ಕೊಪ್ಪಳ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೇ ಯಶಸ್ವಿ

ಕೊಪ್ಪಳ : ಇತ್ತೀಚಿಗೆ ನಗರದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ ಅಡಿಯಲ್ಲಿ ಕೊಪ್ಪಳ ಜಿಲ್ಲಾ ಕರಾಟೆ ಶಿಕ್ಷಕರ ಸಂಘ ಮತ್ತು ಕೊಪ್ಪಳ ಜಿಲ್ಲಾ ಕರಾಟೆ ಕ್ರೀಡಾ ಅಸೋಶಿಯೇಶನ್ ವತಿಯಿಂದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೇಯನ್ನು ಆಯೋಜಿಸಲಾಗಿತ್ತು.
ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎ. ಬಸವರಾಜ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ ಭಾಗವಹಿಸುವು ಮುಖ್ಯ ಸೋತಂತಹ ವಿದ್ಯಾರ್ಥಿಗಳು ಗಿದ್ದಂತವರಿಗೆ ಬೆನ್ನುತಟ್ಟಿ ರಾಜ್ಯಮಟ್ಟದ ಕರಾಟೆ ಸ್ಪರ್ಧೇಯಲ್ಲಿಯೂ ಸಹ ವಿಜೇತರಾಗಿ ಬನ್ನಿ ಎಂದು ಶುಭಾ ಹಾರೈಸಿ ಕಳುಹಿಸಿಕೊಡಿ. ಮುಂಬರುವ ದಿನಗಳಲ್ಲಿ ಸೋತಂತವರು ಸಹಿತ ಹೆಚ್ಚಿನ ತರಬೇತಿಯನ್ನು ಪಡೆದು ನೀವು ಕೂಡಾ ವಿಜೇತರಾಗಿ ಸಾಧನೆಯನ್ನು ಮಾಡಿ ಎಂದು ಕರೆ ನೀಡಿದರು.
ನಂತರ ಕರಾಟೆ ಸ್ಪರ್ಧೇಯ ಉಸ್ತುವಾರಿಯನ್ನು ವಹಿಸಕೊಂಡಂತಹ ಕರಾಟೆ ಸಂಘದ ಜಿಲ್ಲಾಧ್ಯಕ್ಷ ಮೌನೇಶ ಎಸ್. ವಡ್ಡಟ್ಟಿ ಮಾತನಾಡಿ ಜಿಲ್ಲೆಯಿಂದ 120ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಸಹಕಾರ ಹಾಗೂ ಪ್ರೋತ್ಸಾವನ್ನು ನೀಡಿದ್ದಾರೆ. ಈ ಕಾರ್ಯಕ್ರಮವನ್ನು ಎರಡನೇ ಬಾರಿಗೆ ಆಯೋಜಿಸಿದ್ದು ಜಿಲ್ಲೆಯ ಮಕ್ಕಳಿಗೆ ಆಟದಲ್ಲಿ ಅನ್ಯಾಯವಾಗಬಾರದೆಂದು ದಾವಣಗೇರಿ, ಹಾವೇರಿ ಹಾಗೂ ಗದಗ ಜಿಲ್ಲೆಗಳಿಂದ ನೂರಿತ ನಿರ್ಣಾಯಕರನ್ನು ಕರೆ ತಂದು ಸ್ಪರ್ಧೇಯನ್ನು ನಡೆಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಗೆಲವುವನ್ನು ಸಾಧಿಸಿ ಇದೇ ನವ್ಹಂಬರ ಕೊನೆಯ ವಾರದಲ್ಲಿ ಗದಗನಲ್ಲಿ ರಾಜ್ಯ ಮಟ್ಟದ ಕರಾಟೆ ಸ್ಪರ್ಧೇಯಲ್ಲಿಯೂ ಸಹ ಗೆಲುವನ್ನು ಸಾಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕೊಪ್ಪಳ ಜಿಲ್ಲೆಗೆ ಕೀರ್ತಿ ತರಬೇಕೆಂದು ತಿಳಿಸಿದರು.
ಈ ಸಂದರ್ಭಧಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಯಾದ ರಾಜೇಶ ನಾಡಿಗೇರ, ವೀರಭದ್ರಯ್ಯ, ನಿರ್ಣಾಯಕರಾದ ಡಿ.ಬಾಷಾ ಪ್ರಕಾಶ, ಸಲೀಂ, ರಿಯಾಜ, ದೈ.ಶಿಕ್ಷಕರಾದ ಬಿ,ಎಸ್ ಗೌಡರ್, ರೇಣುಕಾ, ತರಬೇತಿದಾರರಾದ ದೇವಪ್ಪ ಕಲ್ಲನವರ, ವಿಠ್ಠಲ್ ಹೆಚ್, ಸೋಮಲಿಂಗ, ಸಂತೋಷಕುಮಾರ, ಅಶೋಕ ನರಗುಂದ, ಅನ್ವರ, ಶ್ರೀಕಾಂತ ಕಲಾಲ, ಸೈಯದ್ ಹೆಚ್ ಇತರರು ಇದ್ದರು.

Please follow and like us:
error