ಕೊಪ್ಪಳ ಕ್ರಿಡಾ ವಸತಿ ನಿಲಯದ ಕ್ರಿಡಾಪಟುಗಳ ಸಾಧನೆ


ಕೊಪ್ಪಳ ಆ. : ವೃಕ್ಷಾತ್ಥಾನ್-2019 ಸೀಸನ್-03 ಮ್ಯಾರಾಥಾನ್ ಕ್ರಿಡಾಕೂಟದಲ್ಲಿ ಕೊಪ್ಪಳ ಜಿಲ್ಲೆಯ ಕ್ರಿಡಾಪಟುಗಳ ಸಾಧನೆ ಮಾಡಿದ್ದಾರೆ.
ವೃಕ್ಷಾತ್ಥಾನ್-2019 ಸೀಸನ್-03 3ಕಿ.ಮೀ ಓಟದ ಮ್ಯಾರಾಥಾನ್ ಕ್ರಿÃಡಾಕೂಟವು ಇದೇ ಆಗಸ್ಟ್. 04 ರಂದು ವಿಜಯಪುರದಲ್ಲಿ ಜರುಗಿದ್ದು, ಕೊಪ್ಪಳ ಕ್ರಿÃಡಾ ವಸತಿ ನಿಲಯದ ಕ್ರಿಡಾಪಟುಗಳಾದ  ರೇಣುಕಾ ತಂದೆ ಸಂಗಪ್ಪ ಹುಳ್ಯಾಳ ಪ್ರಥಮ ಸ್ಥಾನ ಹಾಗೂ ಸಾನಿಯಾ ತಂದೆ ಕಾಸಿಮಸಾಬ ತೃತೀಯ ಸ್ಥಾನವನ್ನು ಪಡೆದು ಈ ಕ್ರಿಡಾಪಟುಗಳು ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್.ಜಿ ನಾಡಗೀರ, ಖೋಖೋ ತರಬೇತುದಾರ ಎ.ಎನ್.ಯತಿರಾಜು, ಅಥ್ಲೆಟಿಕ್ಸ್ ತರಬೇತುದಾರ ತಿಪ್ಪಣ್ಣ ಮಾಳಿ, ವ್ಹಾಲಿಬಾಲ್ ತರಬೇತುದಾರ ಸುರೇಶ ಯಾದವ, ಕ್ರಿÃಡಾ ಇಲಾಖೆಯ ಸಿಬ್ಬಂದಿಗಳಾದ ತುಕಾರಾಮ ರಂಜಪಲ್ಲಿ, ಹನುಮೇಶ ಪೂಜಾರ ಸೇರಿದಂತೆ ಮತ್ತಿತರರು ಕ್ರಿÃಡಾಪಟುಗಳ ಈ ಸಾಧನೆಗೆ ಶುಭ ಹಾರೈಸಿ ಅಭಿನಂದಿಸಿದ್ದಾರೆ.

Please follow and like us:
error

Related posts