ಕೊಪ್ಪಳ ಎಸ್ಪಿ ಟ್ರಾನ್ಸಪರ್ ? ಶ್ರೀಮತಿ ರೇಣುಕಾ ಕೆ.ಎಸ್. ನೂತನ ಎಸ್ಪಿ

ಬಹಳ ದಿನಗಳಿಂದ ಕೇಳಿ ಬರುತ್ತಿದ್ದ ಎಸ್ಪಿ ಅನೂಪ್ ಶೆಟ್ಟಿ ಟ್ರಾನ್ಸಪರ್ ಸುದ್ದಿ ನಿಜವಾಗುತ್ತಿದೆ.

ಕೊಪ್ಪಳ ಎಸ್ಪಿ ಟ್ರಾನ್ಸಪರ್ ಮಾಡಿ ಅವರ ಜಾಗೆಗೆ ಶ್ರೀಮತಿ ರೇಣುಕಾ ಕೆ.ಸುಕುಮಾರ್ ನೂತನ ಎಸ್ಪಿಯಾಗಿ ಬರುತ್ತಿದ್ದಾರೆ. ಬಂದ ಕೇವಲ ಕೆಲವೇ ತಿಂಗಳುಗಳಲ್ಲಿ ಜನಾನುರಾಗಿಯಾಗಿ ಕೆಲಸ ಮಾಡಿದ ಎಸ್ಪಿ ಅನೂಪ್ ಶೆಟ್ಟಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರು. ಅಕ್ರಮ ಮದ್ಯಮಾರಾಟ, ಮರಳು ದಂದೆ, ಓಸಿ, ಕಾಳ ಸಂತೆಕೋರರಿಗೆ ಬಿಸಿ ಮಟ್ಟಿಸಿದ್ದರು. ಹೆಲ್ಮಟ್ ಕಡ್ಡಾಯ ಮಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಜನಪರ ಕಾಳಜಿಯುಳ್ಳ ದಕ್ಷ, ಪ್ರಾಮಾಣಿಕ ಅಧಿಕಾರಿ ಅನೂಪ್ ಶೆಟ್ಟಿಯವರ ಸೇವೆ ಇನ್ನೂ ಜಿಲ್ಲೆಗೆ ಬೇಕಿದೆ. ಇಂತಹ ಸಂದರ್ಭದಲ್ಲಿ ವರ್ಗಾವಣೆ ಮಾಡಲಾಗಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ನ್ಯಾಯಪರ, ನಿಷ್ಪಕ್ಷಪಾತಿ ಎಸ್ಪಿಯವರು ಇನ್ನಷ್ಟು ದಿನ ಜಿಲ್ಲೆಯಲ್ಲಿ ಇದ್ದರೆ ಒಳ್ಳೆಯದು ಎನ್ನುವದು ಜನಾಭಿಪ್ರಾಯ.