ಕೊಪ್ಪಳದ ಶಾಂತಿಪ್ರಿಯ ಜನ ಯಾವತ್ತೂ ನಿಮ್ಮನ್ನು ಮರೆಯುವುದಿಲ್ಲ !

Koppal  ನಗರ ಠಾಣೆಯಲ್ಲಿ ಒಂದು ವರ್ಷ 9 ತಿಂಗಳು ಪೋಲಿಸ್ ಇನ್ಸಪೆಕ್ಟರ್ ಆಗಿ ಕೆಲಸ ನಿರ್ವಹಿಸಿ ಈಗ  ತೆರಳುತ್ತಿರುವ ರವಿ ಉಕ್ಕುಂದರವರು ತಮ್ಮ ಜನಪರ ಕಾಳಜಿಯಿಂದ ಜನಾನುರಾಗಿಯಾದ ನಡವಳಿಕೆಯಿಂದ ಇಡೀ ಕೊಪ್ಪಳ ನಗರದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  ಶಾಂತಿ ಸೌಹಾರ್ಧತೆಯನ್ನು ಕಾಪಾಡುವಲ್ಲಿ ಯಾವುದೇ ಮುಲಾಜಿಗೆ ಒಳಗಾಗದೇ , ಯಾವುದೇ ರೀತಿಯ ಒತ್ತಡಗಳಿಗೆ ಮಣಿಯದೇ ಕಾರ್ಯನಿರ್ವಹಿಸಿ ಖಡಕ್  ಅಧಿಕಾರಿ ಎಂದೇ ಖ್ಯಾತಿಗೊಳಗಾಗಿದ್ದಾರೆ.  ಗವಿಮಠದ ಜಾತ್ರೆ, ಗಣೇಶನ ಹಬ್ಬ, ಕವಡೇಪೀರಾ, ಮೊಹರಂ, ಈದ್ ಮೀಲಾದ್ ,ಚುನಾವಣೆ ಸೇರಿದಂತೆ ಹತ್ತು ಹಲವು ಸಂದರ್ಭಗಳಲ್ಲಿ ತಮ್ಮ ದಕ್ಷತೆಯನ್ನು ಮೆರೆದು ಇತರರಿಗೆ ಮಾದರಿಯಾಗಿದ್ಧಾರೆ. 

ಖೋಟಾನೋಟು ಪ್ರಕರಣ, ಕಳ್ಳತನ, ದರೋಡೆ ಪ್ರಕರಣಗಳು, ಕೊಲೆ ಪ್ರಕರಣಗಳು ಸೇರಿದಂತೆ ಅಪರಾಧ ಪ್ರಕರಣಗಳನ್ನು  ಭೇದಿಸುವಲ್ಲಿ ಚಾಣಾಕ್ಷ್ಯತೆ ಮೆರೆದು ಆರೋಪಿಗಳನ್ನು ಬಂಧಿಸಿದ್ದಾರೆ. ತಾಂತ್ರಿಕವಾಗಿಯೂ ಅತ್ಯುತ್ತಮ ಪರಿಣಿತಿ ಹೊಂದಿರುವ ರವಿ ಉಕ್ಕುಂದ್ ಪ್ರಕರಣಗಳನ್ನು ಬೇದಿಸುವಲ್ಲಿ ನಿಸ್ಸಿಮರು. ಅವರ ನೇತೃತ್ವದಲ್ಲಿ ಕೊಪ್ಪಳ ಪೋಲಿಸ್ ತಂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಜನಮೆಚ್ಚುಗೆ ಗಳಿಸಿದೆ.  ಈಗ ರವಿ ಉಕ್ಕುಂದರವರು  ವರ್ಗವಾಗಿ ಹೋಗುತ್ತಿದ್ದಾರೆ.  ಅವರಿಗೆ ಶುಭವಾಗಲಿ.  ಕೊಪ್ಪಳದ ಶಾಂತಿಪ್ರಿಯ ಜನತೆ ಯಾವತ್ತೂ ನಿಮ್ಮನ್ನು ಮರೆಯುವುದಿಲ್ಲ .

Please follow and like us:
error