ಕೊಪ್ಪಳ ಜಿಲ್ಲಾಧಿಕಾರಿ ವರ್ಗಾವಣೆ ಹುನ್ನಾರ : ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಕೊಪ್ಪಳ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿಸಲು ಮುಂದಾದ ಬಿಜೆಪಿ ಶಾಸಕರ ಹುನ್ನಾರದ ವಿರುದ್ದ ಆಕ್ರೋಶಗೊಂಡ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ. ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರಗತಿಪರ ಸಂಘಟಕರು ಬಿಜೆಪಿ ಶಾಸಕರ ವಿರುದ್ದ ಹರಿಹಾಯ್ದಿದ್ದಾರೆ.

ಮರಳು ಮಾಫೀಯ ದಂಧೆಕೋರರಿಗೆ ಭ್ರಷ್ಟರಿಗೆ ಸಿಂಹಸಪ್ನವಾಗಿ, ಶಾಸಕರ ಕೈಗೊಂಬೆ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದ್ದಾರೆ ಇಂತಹ ಡಿಸಿ ವಿರುದ್ದ  ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಶಾಸಕರು ಆರೋಪ ಮಾಡಿದ್ದರು ಶಾಸಕರಿಗೆ ಮರ್ಯಾದೆ ಕೊಡುತ್ತಿಲ್ಲ ಬ್ರಿಟಿಷ್ ಅಧಿಕಾರಿಯಂತೆ ವರ್ತನೆ ಮಾಡುತ್ತಿರುವ ಡಿಸಿಯನ್ನು ಕರೆದು ಸದನದಲ್ಲಿ ಛೀಮಾರಿ ಹಾಕಬೇಕೆಂದು ಶಾಸಕ ಗೋವಿಂದ ಕಾರಜೋಳ ಒತ್ತಾಯಿಸಿದ್ದರು.  ಡಿಸಿ ಸುನೀಲ್ ಕುಮಾರ ವಿರುದ್ದ ಆರೋಪ ಮಾಡಿ ವರ್ಗಾವಣೆಗೆ ಹುನ್ನಾರ ನಡೆಸಲಾಗುತ್ತಿದೆ ಕ್ಷೇತ್ರಕ್ಕೆ ಸಂಬಂಧವಿಲ್ಲದ ಶಾಸಕ ಗೋವಿಂದ ಕಾರಜೋಳ ಹಗುರವಾಗಿ ಮಾತನಾಡುವುದು ಸರಿಯಲ್ಲ ದಕ್ಷ ಅಧಿಕಾರಿಗಳ, ಪ್ರಾಮಾಣಿಕ ಅಧಿಕಾರಿಗಳ ಬಗ್ಗೆ ಮಾತನಾಡಿದರೆ ಘೇರಾವ್ ಮಾಡಲಾಗುವುದು ಎಚ್ಚರಿಕೆ ನೀಡಿದರು.  ಶಾಸಕರ ಬಂಟರ ಟೆಂಡರ್ ಗಳಿಗೆ ಬ್ರೇಕ್ ಹಾಕಿದ್ದಾರೆ. ಬಡವರ, ರೈತರ, ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಡಿಸಿ ಆಗಮನದಿಂದ ನೆನೆಗುದಿಗೆ ಬಿದ್ದಿರುವ ಕಾಮಾರಿಗಳು ಬರದಿಂದ ಸಾಗುತ್ತಿವೆ ಕಳಪೆ ಮಟ್ಟದ ಕಾಮಗಾರಿಗಳನ್ನು ಮಾಡಿದ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಖಡಕ್ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಇಂತಹ ಅಧಿಕಾರಿಗಳು ಜಿಲ್ಲೆಗೆ ಅಗತ್ಯ ಪ್ರತಿಭಟನಾಕಾರರು ಆಗ್ರಹಿಸಿದ್ಧಾರೆ.

Please follow and like us:
error