ಕೊಪ್ಪಳ ಜಿಲ್ಲೆಯಲ್ಲಿ ಕರೋನಾ ರಣಕೇಕೆ : ಒಂದೇ ದಿನ ೨೨ ಪಾಜಿಟಿವ್ ಪ್ರಕರಣಗಳು

ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಇಂದು ಕರೋನಾ ರಣಕೇಕೆ ಹಾಕಿದೆ. ಒಂದೇ ದಿನ ೨೨ ಕರೋನಾ ಪಾಜಿಟವ್ ಪ್ರಕರಣಗಳು ವರದಿಯಾಗಿವೆ. ಗಂಗಾವತಿ ೯,ಕುಷ್ಟಗಿ ೩, ಕೊಪ್ಪಳ ೬, ಯಲಬುರ್ಗಾ ೪ ಪ್ರಕರಣಗಳು ದೃಡವಾಗಿವೆ. ೧೦ ವರ್ಷದೊಳಗಿನ ಮೂವರು ಮಕ್ಕಳಿಗೂ ಹೆಮ್ಮಾರಿ ವಕ್ಕರಿಸಿದೆ. ಜಿಲ್ಲೆಯಲ್ಲಿ ಈವರೆಗೆ ೪೪ ಪ್ರಕರಣಗಳು ವರದಿಯಾಗಿದ್ದವು. ಇಂದಿನ ೨೨ ಕೇಸ್ ಗಳೊಂದಿಗೆ ಒಟ್ಟು ೬೬ ಪ್ರಕರಣಗಳು ದೃಡವಾದಂತಾಗಿದೆ. ಇದರಲ್ಲಿ ಕುಷ್ಟಗಿ ಯ ನಂದಾಪುರದಲ್ಲಿ ಓರ್ವ ಮಹಿಳೆ ಹಾಗೂ ಪುರುಷನಿಗೆ, ಯಡ್ಡೋನಿ ಹಾಗೂ ಚಿಕ್ಕಬನ್ನಿಗೋಳದ ಇಬ್ಬರು ಮಹಿಳೆಯರಲ್ಲಿ ಪಾಜಿಟಿವ್ ದೃಡವಾಗಿದೆ.

ಕೊಪ್ಪಳ ತಾಲೂಕಿನ ಹುಲಿಗಿ, ಹೊಸಲಿಂಗಾಪೂರ, ಹಿರೇಬನ್ನಿಗೋಳ, ಗಬ್ಬೂರಿನಲ್ಲಿ ಪ್ರಕರಣಗಳು ಪತ್ತೆಯಾಗಿವೆ

ಯಲಬುರ್ಗಾ ತಾಲೂಕಿನ ತಳಕಲ್, ಚಿಕ್ಕೇನಕೊಪ್ಪ, ಗೊರ್ಲೆಕೊಪ್ಪ, ಯಡ್ಡೋಣಿಯಲ್ಲಿ ಹಾಗೂ

ಗಂಗಾವತಿ ತಾಲೂಕಿನ ಶ್ರೀರಾಮನಗರ, ಕಾರಟಗಿ, ಅಡವಿಬಾವಿ ಹಾಗೂ ಗಂಗಾವತಿಯಲ್ಲಿ ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ. ದಿನೇ ದಿನೇ ಹೆಚ್ಚಾಗುತ್ತಿರುವ ಪ್ರಕರಣಗಳು ಜನತೆಯಲ್ಲಿ ಆತಂಕ ಮೂಡಿಸಿವೆ

Please follow and like us:
error