ಕೊಪ್ಪಳ ಜಿಲ್ಲೆಯಲ್ಲಿ ಕರ್ಪ್ಯೂ ಇಲ್ಲ : ತಪ್ಪು ಮಾಹಿತಿ ಹರಡಿದೆ- ಜಿಲ್ಲಾಧಿಕಾರಿ

ಕನ್ನಡನೆಟ್ ನ್ಯೂಸ್ ಕೊಪ್ಪಳ : ಜಿಲ್ಲೆಯಲ್ಲಿ ಅಗಸ್ಟ್ ಎರಡರವರೆಗೆ ಕರ್ಪ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎನ್ನುವ ತಪ್ಪು ಸುದ್ದಿ ಹರಡುತ್ತಿದೆ ಆ ರೀತಿಯಲ್ಲಿ ಯಾವುದೇ ಆದೇಶ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅವರು ಸುದ್ದಿ ಕಳಿಸಿದವರು ನಿಷೇದಾಜ್ಞೆಯನ್ನೇ ಕರ್ಪ್ಯೂ ಎಂದು ತಪ್ಪಾಗಿ ಟೈಪ್ ಮಾಡಿರುವುದರಿಂದ ಈ ಗೊಂದಲವುಂಟಾಗಿದೆ. ಜನತೆ ಆತಂಕ ಪಡಬೇಕಿಲ್ಲ ಎಂದು ಹೇಳಿದ್ದಾರೆ


ಆಗಸ್ಟ್ 02 ರವರೆಗೆ ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆಯವರಿಗೆ ಕರ್ಫ್ಯೂ: ಪಿ.ಸುನೀಲ್ ಕುಮಾರ್

ಕೊಪ್ಪಳ ಜೂ.): ಕೋವಿಡ್-19 ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಾಂಕ್ರಾಮಿಕ ರೋಗ ಕಾಯ್ದೆ-1897 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿಡ್-19 ರೆಗ್ಯೂಲೇಷನ್ಸ್,2020 ರ ಪ್ರಕಾರ ದಂಡ ಸಂಹಿತೆ ಪ್ರಕಿಯಾ ಸಂಹಿತೆ 1973 ರ ಕಲಂ 144 ರಡಿಯಲ್ಲಿ ಜೂನ್ 29 ರಿಂದ ಆಗಸ್ಟ್ 02 ರವರೆಗೆ ರಾತ್ರಿ 8 ಗಂಟೆಯಿAದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಈ ಆದೇಶದ ಪ್ರಕಾರ 5 ಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು, ರಾತ್ರಿ 8 ಗಂಟೆಯಿAದ ಬೆಳಗ್ಗೆ 5 ಗಂಟೆಯವರೆಗೆ ಸಾರ್ವಜನಿಕರು ಅನಗತ್ಯವಾಗಿ ಓಡಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಲ್ಲದೆ, ಜುಲೈ 5 ರ ಭಾನುವಾರದಿಂದ ಮುಂದಿನ ನಾಲ್ಕು ಭಾನುವಾರಗಳು ಅಂದರೆ ಜುಲೈ 12, 19, 26 ಮತ್ತು ಆಗಸ್ಟ್ 02 ರಂದು ಪೂರ್ಣ ದಿನದ ಲಾಕ್‌ಡೌನ್ ಮಾಡಲು ಆದೇಶಿಸಲಾಗಿದೆ. ಅಗತ್ಯ ಸರಕು ಸರಂಜಾಮುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್-19 ರ ಶುಶ್ರೂಷಾ ಉದ್ದೇಶಗಳನ್ನು ಮತ್ತು ಶಾಸನ ಬದ್ಧ ಹಾಗೂ ನಿಯಂತ್ರಣ ಪ್ರಕಾರ್ಯಗಳನ್ನು ಹೊರತುಪಡಿಸಿ 5 ಕ್ಕಿಂತ ಹೆಚ್ಚಿನ ಎಲ್ಲಾ ಸಮೂಹ ಒಗ್ಗೂಡುವಿಕೆಯನ್ನು ನಿಷೇಧಿಸಲಾಗಿದೆ.

ರಾಜ್ಯ ಸರ್ಕಾರದ ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿಗಳು ಜುಲೈ 10 ರಿಂದ ಬರುವ ಎಲ್ಲಾ ಶನಿವಾರಗಳಂದು ಆಗಸ್ಟ್ 08 ರವರೆಗೆ ಮುಚ್ಚಲ್ಪಡುತ್ತವೆ. ಎಲ್ಲಾ ಧರ್ಮಗಳ ಸಾಮೂಹಿಕ ಪ್ರಾರ್ಥನೆ ಮತ್ತು ಒಗ್ಗೂಡುವಿಕೆಯನ್ನು ನಿಷೇಧಿಸಲಾಗಿದೆ. ಶವ ಸಂಸ್ಕಾರಕ್ಕೆ 20 ಜನ, ವಿವಾಹ ಕಾರ್ಯಕ್ರಮಗಳಿಗೆ 50 ಜನರಿಗಿಂತ ಹೆಚ್ಚು ಜನರು ಸೇರುವಂತಿಲ್ಲ. ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡುಬAದ ಸ್ಥಳಗಳಲ್ಲಿ ನಿರ್ಬಂಧಿತ ವಲಯ ಹಾಗೂ ಬಫರ್ ವಲಯಗಳೆಂದು ಘೋಷಿಸಲಾಗಿದ್ದು, ನಿರ್ಬಂಧಿತ ವಲಯಗಳಲ್ಲಿ ಅವಶ್ಯಕ ವಸ್ತುಗಳು ಹಾಗೂ ಚಟುವಟಿಕೆಗಳಿಗೆ ಮಾತ್ರ ಅವಕಾಶವಿದ್ದು, ಸಾರ್ವಜನಿಕರ ಓಡಾಟಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.

ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error