ಕೊಪ್ಪಳ. ಚಿಕ್ಕ ಬೀಡ್ನಾಳದಲ್ಲಿ ವಿಸ್ತಾರ ಸಂಸ್ಥೆಯ ಸಂಭ್ರಮ ೩೦

ಕೊಪ್ಪಳ.ಡಿ.೬. ಜಿಲ್ಲೆಯ ಕುಕನೂರ ತಾಲ್ಲೂಕಿನ ಚಿಕ್ಕ ಬೀಡ್ನಾಳದ ಬಾಂಧವಿ ಶಾಲಾ ಆವರಣದಲ್ಲಿ ದಿ. ೭ ರಂದು ಶನಿವಾರ ಮೂವತ್ತು ವರ್ಷ ಪೂರೈಸಿದ ವಿಸ್ತಾರ ಸಂಸ್ಥೆಯ ಸಂಭ್ರಮ ೩೦ ಆದ್ದೂರಿಯಾಗಿ ಜರುಗಲಿದೆ.
ಬೆಳಿಗ್ಗೆ ೧೦ ಗಂಟೆಗೆ ಲಂಬಾಣಿ ನೃತ್ಯ, ಶಿಂಗಾರಿ ಮೇಳ, ತಮಟೆ ವಾದ್ಯ, ಕೋಲಾಟ, ಜಾನಪದ ನೃತ್ಯಗಳ ಮೂಲಕ ಹೊನ್ನುಣಿಸಿ ಕ್ರಾಸ್ ನಿಂದ ಬಾಂಧವಿಯತನಕ ೮೦೦ ಮೀಟರ್ ದೂರ ನಡೆದು ಐದು ತಂಡಗಳ ಪ್ರದರ್ಶನಗಳೊಂದಿಗೆ ಬಾಂಧವಿಯಲ್ಲಿ ಹಸಿರು ಗ್ರಾಮ ಮತ್ತು ಸಂಭ್ರಮ ೩೦ ಉದ್ಘಾಟನೆ ಜರುಗಲಿದೆ.
ಬೆಳಿಗ್ಗೆ ೧೧:೩೦ಕ್ಕೆ ಬಾಂಧವಿ ದಿನಾಚರಣೆ ಮತ್ತು ಮಕ್ಕಳ ಮೇಳದಲ್ಲಿ ಐದು ಜಿಲ್ಲೆಗಳಿಂದ ಸುಮಾರು ೩೫೦ ಜನ ಮಕ್ಕಳು ಭಾಗವಹಿಸಲಿದ್ದಾರೆ. ಅಧಿಕಾರಿಗಳ ಜತೆ ಮಕ್ಕಳ ಚರ್ಚೆ, ಸಾಂಸ್ಕ್ರತಿಕ ಕಾರ್ಯಕ್ರಮಗಳು, ಪುಸ್ತಕ ಬಿಡುಗಡೆ, ಸನ್ಮಾನ ವಸ್ತು ಪ್ರರ್ಶನ ಅನುಭವ ಹಂಚಿಕೆ ಮುಂತಾದವುಗಳ ಜೊತೆ ನಡೆಯಲಿದೆ. ಅತಿಥಿಗಳಾಗಿ ಮಕ್ಕಳ ಸಾಹಿತಿ ಶಂಕರ ಹಲಗತ್ತಿ, ಬೆಂಗಳೂರಿನ ಸತೀಶ್ ಸಾಮ್ಯುವೆಲ್, ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್. ಉದ್ದಮಿ ಮಹೇಂದ್ರ ಮುನೋತ್, ಸರ್ವೋದಯ ಸಂಸ್ಥೆಯ ಅಧ್ಯಕ್ಷ ನಾಗರಾಜ ದೇಸಾಯಿ, ಸಾಹಿತಿ ಸಾವಿತ್ರಿ ಮುಜುಂದಾರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ನಿಲೋಫರ್ ಎಸ್. ರಾಂಪುರಿ, ಯುನಿಸೆಫ್‌ನ ಹರೀಶ್ ಜೋಗಿ, ಹೃದಯ ಸ್ಪರ್ಶಿ ಟ್ರಸ್ಟ್‌ನ ಸುರೇಶ್ ಎಂ. ಪಿ., ದೆಹಲಿಯ ಇಕೋ ಸಂಸ್ಥೆಯ ಜೋಸೆಫ್ ಥಾಮಸ್ ಮುಂತಾದವರು ಭಾಗವಹಿಸುವರು.
೪:೩೦ಕ್ಕೆ ವಿಸ್ತಾರ್ ಸಂಸ್ಥೆ ಮೂವತ್ತು ವರ್ಷಗಳನ್ನು ಪೂರೈಸಿದಕ್ಕೆ ಸಂಭ್ರಮ ೩೦ ವಿಸ್ತಾರನ ಪಯಣದ ಇತಿಹಾಸ ಇದರ ಯೋಜನೆಗಳ ಪರಿಚಯ ಪುಸ್ತಕಗಳ ಬಿಡುಗಡೆ, ಅನುಭವ ಹಂಚಿಕೆ, ಸನ್ಮಾನ ನಡೆಯಲಿದೆ.
ಅತಿಥಿಗಳಾಗಿ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿ ಡಾ|| ಸಾ.ಚಿ., ರಮೇಶ ಬೆಂಗಳೂರಿನ ಸಾಹಿತಿ ರುದ್ರೇಶ ಬಿ.ಅಂದರಂಗಿ. ವಿಸ್ತಾರನ ನಿರ್ದೇಶಕ ಡಾ|| ಮರ್ಸಿಕಾಪನ್, ವಿಸ್ತಾರ ಸಂಸ್ಥೆ ಸಂಸ್ಥಾಪಕ ಡಾ|| ಡೇವಿಡ್ ಸೆಲ್ವರಾಜ್ ಮುಂತಾದವರು ಭಾಗವಹಿಸುವರು.
ರಾತ್ರಿ ೭ಕ್ಕೆ, ಡಾ|| ಕೆ.ಟಿ. ವಿಜಯಕುಮಾರ್ ಸೋಲಿಗ ಬುಡಕಟ್ಟು ಜನಾಂಗದವರ ಬಗ್ಗೆ ನಡೆಸಿದ ಸಂಶೋಧನ ಅಧಾರಿತ ಶಿವಮೊಗ್ಗದ ಶ್ರೀರಂಗನಾಥ, ಶ್ರೀ ಡಿಂಗ್ರಿ ನರೇಶ ನಿರ್ದೇಶನದಲ್ಲಿ ವಿಸ್ತಾರ ರಂಗ ಶಾಲೆಯ ರಂಗಕಲಿಕಾರ್ತಿ ಗೋರುಕನ ೧೯೭೪ ನಾಟಕ ಪ್ರದರ್ಶನ ನಡೆಯಲಿದೆ.
ಅತಿಥಿಯಾಗಿ ಶಿವಮೊಗ್ಗದ ರಂಗಾಯಣದ ಮಾಜಿ ನಿರ್ದೇಶಕ ಡಾ|| ಎಂ. ಗಣೇಶ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸಕೃತ ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ, ಕ.ಸಂ.ಇ. ಸಹಾಯಕ ನಿರ್ದೇಶಕ ಎಸ್.ಕೆ. ರಂಗಣ್ಣನವರು, ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಹಾಯಕ ಪ್ರಧ್ಯಾಪಕ ಡಾ|| ಗೌರಿ ಮುಂತಾದವರು ಭಾಗವಹಿಸಲಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ವಿಸ್ತಾರ್ ಸಂಸ್ಥೆಯ ನಿರ್ದೇಶಕ ನಾಜರ್ ಪಿ.ಎಸ್., ಸಹಾಯಕ ನಿರ್ದೇಶಕಿ ಆಶಾ ವಿ. ಆಡಳಿತಾಧಿಕಾರಿ ಯೆಸೂಫ್ ಬಿ. ಢಾಣಾಪುರ ಮುಂತಾದವರು ಕೋರಿದ್ದಾರೆ.

Please follow and like us:
error