ಕೊಪ್ಪಳ ಕೋವಿಡ್-19 ಸೋಂಕಿತ ಮತ್ತೊಬ್ಬ ಗುಣಮುಖ-ಬಿಡುಗಡೆ

ಕೊಪ್ಪಳ: ಮಹಾರಾಷ್ಟ್ರದಿಂದ ಕೊಪ್ಪಳಕ್ಕೆ ಬಂದಿದ್ದ ವ್ಯಕ್ತಿಗೆ ಮೇ.18ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಪೇಷೆಂಟ್-1173ಗೆ ಮೇ 30ರವರೆಗೆ ಕೋವಿಡ್-19 ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಎರಡನೇ ಬಾರಿ ಸ್ವ್ಯಾಬ್ ಪರೀಕ್ಷೆಯಲ್ಲಿ ಕೋವಿಡ್-19 ಸೋಂಕು ನೆಗೆಟಿವ್ ಬಂದಿದ್ದು, ಪೇಷೆಂಟ್-1173ಯನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ಈ ಮೂಲಕ ಜಿಲ್ಲೆಯ 4 ಕೊರೊನಾ ಕೇಸ್‌ಗಳ ಪೈಕಿ ಮೂವರು ಸೋಂಕಿತರು ಗುಣಮುಖರಾಗಿದ್ದಾರೆ. ಮತ್ತೋರ್ವ ಸೋಂಕಿತನಿಗೆ ಚಿಕಿತ್ಸೆ ಮುಂದಯವರೆದಿದೆ. ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡ ಪೇಷೆಂಟ್-1173 ಸೋಂಕುಮುಕ್ತನನ್ನು ಆಸ್ಪತ್ರೆಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿ ಬೀಳ್ಕೊಟ್ಟರು.

Please follow and like us:
error