ಕೊಪ್ಪಳ ಕೈಗಾರಿಕಾ ವಸಾಹತು ಅಭಿವೃದ್ಧಿಸಂಸದ ಸಂಗಣ್ಣ ಕರಡಿ ,ಸಚಿವ ಜಗದೀಶ ಶೆಟ್ಟರ್ ಚರ್ಚೆ

ಧಾರವಾಡ :ಕೊಪ್ಪಳ ಜಿಲ್ಲೆಯ ಬಸಾಪುರ ಬಳಿ ಕೈಗಾರಿಕಾ ಅಭಿವೃದ್ಧಿ ಪ್ರದೇಶ ಸ್ಥಾಪನೆಗೆ ಮೀಸಲಿಟ್ಟಿರುವ 104 ಎಕರೆ ಪ್ರದೇಶದಲ್ಲಿ , ಉದ್ಯಮಗಳಿಗೆ ನಿವೇಶನಗಳ ಹಂಚಿಕೆ,ದರ ನಿಗದಿ ಮತ್ತಿತರ ವಿಷಯಗಳ ಕುರಿತು ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಜಗದೀಶ್ ಶೆಟ್ಟರ್ ಅವರೊಂದಿಗೆ ಚರ್ಚಿಸಿದರು.

ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಸಚಿವರನ್ನು ಭೇಟಿಯಾದ ಸಂಸದ ಸಂಗಣ್ಣ ಕರಡಿ ಅವರು, ಈ ಹಿಂದೆ ತಾವು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೊಪ್ಪಳ ಬಳಿಯ ಬಸಾಪುರದಲ್ಲಿ 104 ಎಕರೆ ಪ್ರದೇಶದಲ್ಲಿ , ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಭೂಮಿ ಮೀಸಲಿಡಲಾಗಿದೆ.ಅದನ್ನು ಸೂಕ್ತ ದರ ನಿಗದಿಗೊಳಿಸಿ ಕೈಗಾರಿಕೋದ್ಯಮಿಗಳಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳುವುದು, ಯಲಬುರ್ಗಾ ತಾಲೂಕಿನ ಹಿರೇಮನ್ನಾಪುರ ಬಳಿ ಬೊಂಬೆ, ಆಟಿಕೆ ಸಾಮಾನುಗಳ ತಯಾರಿಕೆಯ ಬೃಹತ್ ಉದ್ಯಮ ಸ್ಥಾಪನೆ ಕುರಿತು ಚರ್ಚಿಸಿದ ಸಂಸದರು, ಕೈಗಾರಿಕಾ ಅಭಿವೃದ್ಧಿ ಪರಿಶೀಲನೆಗಾಗಿ ಸಚಿವರು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಲು ಆಹ್ವಾನಿಸಿದರು.

ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್,ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ಕೆ.ಶರಣಪ್ಪ ವಕೀಲರು, ಮುಖಂಡರಾದ ವೀರಣ್ಣ ಗಾಣಿಗೇರ ಮತ್ತಿತರರು ಇದ್ದರು.

Please follow and like us:
error

Related posts