ಕೊಪ್ಪಳ ಜಾತ್ರೆಗೆ ಭರದ ಸಿದ್ಧತೆ

ಕೊಪ್ಪಳದ ಗವಿಮಠ ಜಾತ್ರೆಯ ಗತ್ತೆ ಬೇರೆಯಾಗಿದೆ. ಸಮಾಜಮುಖಿಯಾಗಿರುವ, ಸಮಾಜವನ್ನು ಜಾಗೃತಿಗೊಳಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾತ್ರೆ ವಿಶೇಷ ಎನಿಸುತ್ತಿದೆ. ಈ ವರ್ಷವೂ ಅಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜಲದೀಕ್ಷೆ ಕಾರ್ಯಕ್ರಮ ಅತ್ಯಂತ ಸಮಯೋಚಿತವಾಗಿದೆ. ಶಾಲಾ-ಕಾಲೇಜ್‌ಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಸರ್ಕಾರಿ ಕೆಲ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ಈ ಜಾಥಾದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಈ ಜಾಥಾದಲ್ಲಿ ಪಾಲ್ಗೊಂಡು ನೀರಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಿದ್ದಾರೆ.

Leave a Reply