ಕೊಪ್ಪಳ ಎಪಿಎಂಸಿ ಗೆ ಅಧ್ಯಕ್ಷ-ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ


ಕೊಪ್ಪಳ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ೪ನೇ ಅವಧಿಗೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಗರಾಜ ಚಳ್ಳೊಳ್ಳಿ ಅಧ್ಯಕ್ಷರಾಗಿ ಯಂಕಣ್ಣ ಹೊರಕನಾಳ, ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣಾ ಅಧಿಕಾರಿ ಕೊಪ್ಪಳ ತಹಶೀಲ್ದಾರ ಜೆ.ಬಿ. ಮಜ್ಜಿಗಿಯವರು ಘೋಷಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ. ಬಸವರಾಜ ಹಿಟ್ನಾಳ, ಮಾಜಿ ಜಿ.ಪಂ ಅಧ್ಯಕ್ಷರು ಹಾಲಿ ಸದಸ್ಯರಾದ ಎಸ್.ಬಿ. ನಾಗರಳ್ಳಿ, ಕೆ. ರಾಜಶೇಖರ ಹಿಟ್ನಾಳ, ಜಿ.ಪಂ. ಸದಸ್ಯ ಗೂಳಪ್ಪ ಹಲಗೇರಿ, ಹನುಮಂತಗೌಡ್ರು ಪೋಲಿಸ್ ಪಾಟೀಲ, ನಗರ ಸಭಾ ಸದಸ್ಯರುಗಳಾದ ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ಸಿದ್ದಯ್ಯಸ್ವಾಮಿ ಹಿರೇಮಠ, ಅಜೀಮ ಅತ್ತಾರ, ಮೈಬೂಬ ಅರಗಂಜಿ, ಮುಖಂಡರುಗಳಾದ ವೆಂಕನಗೌಡ ಹಿರೇಗೌಡ್ರು, ಭರಮಪ್ಪ ನಗರ, ಪ್ರಸನ್ನ ಗಡಾದ, ವಿರುಪಣ್ಣ ನವೋದಯ, ಶಿವಕುಮಾರ ಪೌಲಿ ಶೆಟ್ಟರ, ಅಡಿವೆಪ್ಪ ರಾಟಿ, ನಗರ ಸಭೆ ಸದಸ್ಯ ಅಕ್ಬರ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error