fbpx

ಕೊಪ್ಪಳ ಕರೋನಾಕ್ಕೆ ಮತ್ತೆರೆಡು ಸಾವು: ಸಾವಿನ ಸಂಖ್ಯೆ ೧೬ಕ್ಕೇ ಏರಿಕೆ

ಕೊಪ್ಪಳ: ಕೊರೊನಾ ಜಿಲ್ಲೆಯಲ್ಲಿ ಕರಾಳ ಛಾಯೆ ಮೂಡಿಸಿದೆ. ಸಾವಿನ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು, ಇಂದು ಮತ್ತಿಬ್ಬರು ಕೊರೊನಾದಿಂದ ಸಾವಿಗೀಡಾಗಿದ್ದಾರೆ.

ಜುಲೈ 23ರಂದು ರಾತ್ರಿ 10-30ರ ಸುಮಾರಿಗೆ ದಾಖಲಾಗಿದ್ದ ಕೊಪ್ಪಳ ನಗರದ 49 ವರ್ಷದ ವ್ಯಕ್ತಿ ಶುಕ್ರವಾರ ರಾತ್ರಿ 12.50ರ ಸುಮಾರಿಗೆ ಅಂದರೆ ಆಸ್ಪತ್ರೆಗೆ ದಾಖಲಾದ ಎರಡು ಗಂಟೆಯಲ್ಲಿ ಅಸು ನೀಗಿದ್ದಾರೆ.

ಜುಲೈ 23ರಂದು ಸಂಜೆ 7-30ರ ಸುಮಾರಿಗೆ ದಾಖಲಾಗಿದ್ದ ಕಾರಟಗಿಯ 70 ವರ್ಷದ ಮಹಿಳೆ ಶುಕ್ರವಾರ ಬೆಳಗಿನ ಜಾವ 2-30ರ ಸುಮಾರಿಗೆ ಅಸು ನೀಗಿದ್ದಾರೆ.

Please follow and like us:
error
error: Content is protected !!