ಕೊಪ್ಪಳ ಜಿಲ್ಲೆಗೆ ಟಾಪರ್ ಸಮಿಯುದ್ದಿನ್‌ಗೆ ಶುಭಾ ಕೊರಿದ ಎಸ್.ಐ.ಓ

ಕೊಪ್ಪಳ, ಮೇ. ೦೬: ಗ್ಯಾರೇಜ್ ಕಾರ್ಮಿಕನ ಮಗ ಎಸ್‌ಎಸ್‌ಎಲ್‌ಸಿಯಲ್ಲಿ ೬೨೫ಕ್ಕೆ ೬೧೭ ಅಂಕಗಳಿಸಿ ಕೊಪ್ಪಳ ಜಿಲ್ಲೆಗೆ ಟಾಪರ್ ಆಗಿ ಹೋರ ಹೂಮ್ಮಿದ ಮಹಮ್ಮದ್ ಸಮಿಯುದ್ದಿನ್‌ಗೆ ಸ್ಟುಡೆಂಟ್ ಇಸ್ಲಾಮಿಕ್ ಅರ್ಗನೈಜೆಶನ್ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ವಿದ್ಯಾರ್ಥಿಯ ಮನೆಗೆ ಹೋಗಿ ಅಭಿನಂದಿಸಿ ಶುಭಾ ಹಾರೈಸಿದರು, ಮತ್ತು ಮುಂದಿನ ವಿಧ್ಯಾಬ್ಯಾಸಕ್ಕಾಗಿ ಸಹಾಯ ಹಾಗೂ ಸಲಹೆಯನ್ನು ಕೊಡುತ್ತೆವೆ ಎಂದು ಭರವಸೆ ನೀಡಿದರು. ಅದೇ ರೀತಿಯಾಗಿ ಕೊಪ್ಪಳದ ಡಿ.ಡಿ.ಪಿ.ಐಯವರಿಗೆ ಭೇಟಿಯಾಗಿ ಕೊಪ್ಪಳ ಜಿಲ್ಲೆ ೨೦೧೮-೧೯ರ ಸಾಲಿನಲ್ಲಿ ಶೇಕಡವಾರು ೧೯ನೇ ಸ್ಥಾನದಿಂದ ೧೬ನೇಸ್ಥಾನಕ್ಕೆರಿದ್ದರಿಂದ ಅವರಿಗೂ ಅಭಿನಂದಿಸಿ ಶುಭಾ ಕೊರಿದರು, ಈ ಸಂದರ್ಭದಲ್ಲಿ ಎಸ್.ಐ.ಓ ಜಿಲ್ಲಾ ಕಾರ್ಯದರ್ಶಿ ಜಕ್ರಿಯಾ ಖಾನ್, ಎಸ್.ಐ.ಓ ಸ್ಥಾನೀಯ ಘಟಕದ ಅಧ್ಯಕ್ಷ ಫಹಾದ್ ಹುಸೇನ್, ಸ್ಥಾನೀಯ ಕಾರ್ಯದರ್ಶಿ ಫುರ್ಖಾನ್ ಅಲಿ, ಅರ್ಫೂಜ್, ಆದಿಲ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

Please follow and like us:
error