ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಆತಂಕ; ಸ್ಯಾಂಪಲ್ ರಿಜಲ್ಟ್ ಗಾಗಿ ಕಾಯುತ್ತಿರುವ ಜಿಲ್ಲಾಡಳಿತ

ಕೊಪ್ಪಳ : ಬಾಗಲಕೋಟೆ ಜಿಲ್ಲೆಯಲ್ಲಿ ಮೇ 6 ರಂದು 13 ಕೊರೊನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದವು. ಅದರಲ್ಲಿದ್ದ p-681 ಮತ್ತು p-684 ಅವರ ಟ್ರಾವೆಲ್ ಹಿಸ್ಟರಿಯನ್ನ ಬಾಗಲಕೋಟೆ ಜಿಲ್ಲಾಡಳಿತ ಮೇ 7ರಂದು ಸಂಜೆ ಬಿಡುಗಡೆ ಮಾಡಿದೆ. ಈ ಟ್ರಾವೆಲ್ ಹಿಸ್ಟರಿ ಗಮನಿಸಿದರೆ ಬೆರಳೆಣಿಕೆಯ ಕೊರೊನಾ ಪಾಸಿಟಿವ್ ಕೇಸ್ ಹೊಂದಿದ್ದ ಗದಗ ಜಿಲ್ಲೆಯಲ್ಲಿ ದೊಡ್ಡ ಆತಂಕ ಮೂಡಿದೆ. ಯಾಕೆಂದರೆ ಟ್ರಾವೆಲ್ ಹಿಸ್ಟರಿಯಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ 8 ಹಳ್ಳಿಗಳ ಹೆಸರಿವೆ. ಹಾಗೆಯೇ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದ ಹೆಸರೂ ಸ್ಪಷ್ಟವಾಗಿರುವುದರಿಂದ ಬಹುತೇಕ ಸೇಫ್ ಆಗಿದ್ದ ಕೊಪ್ಪಳ  ಜಿಲ್ಲೆಯಲ್ಲಿ ಈಗ ಕೊರೋನಾ ಆತಂಕ ಮನೆಮಾಡಿದೆ.

ಕೊಪ್ಪಳ ಜಿಲ್ಲೆಯಲ್ಲಿ ನಿಲೊಗಲ್ ಗ್ರಾಮದ 18 ಜನರನ್ನು ಮೇ 7ರಂದು ಕ್ವಾರಂಟೈನ್ ಮಾಡಲಾಗಿದೆ. ಇವರೆಲ್ಲ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಡಾನಕ್‌ಶಿರೂರು ಗ್ರಾಮದ ಕೊರೊನಾ ಸೋಂಕು ದೃಢಪಟ್ಟ ವ್ಯಕ್ತಿಯೊಬ್ಬನ ಮಗಳ ಮದುವೆಯಲ್ಲಿ ಪಾಲ್ಗೊಂಡಿದ್ದರು. ಇವರ ಗಂಟಲು ದ್ರವದ ಸ್ಯಾಂಪಲ್‌ನ್ನು ಲ್ಯಾಬ್‌ಗೆ ಕಳಿಸಲಾಗಿದ್ದು ಇಂದು ಮಧ್ಯಾಹ್ನ  ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

p-683, p-688 ಹಾಗೂ p-691 ಟ್ರಾವೆಲ್ ಹಿಸ್ಟರಿಯಲ್ಲೂ ಗದಗ ಜಿಲ್ಲೆಯ ಸರ್ಜಾಪುರ, ಹಿರೇಹಾಳ, ಬಸರಕೋಡ ಹಾಗೂ ಹೊಳೆಹಳ್ಳಿ‌ ಹೆಸರುಗಳಿವೆ. P-681 ಮತ್ತು p-684 ಟ್ರಾವೆಲ್ ಹಿಸ್ಟರಿಯಲ್ಲಿ ಹಿರೇಹಾಳ, ಬಸರಕೋಡ, ಹೊಳೆಹಳ್ಳಿ, ಮುಶಿಗೇರಿ, ಶಾಂತಗಿರಿ, ಹೊಳೆಹಡಗಲಿ, ತೊಗಲದಿನ್ನಿ ಮತ್ತು ಕೊತಬಾಳ‌ ಗ್ರಾಮಗಳ ಹೆಸರಿದ್ದು, ಗದಗ ಜಿಲ್ಲೆಯ ಎಂಟೂ ಹಳ್ಳಿಗಳಲ್ಲಿ ಆತಂಕ ಮನೆ ಮಾಡಿದೆ.

Please follow and like us:
error