ಕೊಪ್ಪಳ ಜಿಲ್ಲಾ ಪಂಚಾಯತ್‌ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ : ವಿಶ್ವನಾಥ ರೆಡ್ಡಿ ಸ್ಪಷ್ಟನೆ


ಕೊಪ್ಪಳ ಮಾ. : ಕೊಪ್ಪಳ ಜಿಲ್ಲಾ ಪಂಚಾಯತ್ ವತಿಯಿಂದ 2019-20  ಸಾಲಿನ ಅನಿರ್ಭಂದಿತ ಅನುದಾನ ಯೋಜನೆಯಡಿ 103.87 ಲಕ್ಷ ರೂ.ಗಳ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳು ಬೋಗಸ್ ನಡೆದಿರುವುದಿಲ್ಲ ಎಂದು ಜಿ.ಪಂ. ಅಧ್ಯಕ್ಷ ಹೆಚ್.ವಿಶ್ವನಾಥ ರೆಡ್ಡಿ ಅವರು ಸ್ಪಷ್ಟನೆ ನೀಡಿದ್ದಾರೆ. 2019-20 ನೇ ಸಾಲಿನ ಜಿಲ್ಲಾ ಪಂಚಾಯತ್  ಅಭಿವೃದ್ಧಿ (ಶಾಸನ ಬದ್ಧ) ಅನುದಾನ ರೂ. 103.87 ಲಕ್ಷಗಳ ಕಾಮಗಾರಿಗಳು ಬೋಗಸ್ ನಡೆದಿದ್ದು,  ಇತ್ತೀಚೆಗೆ (ಫೆ.25) ಹಣ ದುರ್ಬಳಕೆ ಆಗಿದೆ ಎಂದು ಆರೋಪಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದರ ಹಿನ್ನಲೆ ನಾನು ಇದರ ಬಗ್ಗೆ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಪಂಚಾಯತಿ ಅಧಿಕಾರಿಗೆ ಸೂಚಿಸಿದ್ದು,  ಇದರ ಬಗ್ಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತನಿಖೆ ನಡೆಸಿದ್ದು, ಯಾವುದೇ ಕಾಮಗಾರಿಗಳು ನಡೆದಿರುವುದಿಲ್ಲ ಮತ್ತು ಅನುದಾನ ದುರ್ಬಳಕೆ ಆಗಿಲ್ಲ ಎಂದು ವರದಿ ನೀಡಿದ್ದಾರೆ. ಕೊಪ್ಪಳ ಜಿಲ್ಲಾ ಪಂಚಾಯತಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ಈವರೆಗೂ ಪಾರದರ್ಶಕ ಆಡಳಿತ ನಡೆಸಿಕೊಂಡು ಬಂದಿದ್ದು, ಇನ್ನೂ ಮುಂದಾದರೂ ಪಾರದರ್ಶಕವಾಗಿ ಆಡಳಿತ ನಡೆಸುತ್ತೇನೆ.  ಜಿ.ಪಂ. ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದ ಬಗ್ಗೆ ಸಾರ್ವಜನಿಕವಾಗಲಿ, ಸಂಘ-ಸAಸ್ಥೆಗಳಾಗಲಿ ಅವ್ಯವಹಾರ ನಡೆದ ಬಗ್ಗೆ ಪೂರಕ ದಾಖಲಾತಿಗಳ ಸಮೇತ ಜಿ.ಪಂ. ಸಿಇಒ ಕಚೇರಿಗಳಾಗಲಿ ಅಥವಾ ಜಿ.ಪಂ. ಅಧ್ಯಕ್ಷರ ಕಚೇರಿಗಳಾಗಲಿ ದೂರು ನೀಡಿದಲ್ಲಿ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error