ಕೊಪ್ಪಳ ಜಿಲ್ಲೆಯಲ್ಲಿ ಯಾರಿಗೂ ಕೊರೊನಾ ಸೊಂಕು ಇಲ್ಲ- ಡಿಸಿ

ಮಾರ್ಚ್ – 2020 ನೇ ತಿಂಗಳಿನಲ್ಲಿ ದೆಹಲಿಯ ಹಜರತ್ ನಿಜಾಮುದ್ದೀನ್‌ನಲ್ಲಿ ಆಯೋಜಿಸಲಾಗಿರುವ ತಬ್ಲಿಗಿ ಜಮಾತ್‌ನಲ್ಲಿ ಭಾಗವಹಿಸಲಾಗಿರುವ ಬಹತೇಕ ಜನರಿಗೆ ಕೋವಿಡ್ – 19 ಸೋಂಕು ತಗುಲಿರುವ ಸಾಧ್ಯತೆಗಳು ಕಂಡುಬಂದಿರುತ್ತದೆ . ಸದರಿ ಮಾಹೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ನಿಮಿತ್ತ ದೆಹಲಿಗೆ ಭೇಟಿ ನೀಡಿರುವ ಸಾರ್ವಜನಿಕರ ಕುರಿತಂತೆ ಜಿಲ್ಲಾಡಳಿತವು ಸ್ಥಳೀಯವಾಗಿ ಪೊಲೀಸ್ ಇಲಾಖೆಯ ಮುಖಾಂತರ ಶೋಧಿಸಲಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ , ಕಾರಟಗಿ ಹಾಗೂ ಕುಷ್ಟಗಿ ತಾಲ್ಲೂಕಿನ ಒಟ್ಟು 22 ಜನರು ದೆಹಲಿ ಹಜರತ್ ನಿಜಾಮುದ್ದೀನ್ ಪ್ರದೇಶದ ಆಲಾಮಿ ಮರ್ಕಜ್ ಬಂಗ್ಲೆವಾಲೆ ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಅವರ ಪೈಕಿ ಒಬ್ಬರು 13 – 02 – 2020 ರಂದು , ಉಳಿದ 21 ಜನರಲ್ಲಿ 12 ಜನರು ದಿನಾಂಕ : 10 – 03 – 2020 ರಂದು ಹಾಗೂ 9 ಜನರು ದಿನಾಂಕ : 12 – 03 – 2020 ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಿರುವುದು ಕಂಡುಬಂದಿರುತ್ತದೆ . ಈ 22 ಜನರ ಆರೋಗ್ಯ ತಪಾಸಣೆಯನ್ನು ಮಾಡಲಾಗಿರುತ್ತದೆ . ಅದರ ಪೈಕಿ ಒಬ್ಬರು ಸುಮಾರು ದಿನಗಳ ಹಿಂದೆಯೇ ಜಿಲ್ಲೆಗೆ ಆಗಿಮಿಸಿರುತ್ತಾರೆ ಅವರ ಆರೋಗ್ಯ ತಪಾಸನೆ ಮಾಡಲಾಗಿತ್ತು , ಸದರಿಯವರಿಗೆ ಯಾವುದೇ ರೋಗ ಲಕ್ಷಣಗಳು ಇರುವುದಿಲ್ಲ ಮತ್ತು 28 ದಿನಗಳ ಗೃಹ ನಿರ್ಬಂಧನ ಅವಧಿಯು ಸಹ ಮುಕ್ತಾಯವಾಗಿರುತ್ತದೆ . ಬಾಕಿ ಉಳಿದ ಒಟ್ಟು 21 ಜನರ ಆರೋಗ್ಯ ತಪಾಸಣೆ ನಡೆಸಿದ್ದು , ಎಲ್ಲಾ ಸದಸ್ಯರಿಗೆ ಯಾವುದೇ ರೋಗ ಲಕ್ಷಣಗಳು ಕಂಡುಬಂದಿರುವುದಿಲ್ಲ ಮತ್ತು ಇವರ 14 ದಿನಗಳ ಗೃಹ ನಿರ್ಬಂಧನ ಅವಧಿ ಮುಕ್ತಾಯವಾರುತ್ತದೆ . ಮುಂಜಾಗೃತಾ ಕ್ರಮವಾಗಿ ಸದರಿಯವರನ್ನು ಸರ್ಕಾರಿ ನಿರ್ಬಂಧನ ( Institutional Quarantine ) ದಲ್ಲಿ ಇಡಲಾಗಿರುತ್ತದೆ .

Please follow and like us:
error