ಕೊಪ್ಪಳ ಜಿಲ್ಲೆಗೆ ಬಿಗ್ ಶಾಕ್ : ಒಂದೇ ದಿನ 82 ಪ್ರಕರಣಗಳು

Kannadanet NEWS ಕೊಪ್ಪಳ : ಜಿಲ್ಲೆಯಲ್ಲಿ ದಿನೇ ದಿನೇ ಕರೋನಾ ಪಾಜಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ಒಂದೇ ದಿನ ಜಿಲ್ಲೆಯಲ್ಲಿ 82 ಪ್ರಕರಣಗಳು ವರದಿಯಾಗಿವೆ. ಕುಕನೂರು ಪೋಲಿಸ್ ಠಾಣೆಯ ಮೂವರು ಹೆಚ್ ಸಿ ಗಳಿಗೆ ಪಾಜಿಟಿವ್ ಕನ್ಪರ್ಮ ಆಗಿರುವುದರಿಂದ  ಪೋಲಿಸ್ ಠಾಣೆ ಸೀಲಡೌನ್ ಮಾಡಲಾಗಿದೆ. ಅಲ್ಲದೇ ಗಂಗಾವತಿ ತಾಲ್ಲೂಕಿನಲ್ಲಿ 27 ಪ್ರಕರಣಗಳು ವರದಿಯಾಗಿವೆ. ಕೊಪ್ಪಳ,ಕುಷ್ಟಗಿ ತಾಲೂಕಿನಲ್ಲಿ ಉಳಿದ ಪ್ರಕರಣಗಳು ವರದಿಯಾಗಿವೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ೩೩೨ ಪಾಜಿಟಿವ್ ಪ್ರಕರಣಗಳು ಪತ್ತೆಯಾದಂತಾಗಿವೆ. ಈವರೆಗೆ ೮ ಜನ ಸಾವನ್ನಪ್ಪಿದ್ದಾರೆ. ೧೦೬ ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಕುಷ್ಟಗಿ 18
ಕೊಪ್ಪಳ 24
ಗಂಗಾವತಿ 27
ಯಲಬುರ್ಗಾ 13

Please follow and like us:
error