ಕೊಪ್ಪಳ ಜಿಲ್ಲೆಯಲ್ಲಿ ಜನಾರ್ದನ ರೆಡ್ಡಿ ?

ಕಳೆದ ಎರಡು ಮೂರು ದಿನಗಳಿಂದ ಮಾಜಿ ಸಚಿವ, ಬಳ್ಳಾರಿ ಯ ಗಣಿದಣಿ ಎಂದೇ ಖ್ಯಾತರಾಗಿರುವ ಜನಾರ್ದನ ರೆಡ್ಡಿ  ಕೊಪ್ಪಳ ಜಿಲ್ಲೆಯಲ್ಲಿ ಠಿಕಾಣಿ ಹೂಡಿದ್ದಾರೆ. ಅಂಜನಾದ್ರಿ ಬೆಟ್ಟ, ಪಂಪಾ ಸರೋವರ, ಹುಲಿಗೆಮ್ಮ ಹೀಗೆ ಜಿಲ್ಲೆಯಲ್ಲಿ ಬೇರೆ ಬೇರೆ ಕಡೆ ಬೇಟಿ ನೀಡುತ್ತಿದ್ದಾರೆ. ಜೊತೆಗರ ಬಿಜೆಪಿಯ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದಾರೆ. ರಾಜಕೀಯ ವಿಚಾರ ಕೇಳಬೇಡಿ ಎನ್ನುತ್ತಲೇ ೧೫೦ ಮಿಷನ್ ಖಂಡಿತ ಮುಟ್ಟುತ್ತೇವೆ ಎನ್ನುತ್ತಾರೆ. 

ಸುಪ್ರೀಂ ಕೋರ್ಟ್ ನಲ್ಲಿ ನನ್ನ ವಿರುದ್ಧ ದಾಖಲಾಗಿದ್ದ 106 ಪ್ರಕರಣ ಖುಲಾಸೆಯಾಗಿವೆ.ಕೇವಲ ಎರಡು ಪ್ರಕರಣ ಮಾತ್ರ ಬಾಕಿ ಇವೆ.ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆಆದರೆ, ತಪ್ಪು ಗ್ರಹಿಕೆಯಿಂದ  ಪತ್ರಿಕೆಯಲ್ಲಿ 106 ಪ್ರಕರಣದಲ್ಲಿ ಅಪರಾಧ ಸಾಬೀತಾಗಿದೆ ಎಂದು ಬರೆಯಲಾಗಿದೆ ಜಾರಿ ನಿರ್ದೇಶನಾಲಯ ನನ್ನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ನಿರಾಕರಿಸಿದೆದೇವಿ ದರ್ಶನ ಪಡೆಯಲು ಹುಲಿಗಿಗೆ ಬಂದಿದ್ದೇನೆ, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲನಾವು ಸಣ್ಣವರಿದ್ದಾಗಿನಿಂದ ದೇವಸ್ಥಾನಕ್ಕೆ ಬರುತ್ತಿದ್ದೇವೆ ಕೊಪ್ಪಳ ತಾಲೂಕಿನ ಹುಲಿಗೆ ದೇವಸ್ಥಾನದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಅಂದರೆ ಗ್ರೌಂಡ್ ರೆಡಿಯಾಗಿದೆಯಾ ರೆಡ್ಡಿ ಎಂಟ್ರಿಗೆ? 

 

Please follow and like us:
error