ಕೊಪ್ಪಳದಲ್ಲಿ ‘ಸಾಹಿತ್ಯ ಸೌರಭ-೨೦೧೮’ ಕಾರ್ಯಕ್ರಮ


ಕೊಪ್ಪಳ: ಶಕ್ತಿ ಶಾರದೆಯ ಮೇಳ, ಬೆರಗು ಪ್ರಕಾಶನ ಭಾಗ್ಯನಗರ-ಕೊಪ್ಪಳ ಹಾಗೂ ಜ್ಞಾನ ಬಂಧು ವಸತಿ ಶಾಲೆ ಭಾಗ್ಯನಗರ ಇವರ ಸಹಯೋಗದಲ್ಲಿ ಅಕ್ಟೋಬರ್ ೨೮ರಂದು ಕೊಪ್ಪಳ ರೈಲು ನಿಲ್ದಾಣ ಬಳಿಯ ಬಾಲಾಜಿ ಫಂಕ್ಷನ್ ಹಾಲ್‌ನಲ್ಲಿ ‘ಸಾಹಿತ್ಯ ಸೌರಭ-೨೦೧೮’ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಘಟಕ, ನಿವೃತ್ತ ಉಪನ್ಯಾಸಕ ಡಿ.ಎಂ.ಬಡಿಗೇರ ತಿಳಿಸಿದ್ದಾರೆ.
ಅಂದು ದಿನವಿಡಿ ಕಾರ್ಯಕ್ರಮ ಜರುಗಲಿದ್ದು ಒಟ್ಟು ನಾಲ್ಕು ಗೋಷ್ಠಿಗಳಲ್ಲಿ ವಿವಿಧ ರಂಗಗಳ ಖ್ಯಾತನಾಮರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರವಿವಾರ ಬೆಳಗ್ಗೆ ೧೦ ಗಂಟೆಗೆ ‘ಶರೀಫರ ತತ್ವ ಪದಗಳಲ್ಲಿ ಸಾಮಾಜಿಕ ಸಾಮರಸ್ಯ’ ಕುರಿತ ಗೋಷ್ಠಿಗೆ ಉದ್ಯಮಿ ಶ್ರೀನಿವಾಸ ಗುಪ್ತಾ ಚಾಲನೆ ನೀಡಲಿದ್ದು ಕುಕನೂರಿನ ತತ್ವಪದಕಾರ ಆರ್.ಪಿ.ರಾಜೂರು ಅಧ್ಯಕ್ಷತೆ ವಹಿಸಲಿದ್ದಾರೆ. ನಾಡೋಜ ಡಾ.ಮಹೇಶ ಜೋಷಿ ವಿಷಯ ಮಂಡಿಸಲಿದ್ದು ಸಾಹಿತಿಗಳಾದ ಮುನಿಯಪ್ಪ ಹುಬ್ಬಳ್ಳಿ, ಬಸವ ಜ್ಯೋತಿ ಪ್ರಶಸ್ತಿ ಪುರಸ್ಕೃತ ಅಬ್ದುಲ್ ರೆಹಮಾನ, ಡಿ.ಎಂ.ಬಡಿಗೇರ, ದಾನಪ್ಪ ಕವಲೂರು ಉಪಸ್ಥಿತರಿರುವರು.
ಮಧ್ಯಾಹ್ನ ೧೨ಗಂಟೆಗೆ ‘ಸಾಹಿತ್ಯ ಮತ್ತು ರಾಜಕಾರಣ’ ಕುರಿತ ಎರಡನೇ ಗೋಷ್ಠಿ ಅಧ್ಯಕ್ಷತೆ ಎ.ಎಂ.ಮದರಿ ವಹಿಸಲಿದ್ದು ಧಾರವಾಡದ ಡಾ.ಮಲ್ಲಿಕಾರ್ಜುನ ಗುಮ್ಮಗೋಳ, ಹಗರಿಬೊಮ್ಮನಹಳ್ಳಿಯ ಹುರಕಡ್ಲಿ ಶಿವಕುಮಾರ, ಜಿ.ಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಮಾಜಿ ಉಪಾಧ್ಯಕ್ಷ ಯಂಕಣ್ಣ ಯರಾಶಿ, ಅಕ್ಬರ್ ಕಾಲಿಮಿರ್ಚಿ, ಗಣೇಶ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ೨ ಗಂಟೆಗೆ ‘ಕಾವ್ಯ: ಹುಡುಕಾಟ ಮತ್ತು ಸವಾಲುಗಳು’ ಗೋಷ್ಠಿ ಅಧ್ಯಕ್ಷತೆ ವಿಠಪ್ಪ ಗೊರಂಟ್ಲಿ ವಹಿಸಲಿದ್ದು ಉಡುಪಿಯ ವಿಶ್ರಾಂತ ಪ್ರಾಧ್ಯಾಪಕ ಮೇಟಿ ಮುದಿಯಪ್ಪ ವಿಷಯ ಮಂಡಿಸಲಿದ್ದಾರೆ. ಕವಿ ಹರಿನಾಥ ಬಾಬು, ಡಾ.ಸಿ.ಬಿ ಚಿಲ್ಕರಾಗಿ, ಕಸಾಪ ಮಾಜಿ ಅಧ್ಯಕ್ಷರಾದ ವೀರಣ್ಣ ನಿಗೋಜಿ, ರವಿತೇಜ ಅಬ್ಬಿಗೇರಿ ಉಪಸ್ಥಿತರಿರುವರು.
ಮಧ್ಯಾಹ್ನ ೩.೩೦ಕ್ಕೆ ‘ಸ್ತ್ರೀ ಸಂವೇದನೆ: ಮಹಿಳಾ ಸ್ವಾತಂತ್ರ್ಯ ಮತ್ತು ಕಾನೂನು’ ಗೋಷ್ಠಿ ಅಧ್ಯಕ್ಷತೆ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಅರಳಿ ನಾಗರಾಜರವರು ವಹಿಸಲಿದ್ದಾರೆ. ಕಾಳಮ್ಮ ಪತ್ತಾರ, ಗೌರಮ್ಮ ದೇಸಾಯಿ, ಸಾವಿತ್ರಿ ಮುಜುಮದಾರ, ಶಂ.ನಿಂ.ತಿಮ್ಮನಗೌಡರ, ರಾಜಶೇಖರ ಪಾಟೀಲ, ಡಾ.ಬಸವರಾಜ ಹನಸಿ, ವಿಜಯ ಅಮೃತರಾಜ್ ಭಾಗವಹಿಸುವರು ಎಂದು ಸಂಘಟಕ ಡಿ.ಎಂ.ಬಡಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error