ಕೊಪ್ಪಳ ಕ್ಷೇತ್ರಕ್ಕೆ ನಾನು ಆಕಾಂಕ್ಷಿಯಲ್ಲ- ಕರಡಿ ಸಂಗಣ್ಣ

ಕೊಪ್ಪಳ : ಕೊಪ್ಪಳ ವಿಧಾನಸಬಾ ಕ್ಷೇತದಿಂದ್ರ ನಾನು ಬಿಜೆಪಿ ಪಕ್ಷದಿಂದ ಆಕಾಂಕ್ಷಿಯಲ್ಲ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು. ಪತ್ರಿಕಾ ಭವನದಲ್ಲಿ ಮಾತನಾಡಿದ ಸಂಸದರು ಕೊಪ್ಪಳ ಕ್ಷೇತ್ರದಲ್ಲಿ

ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಚಂದ್ರ ಕವಲೂರು, ಚಂದ್ರು ಹಲಗೇರಿ , ಸಿ.ವಿ.ಚಂದ್ರಶೇಖರ, ರಾಜು ಬಾಕಳೆ, ಅಮರೇಶ ಕರಡಿ ಆಕಾಂಕ್ಷಿಗಳಾಗಿದ್ದಾರೆ ನಾನು ಆಕಾಂಕ್ಷಿಯಲ್ಲ ಎಂದು ಹೇಳಿದರು.ಪಕ್ಷದ ನಿರ್ದಾರಕ್ಕೆ ಬದ್ದನಾಗಿರುತ್ತೇನೆ. ರಾಜಕೀಯ ಜೀವನದ ಕೊನೆ ಹಂತದಲ್ಲಿದ್ದೇನೆ. ನಾನು ಪಕ್ಷ ಬದಲಿಸುವುದಿಲ್ಲ ನಾನು ಟಿಕೇಟ್ ಆಕಾಂಕ್ಷಿಯಲ್ಲ ಎಂದು ಹೇಳಿದ ಸಂಸದರು ಈ ಸಲದ ಬಜೆಟ್ ನಲ್ಲಿ ತಮ್ಮ ಕ್ಷೇತ್ರಕ್ಕೆ ಬಂದಿರುವ ಯೋಜನೆಗಳ ಕುರಿತು ವಿವರ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್ ಉಪಸ್ಥಿತರಿದ್ದರು.

Please follow and like us:
error