ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಹಾಜಾತ್ರೆಗೆ ಸರ್ವರಿಗೂ ಹಾರ್ದಿಕ ಸುಸ್ವಾಗತ.

         ಈ ಮೂಲಕ ಕೊಪ್ಪಳ ನಗರಕ್ಕೆ ಅಜ್ಜನ ಜಾತ್ರೆಯ ನಿಮಿತ್ತ ಆಗಮಿಸುವ ಭಕ್ತರು ಹಾಗೂ ನಗರದ ನಿವಾಸಿಗಳಲ್ಲಿ ಕೊಪ್ಪಳ‌ ನಗರಸಭೆ ಈ ಮೂಲಕ ಮನವಿ ಮಾಡಿಕೊಳ್ಳುವುದೆನೆಂದರೆ…
– ಬೆಳೆಯುತ್ತಿರುವ ಕೊಪ್ಪಳ ನಗರದಲ್ಲಿ ಈ ಕೆಳಕಾಣಿದ ಯೋಜನೆಗಳು ಅನುಷ್ಠಾನ ಹಂತದಲ್ಲಿದ್ದು, ಜಾತ್ರಾ ಯಾತ್ರಿಗಳು, ಸಾರ್ವಜನಿಕರು ಹಾಗೂ ನಗರದ ನಿವಾಸಿಗಳು ಸಹಕರಿಸುವ ಮೂಲಕ ಅತ್ಯಂತ ಮಹತ್ವಾಕಾಂಕ್ಷೆಯ ಸರಕಾರಗಳ ಯೋಜನೆಯ ಯಶಸ್ವಿಗೆ ಕೈಜೋಡಿಸಿ ಸಹಕಾರ ನೀಡಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ.
– ಸ್ವಚ್ಚ ಸರ್ವೇಕ್ಷಣ : ಅಭಿವೃದ್ಧಿ ಹೊಂದುತ್ತಿರುವ ನಗರದಲ್ಲಿ ಸ್ವಚ್ಚತೆ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ. ಆರೋಗ್ಯದ ಹಿತ ದೃಷ್ಟಿಯಿಂದ ಆದರೂ ತಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಹೆಚ್ಚಿನ ಪ್ರಾಶಸ್ತ್ಯದ ಅವಶ್ಯಕತೆವಿದೆ.
ಸ್ವಚ್ಚ ಭಾರತ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಸ್ವಚ್ಛ ಭಾರತದ ಯೋಜನೆಗೆ ಎಲ್ಲರ ಸಹಕಾರದ ಅಗತ್ಯವಿದೆ. ಮೋದಿಯವರು ಸ್ವತಃ ಕಸ ಗೂಡಿಸುವ ದೇಶದ ನಾಗರಿಕರಲ್ಲಿ ಸ್ವಚ್ಛ ಭಾರತದ ಪರಿಕಲ್ಪನೆ ಮೈಗೂಡಿಸುವ ಕಾರ್ಯ ಮೊದಲಾಗಬೇಕಾಗಿದೆ. ನಗರದಲ್ಲಿ ಎಲ್ಲೆಂದರಲ್ಲಿ ಕಸ ಹರಡದಂತೆ ವಿಶೇಷವಾಗಿ ಸಾರ್ವಜನಿಕರು ಜಾತ್ರೆಗೆ ಆಗಮಿಸುವ ಯಾತ್ರಿಕರು ವಿವಿಧ ಸ್ಥಳಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವುದು ನಗರಸಭೆಯ ಆಶೆಯ ಕೂಡಾ ಒಂದಾಗಿದೆ. ಈ ಎಲ್ಲಾ ಆಶೆಯಗಳು ಈಡೇರಿದ್ದಾದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರು ಕಂಡ ಕನಸ ನನಸಾಗುವುದರಲ್ಲಿ ಎರಡ ಮಾತಿಲ್ಲ..! 
– ಘನತ್ಯಾಜ್ಯ ವಿಲೇವಾರಿ : ಹಸಿ, ಒಣಕಸ ವಿಂಘಡಿಸುವುದು ಅತ್ಯಂತ ಮುಖ್ಯವಾದದ್ದು , ನಿತ್ಯ ಆಗಮಿಸುವ ನಗರಸಭೆಯ ಕಸಸಂಗ್ರಹ ವಾಹನಗಳಿಗೆ ನೀಡುವುದು. ಎಲ್ಲಿ ಬೇಕಂದರಲ್ಲಿ ಕಸ ಚೆಲ್ಲಬಾರದು ಅದು ಕಾನೂನಿನ ಪ್ರಕಾರ ಅಪರಾದವಾಗಿದೆ. ಈ ಎಲ್ಲಾ ಮೇಲಿನ ಸ್ವಚ್ಛ ಭಾರತದ ಕನಸಿನ ಕಾರ್ಯಕ್ರಮಗಳಿಗೆ ಕೈ ಜೋಡಿಸಬೇಕೆಂಬುವುದು ನಗರಸಭೆಯ ಆಶೆಯ. ಅಲ್ಲದೆ, ಎಂ.ಎಸ್- 2013 ರ ಪ್ರಕಾರ ಮಲ ಹೊರುವ ಪದ್ಧತಿಯನ್ನು ನಿಷೇಧಿಸಲಾಗಿದೆ. ಅಂತರ್ಜಲ ಕುಸಿಯುತ್ತಿರುವ ಇಂದಿನ ದಿನಮಾನಗಳಲ್ಲಿ ಜಲದ ಅರಿವಿಗಾಗಿ ನಗರಸಭೆ ಸಾಕಷ್ಟು ಪ್ರಯತ್ನದ ಹಂತದಲ್ಲಿದೆ. ಇದಕ್ಕೆ ಸಾರ್ವಜನಿಕರ ಸಹಭಾಗಿತ್ವ ಅವಶ್ಯವಿದೆ. ನಗರದ ಎಲ್ಲ ಉದ್ಯಮಿಗಳು ಪರವಾನಿಗೆಯನ್ನು ಕಡ್ಡಾಯವಾಗಿ ನವೀಕರಣಗೊಳಿಸಿಕೊಳ್ಳಬೇಕಾಗಿದೆ. ಪ್ರಮುಖವಾಗಿ ಪ್ಲಾಸ್ಟಿಕ್ ನಿಷೇಧಕ್ಕೆ ವ್ಯಾಪಾರಿಗಳು ಸಾರ್ವಜನಿಕರು ಸಹಕರಿಸಲು 
 ಮನವಿ..!!
 ಆಡಳಿತಾಧಿಕಾರಿಗಳು ನಗರಸಭೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ.

ಪೌರಾಯುಕ್ತರು ನಗರಸಭೆ ಹಾಗೂ ಸಿಬ್ಬಂದಿ ವರ್ಗ ಕೊಪ್ಪಳ.

Please follow and like us:
error