ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಗರ್ಭಿಣಿ ಸಾವು

Koppal : ಬೆಳಗ್ಗೆ ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾದ ಗರ್ಭಿಣಿ ಎರಡು ಗಂಟೆಯಲ್ಲೇ ಮೃತಪಟ್ಟ ಘಟನೆ ಕೊಪ್ಪಳದಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿತಾಂಡಾದ ಜ್ಯೋತಿಬಾಯಿ(28) ಮೃತಮಹಿಳೆ. ಬೆಳಗ್ಗೆ ಗಿಣಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಗೆಂದು ತೆರಳಿದ ಜ್ಯೋತಿಬಾಯಿಯನ್ನ ಅಲ್ಲಿನ ವೈದ್ಯರು ತಪಾಸಣೆ ಮಾಡಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಜಿಲ್ಲಾಸ್ಪತ್ರೆಗೆ ಬಂದ ಜ್ಯೋತಿಬಾಯಿ ನಡೆದುಕೊಂಡು ಹೆರಿಗೆ ವಿಭಾಗಕ್ಕೆ ಹೋಗಿದ್ದಾರೆ. ತಕ್ಷಣ ಸ್ಪಂದಿಸಬೇಕಿದ್ದ ವೈದ್ಯಾಧಿಕಾರಿಗಳು ಸುಖಾಸುಮ್ಮನೆ ಒಂದು ಗಂಟೆ ವಿಳಂಬ ಮಾಡಿದ್ದಲ್ಲದೇ ರಕ್ತಪರೀಕ್ಷೆ, ಮಾಡಲು ತಿಳಿಸಿ, ಬ್ಲೀಡೀಂಗ್ ನಿಲ್ಲಬೇಕಂದ್ರೆ ತಡ ಮಾಡದೇ ತಕ್ಷಣ ರಕ್ತ ಬೇಕು ಎಂದಿದ್ದಾರೆ. ಸಂಬಂಧಿಕರು ಅರ್ಧಗಂಟೆಯಲ್ಲೇ ಬ್ಲಡ್ ಅರೇಂಜ್ ಮಾಡಿದ್ದಾರೆ. ಕೊನೆಗೆ 
ಪೇಷೆಂಟ್ ಕೋಲ್ಯಾಪ್ಸ್‍ ಅಂತ ಡಿಕ್ಲೇರ್ ಮಾಡಿದ್ದಾರೆ. ಜೊತೆಗೆ ರಕ್ತಪರೀಕ್ಷೆ ಹಾಗೂ ಇತರೆ ಪರೀಕ್ಷೆಗಳ ವರದಿಯನ್ನ ಲೆಡ್ಜರ್‍ನಲ್ಲಿ ತಿದ್ದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸಾವಿಗೆ ನಿಖರ ಕಾರಣ ತಿಳಿಸಬೇಕು, ಜೊತೆಗೆ ಕುಟುಂಬಕ್ಕೆ ಪರಿಹಾರ ನೀಡಬೇಕು, ಅಲ್ಲಿಯವರೆಗೂ ಶವ ಒಯ್ಯುವುದಿಲ್ಲ ಎಂದು ಸಂಬಂಧಿಕರು ಪಟ್ಟು ಹಿಡಿದು ಜಿಲ್ಲಾಸ್ಪತ್ರೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ರು. ಜ್ಯೋತಿಬಾಯಿಯ ಆರೋಗ್ಯ ತಪಾಸಣೆಯಲ್ಲಿ ವೈದ್ಯಾಧಿಕಾರಿಗಳ ಕರ್ತವ್ಯಲೋಪ ಆಗಿಲ್ಲ. ಸಾಮಾನ್ಯವಾಗಿ ರಕ್ತಪರೀಕ್ಷೆಯ ಫಲಿತಾಂಶ ಆರೋಗ್ಯ ಸ್ಥಿತಿಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಮೊದಲು ಪರೀಕ್ಷೆ ಮಾಡಿದಾಗ ಹೀಮೋಗ್ಲೋಬಿಲ್ 11.6ರಷ್ಟು ಇದ್ದದ್ದನ್ನ ಮೃತಪಟ್ಟಿರುವುದು ಖಚಿತವಾದ ಮೇಲೆ ಅದನ್ನ 2.6 ಲೆಡ್ಜರ್‍ನಲ್ಲಿ ತಿದ್ದಲಾಗಿರುವುದನ್ನ ಗಮನಕ್ಕೆ ಬಂದಿದೆ. ಇದು ತಪ್ಪು. ಅಕ್ಷಮ್ಯ ಅಪರಾಧ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅಂತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ. ಜಿಲ್ಲಾಸ್ಪತ್ರೆ ಸಿಬ್ಬಂದಿ ಅವಾಂತರದಿಂದ ಒಂದಲ್ಲ, ಎರಡು ಜೀವ ಮರಳಿ ಬಾರದ ಲೋಕಕ್ಕೆ ಹೋದಂತಾಗಿದೆ. ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಇಂಥ ಪ್ರಕರಣಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಇನ್ನು ಮುಂದಾದ್ರೂ ಬಡರೋಗಿಗಳ ಜೀವದ ಜೊತೆ ಚೆಲ್ಲಾಟ ಆಡೋದನ್ನ ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾಸ್ಪತ್ರೆಯ ಸಿಬ್ಬಂದಿ ನಿಲ್ಲಿಸಬೇಕಿದೆ.

 

Please follow and like us:
error