ಕೊಪ್ಪಳ ಜಿಲ್ಲೆಗೆ ಕರೋನಾ ಶಾಕ್ : ಒಂದೇ ದಿನ ೬ ಪಾಜಿಟಿವ್ ಪ್ರಕರಣಗಳು

ಕೊಪ್ಪಳ : ಇವತ್ತು ಒಂದೇ ದಿನ ಕೊಪ್ಪಳದಲ್ಲಿ ೬ ಪಾಜಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಪ್ರಕರಣಗಳು ಬೆಳಕಿಗೆ ಬಂದಿದ್ದು ಕರೋನಾ ಸಮುದಾಯಕ್ಕೆ ಹರಡಿದೆ ಎನ್ನುವ ಆತಂಕ ಶುರುವಾಗಿದೆ.
ಕನಕಗಿರಿಯ 50 ವರ್ಷದ ಪುರುಷ, ಗಂಗಾವತಿಯ ಡಾಣಾಪುರದ 52 ವರ್ಷದ ಪುರುಷ, ಕಾರಟಗಿ ತಿಮ್ಮಾಪುರದ 23 ವರ್ಷದ ಮಹಿಳೆ, ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ 60 ವರ್ಷದ ಪುರುಷ, ಕಾರಟಗಿಯ 45 ವರ್ಷದ ಮಹಿಳೆ ಹಾಗೂ ಗಂಗಾವತಿಯ 18 ವರ್ಷದ ಯುವಕನಿಗೆ ಸೋಂಕು ದೃಢವಾಗಿದೆ. ಎರಡು ಪ್ರದೇಶಗಳನ್ನು ಈಗಾಗಲೇ ಸೀಲ್ ಡೌನ್ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.
ಗಂಗಾವತಿಯ ಲಿಂಗರಾಜ ಕ್ಯಾಂಪ್ ಮತ್ತು ಢಣಾಪೂರ ಗ್ರಾಮ ಸಿಲ್ ಡೌನ್
ಢಣಾಪೂರ ಗ್ರಾಮದಲ್ಲಿ ಮನೆ ಬಿಟ್ಟು ಹೊರಗೆ ಹೋಗಿರದ ವೃದ್ಧನಿಗೆ ಕೋವಿಡ್ 19 ದೃಢ ವಾಗಿದೆ. 61 ವರ್ಷದ ವೃದ್ಧನಿಗೆ ಕೋವಿಡ್ ‌19 ದೃಢವಾಗಿದೆ. ಮಗ ಬಟ್ಟೆ ವ್ಯಾಪಾರಿ ಎನ್ನಲಾಗಿದೆ. ಈಗಾಗಲೇ ಕರೋನಾ ಪಾಜಿಟಿವ್ ಬಂದಿರುವವರನ್ನು ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಒಟ್ಟು ೩೧ ಜನ ಪ್ರಾಥಮಿಕ ಸೋಂಕಿತರನ್ಬು ಪತ್ತೆ ಮಾಡಲಾಗಿದೆ

Please follow and like us:
error