ಕೊಪ್ಪಳ ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೊಂದಾಯಿಸಲು ಸೂಚನೆ

ಕೊಪ್ಪಳ ಅ. ): ಕೊಪ್ಪಳ ಜಿಲ್ಲಾ ಯುವ ಸಬಲೀಕಣ ಮತ್ತು ಕ್ರೀಡಾ ಇಲಾಖೆ ವತಿಯಿಂದ “ಕೊಪ್ಪಳ ಜಿಲ್ಲಾ ಮಟ್ಟದ ಯುವಜನೋತ್ಸವ” ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಭಾಗವಹಿಸಲಿಚ್ಛೀಸುವರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು ಎಂದು ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸ್ಪರ್ಧೆಗಳ ವಿವರ : ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಗಳ ವಿವರ ಇಂತಿದೆ. 15 ನಿಮಿಷದ ಜನಪದ ನೃತ್ಯ- (ಗರಿಷ್ಠ 20 ಜನರು), 45 ನಿಮಿಷದ ನಾಟಕ (ಹಿಂದಿ ಅಥವಾ ಇಂಗ್ಲೀಷ)-12 ಜನರು, 5 ನಿಮಿಷದ ವೈಯಕ್ತಿಕ ಭರತನಾಟ್ಯ, 5 ನಿಮಿಷದ ವೈಯಕ್ತಿಕ ತಬಲ ಸೋಲೊ, 15 ನಿಮಿಷದ ವೈಯಕ್ತಿಕ ಕೊಳಲು, 15 ನಿಮಿಷದ ಶಾಸ್ತ್ರಿಯ ಸಂಗೀತ (ಹಿಂದೂಸ್ತಾನಿ), 15 ನಿಮಿಷದ ವೈಯಕ್ತಿಕ ವೀಣಾ ಸೋಲೊ, 15 ನಿಮಿಷದ ವೈಯಕ್ತಿಕ ಮೃದಂಗಂ, 07 ನಿಮಿಷದ ಜನಪದ ಗೀತೆ (10 ಜನರು), 5 ನಿಮಿಷದ ಆಶುಭಾಷಣ (ಹಿಂದಿ ಅಥವಾ ಇಂಗ್ಲೀಷ), 15 ನಿಮಿಷದ ವೈಯಕ್ತಿಕ ಕುಚುಪುಡಿ ನೃತ್ಯ, 10 ನಿಮಿಷದ ವೈಯಕ್ತಿಕ ಗಿಟಾರ್ ಸೋಲೊ, 10 ನಿಮಿಷದ ವೈಯಕ್ತಿಕ ಹಾರ್ಮೋನಿಯಂ, 15 ನಿಮಿಷದ ಶಾಸ್ತ್ರೀಯ ಸಂಗೀತ (ಕರ್ನಾಟಕ), 15 ನಿಮಿಷದ ವೈಯಕ್ತಿಕ ಸಿತಾರ್ ಸೋಲೊ ಹಾಗೂ ತಲಾ 15 ನಿಮಿಷದ ವೈಯಕ್ತಿಕ ಮಣಿಪುರಿ, ಓಡಿಸ್ಸಿ, ಕತಕ್ ಸ್ಪರ್ಧೆಗಳು ನಡೆಯಲಿವೆ.
ಸ್ಪರ್ಧೆಗಳಲ್ಲಿ 15 ರಿಂದ 29 ವರ್ಷದೊಳಗಿನ ಯುವಕ/ಯುವತಿಯರು, ಕಾಲೇಜು ಮಹಿಳಾ-ಪುರುಷ ವಿದ್ಯಾರ್ಥಿಗಳು, ಸಂಘ-ಸಂಸ್ಥೆ ಸದಸ್ಯರು, ಸಂಗೀತ ಸಂಸ್ಥೆಗಳ ಸದಸ್ಯರು ಕಲಾವಿದರು ಭಾಗವಹಿಸಬಹುದಾಗಿದೆ. ಭಾಗವಹಿಸುವ ಆಸಕ್ತರು ಸಂಬಂಧಿಸಿದ ತಾಲೂಕಿನ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಗಳಲ್ಲಿ ಆಧಾರ ಕಾರ್ಡ ಝರಾಕ್ಸ ಪ್ರತಿಯೊಂದಿಗೆ ತಮ್ಮ ಹೆಸರು ಮತ್ತು ಭಾಗವಹಿಸುವ ಸ್ಪರ್ದೇಯ ಹೆಸರುಗಳನ್ನು ಅ. 31 ರೊಳಗಾಗಿ ನೊಂದಾಯಿಸಬೇಕು. ಜಿಲ್ಲಾ ಮಟ್ಟದ ಸ್ಪರ್ದೇಯಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾದ ತಂಡವನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು. ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಸ್ಪರ್ಧಾಳುಗಳಿಗೆ ಪ್ರಯಾಣ ಭತ್ಯೆಯನ್ನು ಇಲಾಖೆಯಿಂದ ಭರಿಸಲಾಗುವುದು.
ಜಿಲ್ಲಾ ಮಟ್ಟದ ಸ್ಪರ್ದೇಗಳಲ್ಲಿ ನೊಂದಣಿಯಾಗಿ ಭಾಗವಹಿಸಿ ಸ್ಪರ್ದೆಯ ಗುರುತು ಪತ್ರ ತೋರಿಸಿದ ಎಲ್ಲಾ ಸ್ಪರ್ದಾಳುಗಳಿಗೆ ತಾಲೂಕ ಕೇಂದ್ರ ಸ್ಥಾನದಿಂದ ಸಂಘಟನಾ ಸ್ಥಾನದವರೆಗೆ ಸಾಮಾನ್ಯ ಪ್ರಯಾಣ ಭತ್ಯೆ ನೀಡಲಾಗುವುದು. ಇಲಾಖೆಯಲ್ಲಿ ನೊಂದಣಿಯಾದ ಎಲ್ಲಾ ಯುವಕ/ ಯುವತಿಯರ ಸಂಘ ಮತ್ತು /ಸಂಸ್ಥೆಯ ವತಿಯಿಂದ ಸ್ಪರ್ಧೇಗಳಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. ಕಾರ್ಯಕ್ರಮದ ದಿನ ಬೆಳಿಗ್ಗೆ 9.00 ಕ್ಕೆ ಹಾಜರಾಗಿ ನೊಂದಣಿ ಮಾಡಿಕೊಳ್ಳಬೇಕು. ಭಾಗವಹಿಸಿದ ಸ್ಪರ್ಧಾಳುಗಳಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಎಲ್ಲಾ ಸ್ಪರ್ಧಾಳುಗಳಿಗೆ ವಯೋಮಿತಿ ನಿರ್ಭಂದವಿರುವುದರಿಂದ ಆಧಾರ ಕಾರ್ಡ ಕಡ್ಡಾಯವಾಗಿರುತ್ತದೆ. ವೈಯಕ್ತಿಕ ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತ ಸ್ಪರ್ದಾಳುಗಳಿಗೆ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ನಿಯೋಜಿಸಲಾಗುವುದು. ವಿವಿಧ ತಾಲೂಕುಗಳಿಂದ ಭಾಗವಹಿಸುವ ಸ್ಪರ್ಧಾಳುಗಳು, ತಮ್ಮ ಹೆಸರುಗಳನ್ನು ಆಯಾ ತಾಲೂಕು ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಗಳಲ್ಲಿ ನೊಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ತಾಲೂಕಿನ ಶರಣಬಸವ ಬಂಡಿಹಾಳ ಮೊ.ಸಂ. 9591292420, 9036773070, ಕುಷ್ಟಗಿ ತಾಲೂಕು – ಮಹಾಂತೇಶ ಜಾಲಿಗಿಡದ ಇವರ ಮೊ.ಸಂ. 9945501033, ಯಲಬುರ್ಗಾ ತಾಲೂಕು – ಹನುಮಂತಪ್ಪ ಮೊ.ಸಂ. 8970288857, ಗಂಗಾವತಿ ತಾಲೂಕು – ರಂಗಸ್ವಾಮಿ ಮೊ.ಸಂ. 7411755523, 7975189364, ಇವರನ್ನು ಅಥವಾ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರ ಕಾರ್ಯಾಲಯದಲ್ಲಿ ಖುದ್ದಾಗಿ ಹಾಗೂ ದೂರವಾಣಿ ಸಂಖ್ಯೆ 9480886475, 7899432227, 8095936395 ಮೂಲಕವು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
=======
ಅನಾಮಧೇಯ ವ್ಯಕ್ತಿ ಸಾವು : ಪತ್ತೆಗೆ ಸಹಕರಿಸಲು ಮನವಿ
ಕೊಪ್ಪಳ ಅ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 40 ವರ್ಷದ ಅನಾಮಧೇಯ ಮೃತಪಟ್ಟಿದ್ದು, ಅಪರಿಚಿತ ಮೃತ ವ್ಯಕ್ತಿಯ ಪತ್ತೆಗೆ ಸಹಕರಿಸಲು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅ. 04 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ವೇ-ಬ್ರೀಡ್ಜ್ ಹತ್ತಿರದಿಂದ ಬರುತ್ತಿರುವಾಗ ಸುಮಾರು 40 ವರ್ಷ ವಯಸ್ಸಿನ ಗಂಡಸು ಈ ಅಪರಿಚಿತ ವ್ಯಕ್ತಿಯು ಬಿಕ್ಷೇ ಬೇಡುವಂತೆ ಕಾಣುತ್ತಿದ್ದು, ಆತನು ಯಾವುದೋ ರೋಗದಿಂದ ಬಳಲಿ ಬಿಸಿಲಿನ ಜಳಕ್ಕೆ ಕೇಳಗೆ ಬಿದ್ದಿದ್ದು, ಇತನನ್ನು ನೋಡಿ ನಾನು ಮತ್ತು ನಮ್ಮೂರ ಹನುಮಂತಪ್ಪ ಅವರಿಗೆ ಕೊಪ್ಪಳಕ್ಕೆ ಬರುತ್ತಿದ್ದ ಒಂದು ಆಟೋದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ನಂತರ ಅ. 22 ರಂದು ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಈ ಅಪರಿಚಿತ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಹಲಗೇರಿ ಗ್ರಾಮದ ಸುಭಾಷ ಅಬ್ಬಿಗೇರಿ ಅವರು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಠಾಣೆಗೆ ದೂರು ನೀಡಿದ್ದಾರೆ. ಈ ಮೃತ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಕೊಪ್ಪಳ ಪೊಲೀಸ್ ಕಂಟ್ರೋಲ್ ರೂಂ: 08539-230100 ಮತ್ತು 230222, ಪಿ.ಎಸ್.ಐ ಗ್ರಾಮೀಣ ಪೊಲೀಸ ಠಾಣೆ ಕೊಪ್ಪಳ ಮೊ.ಸಂ. 9480803746, ದೂ.ಸಂ. 08539-221333 ಇಲ್ಲಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Please follow and like us:
error