ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ಪಾಜಿಟಿವ್ ಪತ್ತೆ; ಇದೂ ಸಹ ಜಿಂದಾಲ್ ಸೋಂಕು

ಕೊಪ್ಪಳದ ಮರಳಿಯಲ್ಲಿ‌ ಮತ್ತೊಂದು‌ ಜಿಂದಾಲ್ ನಂಜು

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಗ್ರಾಮದಲ್ಲಿ ರವಿವಾರ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಜಿಂದಾಲ್‌ನಲ್ಲಿ ಕೆಲಸ ಮಾಡುತ್ತಿದ್ದ 32 ವರ್ಷದ ಮರಳಿ ಗ್ರಾಮದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಜೂನ್ 8 ರಂದು ಜಿಂದಾಲ್ ಕಂಪನಿಗೆ ಹೋಗಿ ಬಂದ ಬಳಿಕ ಜೂನ್ 14ರವರೆಗೆ ವ್ಯಕ್ತಿಯನ್ನು ಹೋಮ್ ಕ್ವಾರಂಟೈನ್‌ಗೆ ಸೂಚಿಸಲಾಗಿತ್ತು. ನಂತರ ಹೊಸಳ್ಳಿಯ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದ ವ್ಯಕ್ತಿಯ ಸ್ವ್ಯಾಬ್‌ನ್ನು ಜೂನ್ 18ರಂದು ಪರೀಕ್ಷೆಗೆ ಕಳಿಸಲಾಗಿತ್ತು. ಪರೀಕ್ಷೆಯ ಫಲಿತಾಂಶ ರವಿವಾರ ಬಂದಿದ್ದು, ಕೊರೊನಾ ದೃಢಪಟ್ಟಿದೆ. ಮನೆಯಲ್ಲಿನ ನಾಲ್ವರು ಹಾಗೂ ಕ್ವಾರಂಟೈನ್ ಕೇಂದ್ರದ ನಾಲ್ವರನ್ನು ಪ್ರಾಥಮಿಕ ಸಂಪರ್ಕಿತರು ಹಾಗೂ ಕ್ವಾರಂಟೈನ್ ಕೇಂದ್ರದ ಬೇರೆ ನಾಲ್ವರನ್ನಯ ದ್ವಿತೀಯ ಸಂಪರ್ಕಿತರು ಎಂದು ಪತ್ತೆ ಹಚ್ಚಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲೀಗ 29 ಕೊರೊನಾ ಕೇಸ್‌ಗಳ ಪೈಕಿ‌ 12 ಜನ ಗುಣಮುಖರಾಗಿದ್ದಾರೆ. ಓರ್ವ ಮಹಿಳೆ ಸಾವನ್ನಪ್ಪಿದ್ದು, ರವಿವಾರದ ಪ್ರಕರಣ ಸೇರಿದಂತೆ 16 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Please follow and like us:
error