ಕೊಪ್ಪಳ ಜಿಲ್ಲೆಯಲ್ಲಿ ಮತ್ತೆ ನಾಲ್ಕು ಪಾಜಿಟಿವ್ ಕೇಸ್ ಗಳು ಪತ್ತೆ

ಕೊಪ್ಪಳದಲ್ಲಿ ಸೋಮವಾರ ಮತ್ತೇ ನಾಲ್ಕು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಸೋಮವಾರ ಮತ್ತೇ ನಾಲ್ಕು ಕೊರೊನಾ ಕೇಸ್ ದೃಢಪಟ್ಟಿವೆ. ಯಲಬುರ್ಗಾ ತಾಲೂಕಿನ ಬಳಗೇರಾ ಗ್ರಾಮದಲ್ಲಿ P-7106ನ ಸಂಪರ್ಕಿತ 32 ವರ್ಷದ ವ್ಯಕ್ತಿಗೆ ಕೊರೊನಾ ಕನ್ಫರ್ಮ್ ಆಗಿದೆ. ಕುಷ್ಟಗಿಯ ತಾವರಗೇರಾದಲ್ಲು ಆರೋಗ್ಯ ಕೇಂದ್ರದ 27 ವರ್ಷದ ಯುವಕನಿಗೆ ಮತ್ತು ಕೊಪ್ಪಳ ತಾಲೂಕಿನ ಮುನಿರಾಬಾದ್‌ನ ನಿವಾಸಿ ಜಿಂದಾಲ್ ಕಂಪನಿಯ ಉದ್ಯೋಗಿಯಾಗಿರುವ 34 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹಾಗೆಯೇ ಜೂನ್ 19ರಂದು ಆಂಧ್ರಪ್ರದೇಶದ ಆಧೋನಿಯಿಂದ ಬಂದಿದ್ದ ಗಂಗಾವತಿ ತಾಲೂಕಿನ ಹಿರೇಜಂತಕಲ್ ಗ್ರಾಮದ 55 ವರ್ಷದ ಮಹಿಳೆಗೆ ಕೊರೊನಾ ದೃಢಪಟ್ಟಿದೆ.

ಸೋಮವಾರ ಕೊರೊನಾ ದೃಢಪಟ್ಟ ವ್ಯಕ್ತಿಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ. ತಾವರಗೇರಾ ವ್ಯಕ್ತಿ ಹೊರತುಪಡಿಸಿದರೆ ಉಳಿದ ಯಾರಿಗೂ ರೋಗಲಕ್ಷಣಗಳಿರಲಿಲ್ಲ

ಒಟ್ಟಾರೆ ಜಿಲ್ಲೆಯಲ್ಲೀಗ 33 ಕೊರೊನಾ ಕೇಸ್‌ಗಳ ಪೈಕಿ‌ 15 ಜನ ಗುಣಮುಖರಾಗಿದ್ದಾರೆ. ಓರ್ವ ಮಹಿಳೆ ಸಾವನ್ನಪ್ಪಿದ್ದು, 17ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Please follow and like us:
error