ಕೊಪ್ಪಳ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿಗಣನೆ : ಡಿಸಿ


ಕೊಪ್ಪಳ ಏ. 02 ): ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಕೊಪ್ಪಳದ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಇನ್ನುಮುಂದೆ ಸಾಮಾನ್ಯ ಚಿಕಿತ್ಸೆ ಲಭ್ಯವಿರುವುದಿಲ್ಲ. ಆದ್ದರಿಂದ ಕೊಪ್ಪಳ ಜಿಲ್ಲೆಗೆ ಬರುವ ಒಳ ಮತ್ತು ಹೊರರೋಗಿಗಳಿಗೆ 09 ಆಸ್ಪತ್ರೆಗಳಲ್ಲಿ ಚಿಕಿತ್ಸಾ ವ್ಯವಸ್ಥೆಯನ್ನು ಮಾಡಲಾಗಿದೆ.
ಆಸ್ಪತ್ರೆಗಳ ವಿವರ;
  ಕೆ.ಎಸ್ ಆಸ್ಪತ್ರೆ (ಸಾಮಾನ್ಯ ವಿಭಾಗ) 150 ಹಾಸಿಗೆ, ಮಂಗಳ ಹೆರಿಗೆ ಆಸ್ಪತ್ರೆ (ಹೆರಿಗೆ) 20 ಹಾಸಿಗೆ, ಗೋವನ್ ಕೊಪ್ ಹೆರಿಗೆ ಆಸ್ಪತ್ರೆ 25 ಹಾಸಿಗೆ, ಖುಷಿ ಆಸ್ಪತ್ರೆ (ಮಲ್ಟಿಸ್ಪೇಷಾಲಿಟಿ) (ಸಾಮಾನ್ಯ ಮತ್ತು ಹೆರಿಗೆ) 25 ಹಾಸಿಗೆ, ವಾತ್ಸಲ್ಯ ಹೆರಿಗೆ ಆಸ್ಪತ್ರೆ 40 ಹಾಸಿಗೆ, ಸಿ.ಟಿ ಹಾಸ್ಪಿಟಲ್ (ಸಾಮಾನ್ಯ ಮತ್ತು ಹೆರಿಗೆ) 20 ಹಾಸಿಗೆ , ಜಿ.ಎಸ್.ಆರ್ ಆಸ್ಪತ್ರೆ (ಸಾಮಾನ್ಯ) 20 ಹಾಸಿಗೆ, ಭಗವತಿ ಆಸ್ಪತ್ರೆ (ಚಿಕ್ಕಮಕ್ಕಳ) 15 ಹಾಸಿಗೆ, ಬಾಪೂಜಿ ಚಿಕ್ಕಮಕ್ಕಳ ಆಸ್ಪತ್ರೆ 15 ಹಾಸಿಗೆ ಇದ್ದು ಒಳ ಮತ್ತು ಹೊರರೋಗಿಗಳು ಇವುಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದು

Please follow and like us:
error