ಕೊಪ್ಪಳ ಕ್ಷೇತ್ರದ ಎಲ್ಲಾ ಪದವಿ, ಪಪೂ ಕಾಲೇಜುಗಳ ಅಭಿವೃದ್ಧಿ-ಕೆ. ರಾಘವೇಂದ್ರ ಹಿಟ್ನಾಳ


ಪಪೂ ಕಾಲೇಜು ನೂತನ ಕಟ್ಟಡ ಉದ್ಘಾಟಿಸಿ ಶಾಸಕ ಹಿಟ್ನಾಳ ಹೇಳಿಕೆ
ಕೊಪ್ಪಳ, ಆ. ೧೨: ಕೊಪ್ಪಳ ಕ್ಷೇತ್ರದ ಎಲ್ಲಾ ಪದವಿ ಮತ್ತು ಪದವಿಪೂರ್ವ ಕಾಲೇಜುಗಳ ಸಮಗ್ರ ಮೂಲಭೂತ ಸೌಕರ್ಯ ಒದಗಿಸಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿರುವದಾಗಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಕೊಪ್ಪಳ ನಗರದ ಬಾಲಕರ ಸರಕಾರಿ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ, ಹೊಸ ಹೆಚ್ಚುವರಿ ಕಟ್ಟಡ ಶಂಖು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ಪ್ರಸ್ತುತ ಕಾಲೇಜಿನ ಆವರಣದಲ್ಲಿ ನಿರ್ಮಾಣವಾಗಿರುವ ೯೦.೭೭ ಲಕ್ಷ ರೂಪಾಯಿ ವೆಚ್ಚದ ೨ ಭೋದನಾ ಕೊಠಡಿ, ೨ ಲ್ಯಾಬ್ ಮತ್ತು ಹೈಟೆಕ್ ಶೌಚಾಲಯಗಳನ್ನು ಪ್ರಾರಂಭಿಸಿದ್ದು, ನೂತನವಾಗಿ ಮಂಜೂರಾಗಿರುವ ೯೪ ಲಕ್ಷ ರೂಪಾಯಿಗಳ ಕೊಠಡಿಗಳ ನಿರ್ಮಾಣಕ್ಕೆ ಶಂಖು ಸ್ಥಾಪನೆ ನೆರವೇರಿಸಲಾಗಿದೆ ಬರುವ ದಿನಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಬೇಡಿಕೆಯಂತೆ ಕಾಲೇಜಿಗೆ ಬೇಕಿರುವ ಶುದ್ಧ ಕುಡಿಯುವ ನೀರಿನ ಘಟಕ, ವಿಜ್ಞಾನ ಪ್ರಯೋಗಾಲಯಗಳಿಗೆ ಮೂಲಭೂತ ಸೌಕರ್ಯ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಸಿಸಿ ಕ್ಯಾಮರಾ, ಸುತ್ತು ಗೋಡೆ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರ ಒದಗಿಸಲಾಗುವದು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಕೊಪ್ಪಳ ಕ್ಷೇತ್ರದ ಶೈಕ್ಷಣಿಕ ಪ್ರಗತಿ ಕಳೆದ ಐದು ವರ್ಷದಲ್ಲಿ ತುಂಬಾ ವೇಗ ಪಡೆದುಕೊಂಡಿದೆ, ಶಾಸಕರ ಕ್ರಿಯಾಶೀಲತೆ ಮೆಚ್ಚುವಂಥಹದು, ಇನ್ನಷ್ಟು ಕೆಲಸ ಶೈಕ್ಷಣಿಕ ರಂಗದಲ್ಲಿ ಆದರೆ ಮಕ್ಕಳ ಭವಿಷ್ಯ ಚೆನ್ನಾಗಿರುತ್ತದೆ ಎಂದ ಅವರು, ಶಿಕ್ಷಕ ವರ್ಗ ಸಹ ಮಕ್ಕಳ ಬೆಳವಣಿಗೆಗೆ ಮುತುವರ್ಜಿವಹಿಸಬೇಕು ಎಂದರು. ಇದೇ ವೇಳೆ ಕಾಲೇಜು ಆಡಳಿತ ಮಂಡಳಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹನುಮರಡ್ಡಿ ಹಂಗನಕಟ್ಟಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಗುತ್ತಿಗೆದಾರ ಚಂದ್ರಶೇಖರ ಹಳ್ಳಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಂಜಿನಿಯರ್, ನಿವೃತ್ತ ಪ್ರಾಂಶುಪಾಲರಾದ ಅಲ್ಲಮಪ್ರಭು ಬೆಟ್ಟದೂರ, ಬಿ. ಜಿ. ಕರಿಗಾರ, ನಗರಸಭೆ ಸದಸ್ಯ ಮುತ್ತುರಾಜ್ ಕುಷ್ಟಗಿ, ಅಕ್ಬರ್ ಪಾಶಾ ಪಲ್ಟನ್, ಮುಖಂಡರಾದ ಶಿವಾನಂದ ಹೊದ್ಲೂರ, ಯಂಕನಗೌಡ ಹೊರತಟ್ನಾಳ, ಕೌಶಲ್ ಚೋಪ್ರಾ, ಶೀತಲ್ ಪಾಟೀಲ್, ಪ್ರಾಚಾರ್ಯ ಕೆ. ಎಸ್. ನಾಗರಾಜರಾವ್, ಉಪನ್ಯಾಸಕರಾದ ಬಸವರಾಜ ಸವಡಿ, ಹೆಚ್. ಎಸ್. ದೇವರಮನಿ, ಚಿದಾನಂದ, ಸಂಗಪ್ಪ ಸಂತೋಜಿ ಇತರರು ಇದ್ದರು.

Please follow and like us:
error