿದ್ದಾರೆ. ಕೊಪ್ಪಳ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಪುರುಷರು-೫೨೮೦೦೭, ಮಹಿಳೆಯರು-೫೨೧೯೭೧, ಇತರರು ೩೫ ಒಟ್ಟು ೧೦೫೦೦೧೩ ಮತದಾರರಿದ್ದಾರೆ.
ಮತದಾನ ಕೇಂದ್ರಗಳು : ಕೊಪ್ಪಳ ಜಿಲ್ಲೆಯ ಮತದಾನ ಕೇಂದ್ರಗಳ ವಿವರ ಇಂತಿದೆ, ನಗರ ಪ್ರದೇಶದಲ್ಲಿ ೧೪೦೦ ಮತದಾರರಿಗಿಂತ ಅಧಿಕ ಮತದಾರರನ್ನು ಹೊಂದಿದ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ೧೨೦೦ ಮತದಾರರಿಗಿಂತ ಅಧಿಕ ಮತದಾರರನ್ನು ಹೊಂದಿದ ಮತದಾನ ಕೇಂದ್ರಗಳನ್ನು ವಿಭಜಿಸಿ ಹೊಸದಾಗಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದ್ದರಿಂದ ಕೊಪ್ಪಳ ಜಿಲ್ಲೆಯಲ್ಲಿ ೧೧೯೨ ಮತದಾನ ಕೇಂದ್ರಗಳ ಸಂಖ್ಯೆಯು ೧೨೮೬ ಕ್ಕೆ ಏರಿಕೆಯಾಗಿದೆ. ೬೦-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ೨೫೨ ಮತದಾನ ಕೇಂದ್ರಗಳಿದ್ದು, ೧೭ ಕೇಂದ್ರಗಳನ್ನು ಹೆಚ್ಚುವರಿಯಾಗಿಸಿ ಪ್ರಸ್ತುತ ಒಟ್ಟು ೨೬೯ ಮತದಾನ ಕೇಂದ್ರಗಳಿವೆ. ೬೧-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ೨೩೯ ಮತದಾನ ಕೇಂದ್ರಗಳಿದ್ದು, ೧೮ ಕೇಂದ್ರಗಳನ್ನು ಹೆಚ್ಚುವರಿಯಾಗಿಸಿ ಪ್ರಸ್ತುತ ಒಟ್ಟು ೨೫೭ ಮತದಾನ ಕೇಂದ್ರಗಳಿವೆ. ೬೨-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ೨೧೧ ಮತದಾನ ಕೇಂದ್ರಗಳಿದ್ದು, ೧೯ ಕೇಂದ್ರಗಳನ್ನು ಹೆಚ್ಚುವರಿಯಾಗಿಸಿ ಪ್ರಸ್ತುತ ಒಟ್ಟು ೨೩೦ ಮತದಾನ ಕೇಂದ್ರಗಳಿವೆ. ೬೩-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ೨೩೭ ಮತದಾನ ಕೇಂದ್ರಗಳಿದ್ದು, ೧೪ ಕೇಂದ್ರಗಳನ್ನು ಹೆಚ್ಚುವರಿಯಾಗಿಸಿ ಪ್ರಸ್ತುತ ಒಟ್ಟು ೨೫೧ ಮತದಾನ ಕೇಂದ್ರಗಳಿವೆ. ೬೪-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ೨೫೩ ಮತದಾನ ಕೇಂದ್ರಗಳಿದ್ದು, ೨೬ ಕೇಂದ್ರಗಳನ್ನು ಹೆಚ್ಚುವರಿಯಾಗಿಸಿ ಪ್ರಸ್ತುತ ಒಟ್ಟು ೨೭೯ ಮತದಾನ ಕೇಂದ್ರಗಳಿವೆ. ಕೊಪ್ಪಳ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಹಿಂದೆ ೧೧೯೨ ಮತದಾನ ಕೇಂದ್ರಗಳಿದ್ದು, ೯೪ ಕೇಂದ್ರಗಳನ್ನು ಹೆಚ್ಚುವರಿಯಾಗಿಸಿ ಪ್ರಸ್ತುತ ಒಟ್ಟು ೧೨೮೬ ಮತದಾನ ಕೇಂದ್ರಗಳಿವೆ. ವಿಧಾನ ಸಭಾ ಕ್ಷೇತ್ರವಾರು ಮತದಾನ ಕೇಂದ್ರಗಳ ಪಟ್ಟಿಯಲ್ಲಿ ನೀಡಲಾಗಿದ್ದು, ದಯಬಿಟ್ಟು ಅವಲೋಕಿಸುವುದು. ಪ್ರತಿ ಮತಗಟ್ಟೆಗೆ ಒಬ್ಬ ಬೂತ ಮಟ್ಟದ ಅಧಿಕಾರಿಯನ್ನು ಈಗಾಗಲೇ ನೇಮಿಸಲಾಗಿದೆ.
ಬೂತ್ ಮಟ್ಟದ ಏಜೆಂಟರುಗಳ ನೇಮಕಾತಿ : ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಮತದಾರರ ಪಟ್ಟಗಳ ಪರಿಷ್ಕರಣಾ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಲು ಅನುಕೂಲವಾಗುವಂತೆ ಬೂತ್ ಮಟ್ಟದ ಏಜೆಂಟರನ್ನು ನೇಮಿಸಲು ಭಾರತ ಚುನಾವಣಾ ಆಯೋಗವು ಅಪೇಕ್ಷಿಸಿರುತ್ತದೆ. ಇದು ರಾಜಕೀಯ ಪಕ್ಷಗಳು ಮತದಾನದ ಸಮಯದಲ್ಲಿ ಮತ್ತು ಮತ ಏಣಿಕಾ ಸಮಯದಲ್ಲಿ ಏಜೆಂಟರುಗಳನ್ನು ನೇಮಕ ಮಾಡುವ ಮಾದರಿಯಂತೆ ಬಿ.ಎಲ್.ಎ ಗಳನ್ನು ನೇಮಕ ಮಾಡಬಹುದಾಗಿದೆ.
ಪ್ರತಿಯೊಂದು ಮಾನ್ಯತೆ ಪಡೆದ ರಾಜಕೀಯ ಪಕ್ಷವು ತನ್ನ ಪಕ್ಷದ ಅಧ್ಯಕ್ಷ/ ಕಾರ್ಯದರ್ಶಿಯವರ ಮುಖಾಂತರ ಪ್ರತಿ ಜಿಲ್ಲೆಗೆ ಒಬ್ಬ ಅಥವಾ ಅಧಿಕ ಜಿಲ್ಲಾ ಪ್ರತಿನಿಧಿಯನ್ನು ಫ್ರಂ ಐ.ಡಿ: ಬಿ.ಎಲ್.ಎ ೧ರಲ್ಲಿ ನೇಮಕ ಮಾಡಬಹುದು. ನೇಮಕಾತಿ ನಮೂನೆಯು ಅಧಿಕೃತ ಸಹಿ ಇರುವ ಮೂಲ ಪ್ರತಿಯಾಗಿರಬೇಕು. (ದ ಫ್ರಂ ಮೋಸ್ಟ್ ಬಿ ಸಿಗ್ನಡ್ ಇನ್ ಇಂಕ್ ಒನ್‌ಲಿ). ಆದರೆ ನೇಮಕ ಮಾಡುವ ಸಂದರ್ಭದಲ್ಲಿ ಅವರಿಗೆ ಹಂಚಿಕೆಮಾಡಿದ ವಿಧಾನಸಭಾ ಕ್ಷೇತ್ರಗಳನ್ನು ನಮೂದಿಸಬೇಕು. ರಾಜಕೀಯ ಪಕ್ಷಗಳಿಂದ ಜಿಲ್ಲಾ ಪ್ರತಿನಿಧಿಯೆಂದು ನೇಮಕಗೊಂಡ ವ್ಯಕ್ತಿಯು ಪ್ರತಿ ಮತಗಟ್ಟೆಗೆ ಒಬ್ಬ ಬೂತ್ ಮಟ್ಟದ ಏಜೆಂಟ್‌ನನ್ನು ಫ್ರಂ ಐ.ಡಿ: ಬಿ.ಎಲ್.ಎ ೧ರಲ್ಲಿ ನೇಮಕ ಮಾಡಲು ಸುಕ್ಷಮರಾಗಿರುತ್ತಾರೆ. ನೇಮಕಾತಿ ನಮೂನೆಯು ಅಧಿಕೃತ ಸಹಿ ಇರುವ ಮೂಲ ಪ್ರತಿಯಾಗಿರಬೇಕು. ನೇಮಕಾತಿ ಹೊಂದುವ ಬಿ.ಎಲ್.ಎ ಸಂಬಂಧಪಟ್ಟ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ ನೋಂದಾಯಿತವಾಗಿರುವ ಮತದಾರನಾಗಿರಬೇಕು.
ಬಿ.ಎಲ್.ಎ ಕರ್ತವ್ಯಗಳು : ರಾಜಕೀಯ ಪಕ್ಷಗಳು ಜಿಲ್ಲಾಧಿಕಾರಿಗಳಿಂದ ಉಚಿತವಾಗಿ ಪಡೆದುಕೊಂಡ ಮತದಾರರ ಪಟ್ಟಿಗಳನ್ನು ಆಯಾ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳವಾರು ನೇಮಕ ಹೊಂದಿದ ಬಿ.ಎಲ್.ಎ ಗಳಿಗೆ ಆಯಾ ಮತಗಟ್ಟೆಯ ಮತದಾರರ ಪಟ್ಟಿಗಳನ್ನು ನೀಡಬೇಕು. ಬಿ.ಎಲ್.ಎ ಗಳು ಆಯಾ ಭಾಗದ ಮತದಾರರ ಪಟ್ಟಿಗಳನ್ನು ಪರಿಶೀಲಿಸಿ ಅದರಲ್ಲಿರುವ ಮತದಾರರು ಒಂದು ವೇಳೆ ಸ್ಥಳಾಂತರಗೊಂಡಲ್ಲಿ/ ಮರಣ ಹೊಂದಿದಲ್ಲಿ ಮತ್ತು ಯಾವುದಾದರೂ ಮತದಾರರು ಸೇರ್ಪಡೆಯಾಗಿರದಿದ್ದಲ್ಲಿ ನಿಗದಿತ ನಮೂನೆಗಳನ್ನು ಅರ್ಜಿದಾರಿಂದ ಭರ್ತಿ ಮಾಡಿಸಿ, ಸೂಕ್ತ ದಾಖಲೆಗಳೊಂದಿಗೆ ಬೂತ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸುವಂತೆ ಮತದಾರರಿಗೆ ಬಿ.ಎಲ್.ಎ ಗಳು ತಿಳಿಸಬೇಕು.
ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗಳ ಪರಿಷ್ಕರಣೆ : ಕರ್ನಾಟಕ ಈಶನ್ಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗಳ ಪರಿಷ್ಕರಣೆಯನ್ನು ನ. ೨೧ ರಂದು ಕರ್ನಾಟಕ ಈಶನ್ಯ ಪದವೀಧರರ ಕ್ಷೇತ್ರ, ಕಲಬುರಗಿಯ ಕರಡು ಮತದಾರರ ಪಟ್ಟಿಯನ್ನು ಪ್ರಚುರ ಪಡಿಸಲಾಗಿದ್ದು, ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನ. ೨೧ ರಿಂದ ಡಿ. ೨೧ ರವರೆಗೆ ಅವಧಿಯನ್ನು ಭಾರತ ಚುನಾವಣಾ ಆಯೋಗವು ನಿಗದಿ ಪಡಿಸಿದೆ. ಕರುಡ ಮತದಾರರ ಪಟ್ಟಿಯ ಅನುಸಾರ ಮತದಾರರ ವಿವರ ಇಂತಿದೆ, ಭಾಗಸಂಖ್ಯೆ ೧೦೪-ಗಂಗಾವತಿಯಲ್ಲಿ ಪುರುಷರು-೩೧೫, ಮಹಿಳೆಯರು-೧೪೨ ಒಟ್ಟು ೪೫೭ ಮತದಾರರಿದ್ದಾರೆ. ಭಾಗ ೧೦೫-ಗಂಗಾವತಿಯಲ್ಲಿ ಪುರುಷರು-೭೩೧, ಮಹಿಳೆಯರು-೨೦೯ ಒಟ್ಟು ೯೪೦, ಭಾಗ ೧೦೬-ಕೊಪ್ಪಳದಲ್ಲಿ ಪುರುಷರು-೪೯೬, ಮಹಿಳೆಯರು-೨೩೫ ಒಟ್ಟು ೭೩೧, ಭಾಗ ೧೦೭-ಕೊಪ್ಪಳದಲ್ಲಿ ಪುರುಷರು-೩೨೧, ಮಹಿಳೆಯರು-೧೦೫ ಒಟ್ಟು ೪೨೬, ಭಾಗ ೧೦೮-ಕುಷ್ಟಗಿಯಲ್ಲಿ ಪುರುಷರು-೭೦೨, ಮಹಿಳೆಯರು-೧೭೪ ಒಟ್ಟು ೮೭೬, ಭಾಗ ೧೦೯- ಯಲಬುರ್ಗಾದಲ್ಲಿ ಪುರುಷರು-೪೭೫, ಮಹಿಳೆಯರು-೧೪೨ ಒಟ್ಟು ೬೧೭, ಜಿಲ್ಲೆಯಲ್ಲಿ ಪುರುಷರು-೩೦೪೦, ಮಹಿಳೆಯರು-೧೦೦೭ ಸೇರಿ ಒಟ್ಟು ೪೦೪೭ ಪದವೀಧರ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರಾದ ಪ್ರತಿಪಗೌಡ ಮಾಲಿಪಾಟಿಲ್ ಸೇರಿದಮತೆ ಅನೇಕರು ಉಪಸ್ಥಿತರಿದ್ದರು.

Related posts