ಕೊಪ್ಪಳದ ಜಿಲ್ಲೆಗೂ ಕಾಲಿಟ್ಟಿದೆ  ಪ್ಲಾಸ್ಟಿಕ್ ಅಕ್ಕಿ 

 

ಭತ್ತದ ನಾಡು ಕೊಪ್ಪಳದ ಜಿಲ್ಲೆಯಲ್ಲೂ ಕೂಡಾ ಪ್ಲಾಸ್ಟಿಕ್ ಅಕ್ಕಿ ಕಾಲಿಟ್ಟಿದೆ. ರಾಮನಗರ , ಆನೇಕಲ್ ಹಾಗೂ ರಾಜ್ಯದ ಬೇರೆ ಕಡೆಯಲ್ಲೂ ಪ್ಲಾಸ್ಟಿಕ ಸಕ್ಕರೆ, ಮೊಟ್ಟೆ ಮಾರುಕಟ್ಟೆಗೆ ಲಗ್ಗೆ ಯಿಟ್ಟು ಜನರಿಗೆ ಮಂಕಬುದ್ದಿ ಎರೆಚಿದ್ರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ನ್ಯಾಯ ಬೆಲೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ವಿತರಣೆ ಮಾಡಲಾಗಿದೆ.ಗಂಗಾವತಿ ತಾಲೂಕಿನ ಶ್ರೀರಾಮನಗರದ ವಾರ್ಡ ನಂಬರ್ ೬ರ ನ್ಯಾಯಬೆಲೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ವಿತರಣೆ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಹಕರು ಮನೆಗೆ ಹೋಗಿ ಅಕ್ಕಿ ಬೇಯಿಸಿದಾಗ ಪ್ಲಾಸ್ಟೀಕ್ ಅಕ್ಕಿ ವಿಷಯ ಗೊತ್ತಾಗಿದೆ‌‌. ರಾಜ್ಯ ಸರ್ಕಾರ ಹಾಗೂ ಆಹಾರ ಇಲಾಖೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಸದ್ಯ ಆಹಾರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ…

Leave a Reply