ಕೊಪ್ಪಳ ಕ್ರಿಕೆಟ್ ಬೆಟ್ಟಿಂಗ್ ೩ ಬಂಧನ

ಕೊಪ್ಪಳ : ಐಪಿಎಲ್ ಹವಾ ಜೋರಾಗಿರುವಂತೆಯೇ‌ ಜಿಲ್ಲೆಯಾದ್ಯಂತ ಬೆಟ್ಟಿಂಗ್ ದಂದೆಯೂ ಜೋರಾಗಿಯೇ ನಡೆದಿದೆ. ಮೊನ್ನೆ ತಾನೆ ಕುಷ್ಟಗಿಯಲ್ಲಿ ಬೆಟ್ಟಂಗ್ ದಂದೆಯಲ್ಲಿ ತೊಡಗಿದವರನ್ನು ಬಂಧಿಸಲಾಗಿತ್ತು. ನಿನ್ನೆ ಕೊಪ್ಪಳದ ಅಮೀನಪುರದಲ್ಲಿ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರನ್ನು ಬಂಧಿಸಲಾಗಿದೆ. ಅಮೀನಪುರದ ಮನೆಯಲ್ಲಿ ಬೆಟ್ಟಿಂಗ್ ದಂದೆಯಲ್ಲಿ ತೊಡಗಿದ್ದ ದೇವರಾಜ,ಲಿಂಗರಾಜ್ ಮತ್ತು ಮಂಜುನಾಥ ಎನ್ನುವವರನ್ನು ಬಂಧಿಸಿ ೧೬ ಸಾವಿರ ರೂ ವಶಪಡಿಸಿಕೊಳ್ಳಲಾಗಿದೆ. ನಗರಠಾಣೆಯ ಸಿಪಿಐ ರವಿ ಉಕ್ಕುಂದ ನೇತೃತ್ವದಲ್ಲಿ ದಾಳಿ ಮಾಡಿ ಬಂದಿಸಲಾಗಿದೆ.