ಕೊಪ್ಪಳದ ರಕ್ತದಾನಿ ಲಕ್ಷ್ಮೀಕಾಂತ ಗುಡಿಗೆ ಸನ್ಮಾನ

kantu-gudi redcross-koppalವಿಶ್ವ ರಕ್ತ ದಾನಿಗಳ ದಿನಾಚರಣೆ  : ಕೊಪ್ಪಳದ ರಕ್ತದಾನಿ ಲಕ್ಷ್ಮೀಕಾಂತ ಗುಡಿಗೆ ಸನ್ಮಾನ

ಕೊಪ್ಪಳ, ೧೨- ಭಾರತಿಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ಶಾಖೆಯಿಂದ ಪ್ರತಿವರ್ಷ ಹೆಚ್ಚು ರಕ್ತದಾನ ಮಾಡಿದ ಸಾಧಕರಿಗೆ ಮಾಡುವ ಗೌರವ ಸನ್ಮಾನಕ್ಕೆ ಈ ಬಾರಿ ಕೊಪ್ಪಳ ನಗರದ ರಕ್ತದಾನಿ ಲಕ್ಷ್ಮೀಕಾಂತ ಗುಡಿ ಆಯ್ಕೆಯಾಗಿದ್ದಾರೆ.
ಜೂನ್ ೧೪ ರಂದು ಬೆಂಗಳೂರಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವಿಶ್ವ ರಕ್ತದಾನಿಗಳ ದಿನಾಚರಣೆಯೆಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚು ರಕ್ತದಾನ ಮಾಡಿದ ದಾನಿಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ.
ಕೊಪ್ಪಳ ನಗರದ ನಿವಾಸಿ ಲಕ್ಷ್ಮೀ ಕಾಂತಗುಡಿ ೫೧ ಭಾರಿ ರಕ್ತದಾನ ಮಾಡಿದ್ದು ಈ ಗೌರವಕ್ಕೆ ಭಾಜನರಾಗಿದ್ದಾರೆ.
ಬೆಂಗಳೂರಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೇಂದ್ರ ಕಛೇರಿಯಲ್ಲಿ ಜೂನ್ ೧೪ ರಂದು ವಿಶ್ವ ರಕ್ತದಾನಿಗಳ ದಿನಾಚರಣೆಯಂದು ರಕ್ತದಾನಿಗಳಿಗೆ ರಾಜ್ಯ ಪಾಲರು ಸನ್ಮಾನಿಸಿ ಗೌರವಿಸಲಿದ್ದು ಇವರಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ|| ಕೆ.ಜಿ.ಕುಲಕರ್ಣಿ ಕಾರ್ಯದರ್ಶಿ ಡಾ|| ಶ್ರೀನಿವಾಸ ಹ್ಯಾಟಿ ಇತರರು ಅಭಿನಂದಿಸಿದ್ದಾರೆ.

Leave a Reply