ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅವಿರೋಧ ಆಯ್ಕೆ

ಜಿ.ಎಸ್. ಗೋನಾಳ ರಾಜ್ಯ ಕಾರ್ಯಕಾರಣಿ ಸದಸ್ಯ, ಸಾದಿಕ್ ಅಲಿ ಅಧ್ಯಕ್ಷ,
ಎನ್.ಎಂ. ದೊಡ್ಡಮನಿ ಪ್ರಧಾನ ಕಾರ್ಯದರ್ಶಿ

ಕೊಪ್ಪಳ – ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯ ಸ್ಥಾನಕ್ಕೆ ಹಿರಿಯ ಪತ್ರಕರ್ತ ಜಿ.ಎಸ್.ಗೋನಾಳ, ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಪತ್ರಕರ್ತ ಕರ್ನಾಟಕ ಮಾಧ್ಯಮ ಅಕಾಡಮಿ 2017 ರ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕøತ ಎಂ.ಸಾದಿಕ ಅಲಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪತ್ರಕರ್ತ ಎನ್.ಎಂ.ದೊಡ್ಡಮನಿ ಸೇರಿದಂತೆ ವಿವಿಧ ಸ್ಥಾನಕ್ಕೆ ಅವಿರೋಧ ಆಯ್ಕೆ ಯಾದರು ಎಂದು ಚುನಾವಣಾಧಿಕಾರಿಯಾಗಿರುವ ಸಹಕಾರಿ ಸಂಘಗಳ ಇಲಾಖೆಯ ಅಧಿಕಾರಿ ಬಸಪ್ಪ ಗಾಳಿಯವರು ಘೋಷಿಸಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅದರಂತೆ ಹನುಮಂತ ಹಳ್ಳಿಕೇರಿ ಜಿಲ್ಲಾ ಉಪಾಧ್ಯಕ್ಷ ಕೇಂದ್ರ ಸ್ಥಾನ, ನಾಗರಾಜ್ ವೈ. ಹಾಗೂ ಬಸವರಾಜ್ ತಮ್ಮಣ್ಣವರ ಗ್ರಾಮೀಣ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡಿದ್ದಾರೆ. ಜಿಲ್ಲಾ ಕಾರ್ಯದರ್ಶಿ ಕೇಂದ್ರ ಸ್ಥಾನಕ್ಕೆ ವೀರಣ್ಣ ಕಳ್ಳಿಮನಿ, ಗ್ರಾಮೀಣ ಕಾರ್ಯದರ್ಶಿ ಸ್ಥಾನಕ್ಕೆ ಪವನ್ ದೇಶಪಾಂಡೆ ಮತ್ತು ಉಮೇಶ್ ಅಬ್ಬಿಗೇರಿ ಹಾಗೂ ಖಜಾಂಚಿಯಾಗಿ (ಕೋಶಾಧ್ಯಕ್ಷ) ಸಿರಾಜ್ ಬಿಸರಳ್ಳಿ ಅವಿರೋಧ ಆಯ್ಕೆಗೊಂಡಿದ್ದು ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಹಿರಿಯ ಪತ್ರಕರ್ತರಾದ ಹರೀಶ್ ಹೆಚ್.ಎಸ್. ದೇವಪ್ಪ ನಾಗನೂರ, ರಾಜಾಬಕ್ಷಿ ಹೆಚ್.ವಿ. ಹನುಮೇಶ್ ಜಿ. ಮ್ಯಾಗಳಮನಿ, ಶಿವರಾಜ್ ನುಗ್ಗಡೋಣಿ ಕೊಟ್ರೇಶ ಜಿ.ವಿ. ಪ್ರಶಾಂತ ಪಾಟೀಲ್, ರುದ್ರಗೌಡ ಪಾಟೀಲ್, ರಾಜು ಬಿ.ಆರ್. ಶಿವಕುಮಾರ ಕೆ. ಮಹ್ಮದ್ ಖಲೀಲ ಉಡೇವು, ಬಸವರಾಜ್ ತೊಂಡಿಹಾಳ. ಫಕೀರಪ್ಪ ಗೋಟೂರು, ಮುದಕನಗೌಡ ಪಾಟೀಲ್, ಈರಣ್ಣ ಬಡಿಗೇರ್ ರವರು ಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಕಾರ್ಯಕಾರಣಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಯಾಗಿರುವ ಸಹಕಾರಿ ಸಂಘಗಳ ಇಲಾಖೆಯ ಅಧಿಕಾರಿ ಬಸಪ್ಪ ಗಾಳಿಯವರು ಘೋಷಿಸಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.