ಕೊಪ್ಪಳದಲ್ಲಿ ಸಂಭ್ರಮದ ೬೪ನೇ ಕನ್ನಡ ರಾಜ್ಯೋತ್ಸವ 

ಕನ್ನಡ ರಾಜೋತ್ಸವ – 2019ರ ಕಾರ್ಯಕ್ರಮದ ನಿಮಿತ್ತ  ಲಕ್ಷ್ಮಣ ಸಂಗಪ್ಪ ಸವದಿ ಮಾನ್ಯ ಉಪ ಮುಖ್ಯಮಂತ್ರಿಗಳು ಸಾರಿಗೆ ಮತ್ತು ಕೃಷಿ ಸಚಿವರು ಕರ್ನಾಟಕ ಸರ್ಕಾರ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು , ಇವರ ಭಾಷಣ

 ಈ ಪವಿತ್ರ ದಿನದಂದು ಅಲ್ಲಿ ನೆರೆದಿರುವ ಆತ್ಮೀಯ ಕನ್ನಡ ಬಂಧು ಭಗಿನಿಯರೇ , ವೇದಿಕೆಯ ಮೇಲೆ ಆಸೀನರಾಗಿರುವ ಶಾಸಕರೇ , ಸಂಸದರೆ , ಜಿಲ್ಲಾ ಪಂಚಾಯತ್ ಅಧ್ಯಕ್ಷರೇ , ಜಿಲ್ಲಾಧಿಕಾರಿಗಳೇ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೆ , ಬೆಲ್ಲಾ ಹೊಲೀಸ್ ವರಿಷ್ಠಾಧಿಕಾರಿಗಳೇ ಹಾಗೂ ಈ ಸಮಾರಂಭಕ್ಕೆ ಆಗಮಿಸಿರುವ ಎಲ್ಲಾ ಜನಪ್ರತಿನಿಧಿಗಳೇ ಹಾಗೂ ನಾಗರಿಕ ಬಂಧುಗಳೇ , ವಿದ್ಯಾರ್ಥಿಗಳೇ , ಅಧಿಕಾರಿ ವರ್ಗದವರೇ ಹಾಗೂ ಮಾಧ್ಯಮ ಮಿತ್ರರೆ , ತಮಗೆಲ್ಲರಿಗೂ 64ನೇ ಕನ್ನಡ ರಾಜೋತ್ಸವದ ಹಾರ್ದಿಕ ಶುಭಾಶಯಗಳು . . ಸ್ವಾತಂತ್ರ್ಯ ಪೂರ್ವದಿಂದ ಭಾಷಾವಾರು ಪ್ರಾಂತ್ಯ ರಚನೆಗೆ ಆಗ್ರಹಿಸಿ ಹೋರಾಟ ನಡೆಯುತ್ತಲೇ ಇಡು ದಶಕಗಳ ಹೊವಾಟದ ಫಲವಾಗಿ 1956ನೇ ನವೆಂಬರ್ 1 ರಂದು ವಿಂಡ ಕರ್ನಾಟಕದ ಚದುರಿದ ಪ್ರದೇಶಗಳೆಲ್ಲಾ ಒಗ್ಗೂಡಿದ “ ಮೈಸೂರು ರಾಜ್ಯ ” ಉದಯವಾಯಿತು . ಭಾಷಾವಾರು ಪ್ರಾಂತ್ಯ ರಚನೆಯಾಗಿ 63 ಸಂವತ್ಸರಗಳ ಸಾಧನೆಯ ನಂತರ ಇಂದು 64 ನೆ : ಸಂಭ್ರಮದ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ . ಕನ್ನಡದ ಕುಲಪುರೋಹಿತ , ಏಕೀಕರಣದ ರೂವಾರಿ ಶ್ರೀ ಆಲೂರು ವೆಂಕಟರಾಯರು 1911 ರಲ್ಲಿಯೆ : ಏಕೀಕರಣದ ಹೋರಾಟವನ್ನು ಆರಂಭಗೊಳಿಸಿದ್ದರು . ದಕ್ಷಿಣ ಭಾರತದ ಕನ್ನಡ ಭಾಷೆ ಮಾತನಾಡುವ ಎಲ್ಲಾ ಪ್ರದೇಶಗಳನ್ನು ರಾಜ್ಯದಲ್ಲಿ ವಿಲೀನಗೊಳಿಸಲಾಯಿತು . ರಾಜ್ಯದ ಏಕೀಕರಣಕ್ಕೆ ದುಡಿದ ಅಸಂಖ್ಯಾತ ಹೋರಾಟಗಾರರಿಗೆ , ಮುತ್ಸದ್ಧಿಗಳಿಗೆ , ಲೇಖಕರು , ಕವಿಗಳು ಹಾಗೂ ನಾಡಿನ ಪ್ರಾಜರೆಲ್ಲರಿಗೂ ಕೃತಜ್ಞತೆ ಅರ್ಪಿಸಲು ನವೆಂಬರ್ 1 ರಂದು ರಾಜ್ಯೋತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ , ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಮುಂಬೈ ಪ್ರಾಂತ್ಯ , ಮದ್ರಾಸ್ ಪ್ರಾಂತ್ಯದ ರಾಜ ಮನೆತನಗಳ ಆಳ್ವಿಕೆಯಲ್ಲಿದ್ದ ಮೈಸೂರು ಪ್ರಾಂತ್ಯ , ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಕರ್ನಾಟಕ ಹಾಗೂ ಕೊಡಗು ಪ್ರಾಂತ್ಯಗಳನ್ನು ಒಳಗೊಂಡ ಏಕೀಕೃತ “ ಮೈಸೂರು ರಾಜ್ಯ ” 1956 ರಲ್ಲಿ ಉದಯವಾಯಿತು . ರಾಜ್ಯದ ಸರ್ವಾಂಗೀಣ ಪ್ರಗತಿಗೆ ಭದ್ರ ಬುನಾದಿ ಹಾಕಿದ ಹಿಂದುಳಿದ ಜನ ವರ್ಗದ ಅಭ್ಯುದಂಡದ ಹರಿಕಾರ ಡಿ . ದೇವರಾಜ ಅರಸು ರವರು 01 – 11 – 1973 ರಲ್ಲಿ ಗಟ್ಟಿ ನಿರ್ಧಾರ ತಳೆದು ರಾಜ್ಯವನು . “ ಕರ್ನಾಟಕ ” ಎಂದು ನಾಮಕರಣ ಮಾಡಿದರು . 4 ತಿಕರಗಿ ಹೋರಾಟಕ್ಕೆ ನಮ್ಮ ಕನ್ನಡ ನಾಡು , ನುಡಿ ಹಾಗೂ ಸಾಂಸ್ಕೃತಿಕ ಉಳಿವು ಬೆಳವಣಿಗೆಗಾಗಿ ಶ್ರಮಿಸಿದ ಅಸಂಖ್ಯ ಜನರ ತ್ಯಾಗ ಬಲಿದಾನ ಸೇರಿದೆ , ಸಾಹಿತ್ಯ ಕ್ಷೇತ್ರದಲ್ಲಿಯೂ ಕೂಡ ಕನ್ನಡ ಭಾಷೆಯ ಸಾಹಿತ , ಮುಂಚೂಣಿಯಲ್ಲಿದೆ . ಕುವೆಂತು , ಬೇಂದ್ರೆ , ಮಾಸ್ತಿ , ಗೋಕಾಕ್ , ಶಿವರಾಮ ರಂಗ , ಅನಂತಮೂರ್ತಿ , ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರರವರು ಕನ್ನಡ , ಮcಯ ಜ್ಞಾನಪೀಠ ಪ್ರಶಸ್ತಿ ತಂದುಕೊಡಲು ಕಾರಣರಾಗಿದ್ದಾರೆ . ಪ್ರಾಚೀನ ಕವಿಗಳಾದ ಪಂಪ , ರನ್ನ , ವಾಂಕ , ಕುಮಾರವ್ಯಾಸ , ಲಕ್ಷ್ಮೀಶ ಕವಿಗಳು ಸರ್ವಮಾನ್ಯರಾಗಿದ್ದಾರೆ . ತಮ್ಮ ಹಾಡುಗಳ ಮೂಲಕ

ಜನಮನ ಗೆದ್ದಿರುವ ಪುರಂದರದಾಸರು ಮತ್ತು ಕನಕದಾಸರನ್ನು ಮರೆಯಲು ಸಾಧ್ಯವಿಲ್ಲ . ಅಲ್ಲದೆ ಈ ಸಂದರ್ಭದಲ್ಲಿ , ನಮ್ಮ ರಾಷ್ಟ್ರಕವಿಗಳಾದ ಗೋವಿಂದ ಪೈ ಧರು , ಕುವೆಂಪು ರವರು ಮತ್ತು ಜಿ . ಎಸ್ ಶಿವರುದ್ರಪ್ಪನವರನ್ನು ಸ್ಮರಿಸಬೇಕಿದೆ . * ಕರ್ನಾಟಕ ಏಕೀಕರಣದ ಇತಿಹಾಸವನ್ನು ಗಮನಿಸಿದರೆ ಕೊಪ್ಪಳ ಜಿಲ್ಲೆಯ ಅಳವಡಿ ಶಿವಮೂರ್ತಿ ಸ್ವಾಮಿರವರು , ಶಿರೂರು ವೀರಭದ್ರಪ್ಪ ತಗ್ಗಿನಮನಿರವರು , ಶಂಕರಗೌಡು , ಪ್ರಭುರಾಜ ಪಾಟೀಲ್ ಸಂಗನಾಳರವರು ಪಂಚಾಕ್ಷರಿ ಹಿರೇಮಠ ರವರು , ಸೋಮಪ್ಪ ಡಂಬಳರವರು , ದೇವೇಂದ್ರಕುಮಾರ ಹಕಾರಿರವರು , ಭೀಮನಗೌಡ ಪಾಟೀಲ್‌ರವರು , ಹನುಮರಡ್ಡಿ ಕುಡಿ ರವರು , ಪಂಚಪ್ಪ ಶೆಟ್ಟರು , ಹಂಜಿ ಕೊಟಪ ಹಾಗೂ ಮುಂತಾದವರು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ್ದನ್ನು ನಾವು ಸ್ಮರಿಸಬೇಕಾಗಿದೆ . • ಕೊಪ್ಪಳ ಐತಿಹಾಸಿಕ ಹಿರಿಮೆಯನ್ನು ಹೊಂದಿದ ನಾಡು , “ ತಿರುನೃಡದ ನಾಡು ‘ ಎಂದೇ ಪ್ರಸಿದ್ಧವಾಗಿದೆ . ಕೊಪ್ಪಳವು ಕರ್ನಾಟಕದ ಪ್ರಮುಖ ರಾಜಮನೆತನಗಳ ಆಳ್ವಿಕೆಗೊಳಪಟ್ಟ , ರಾಜಕೀಯ , ಧಾರ್ಮಿಕ , ಸಾಮರಸ್ಯಕ್ಕೆ ಹೆಸರಾದ ಬೀಡು , ಇದು ಪರಧರ್ಮ ಸಹಿಷ್ಣುತೆಗೆ ಒಂದು ಮಾದರಿಯಾಗಿದೆ . ಈ ನಾಡನ್ನು ಸಾಂಸ್ಕೃತಿಕವಾಗಿ ಮತ್ತಷ್ಟು ಉನ್ನತ ಶಿಖರಕ್ಕೆ ತಲುಪಿಸಬೇಕಾದದ್ದು ಈ ನಾಡಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ . * ಕಲಾ ಕ್ಷೇತ್ರಕ್ಕೂ ಕೊಪ್ಪಳ ಜಿಲ್ಲೆಯ ಕೊಡುಗೆ ಗಣನೀಯವಾಗಿದ . ವೃತ್ತಿ ರಂಗಭೂಮಿ ಮಂಡಳಿಗಳು , ಪೌರಾಣಿಕ , ಸಾಮಾಜಿಕ , ಹವ್ಯಾಸಿ ನಾಟಕಗಳು , ಜಾನಪದ ಕಲೆಗಳು , ಬಯಲಾಟ , ಚಿತ್ರಕಲೆ , ಸಂಗೀತ – ಸಾಹಿತ್ಯ ಕ್ಷೇತ್ರಗಳಿಗೂ ಸಹ ಕೊಪ್ಪಳ ಜಿಲ್ಲೆ ಪ್ರಸಿದ್ದಿಯಾಗಿದೆ . ಕಿನ್ನಾಳ ಕರಕುಶಲ ಕಲೆ , ಜಾನಪದ ಪ್ರದರ್ಶನ ಕಲೆಗಳು , ಶಿಲ್ಪಕಲೆಗಳಿಗೆ ಸಂಬಂಧಿಸಿದ ಕಲಾಪ್ರಕಾರಗಳು ಕೊಪ್ಪಳ ಜಿಲ್ಲೆಯಲ್ಲಿ ಇರುವುದು ಅಭಿಮಾನದ ಸಂಗತಿಯಾಗಿದೆ . • ಭಕ್ತಿ , ಸಾಹಿತ್ಯ ಹಾಗೂ ಸಾಮಾಜಿಕ ಕಲ್ಯಾಣವನ್ನು ಜತೆಯಾಗಿ ಬೆಸೆದ ಜಗತ್ತಿನ ಅತ್ಯಪೂರ್ವ ಬಳುವಳಿಯೊಂದು ರೂಪಗೊಂಡು 12ನೇ ಶತಮಾನದಲ್ಲಿ ಯಶಸ್ವಿಯಾಗಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ನೆಲ ಇದು . ಹೀಗಾಗಿ ಇಲ್ಲಿನ ಜನರ ಭಾವನೆಗೆ ಬೆಲೆ ಕೊಟ್ಟು ಹೈದ್ರಾಬಾದ್ ಕರ್ನಾಟಕ ಪ್ರದೇಶವನ್ನು “ ಕಲ್ಯಾಣ ಕರ್ನಾಟಕ ” ವೆಂದು ನಮ್ಮ ಸರಕಾರ ಮರುನಾಮಕರಣ ಮಾಡಿದೆ . ಅದರಂತೆ ಹೈದ್ರಾಬಾದ್ – ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಸಹ ಕಲ್ಯಾಣ ಕರ್ನಾಟಕ ಪದೇಶಾಭಿವೃದ್ಧಿ ಮಂಡಳಿ ಎಂದು ಘೋಷಣೆ ಮಾಡಲಾಗಿದೆ . ಈ ಭಾಗದ ಸಮಗ್ರ ಕಲ್ಯಾಣವೇ ನಮ್ಮ ಸರ್ಕಾರದ ಧೈಯ ಮತ್ತು ಪ್ರಾದೇಶಿಕ ಅಸಮತೋಲನ ನಿವಾರಣೆಯೇ ನಮ್ಮ ಮುಂದಿನ ಗುರಿಯಾಗಿದೆ . * ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಗ್ರಾಮದ ಶ್ರೀ ರಮೇಶ ವೈದ್ಯ , ಇವರಿಗೆ ಸಹಕಾರ ಕ್ಷೇತ್ರದ ಉತ್ತಮ ಸೇವೆಗಾಗಿ ಈ ವರ್ಷದ ರಾಜ್ಯಮಟ್ಟದ ‘ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದ್ದು , ಕೊಪ್ಪಳ ಜಿಲ್ಲೆಯ ಸಮಸ್ತ ಜನತೆಯ ಪರವಾಗಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ , • 2019 – 20ನೇ ಸಾಲಿನಲ್ಲಿ ಕಲ್ಯಾಣ – ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮೈಕೋ ವಲಯದಲ್ಲಿ 1047 ಕೋಓತಿ ಮತ್ತು ಮ್ಯಾಕೋ ವಲಯದಲ್ಲಿ 44 . 60 ಕೋಟಿ ಅನುದಾನ ಜಿಲ್ಲೆಗೆ
ಗಡಿಸಲಾಗಿದ್ದು , ಇದರಲ್ಲಿ ಈಗಾಗಲೆ : 556 ಕಾಮಗಾನಿಗಳು ಅಂದಾಜು ಮೊತ್ತ ರೂ . 14 ಕೋಟಿಗಳಿಗೆ ಕ್ರಿಯಾ ಯೋಜನೆ ಅನುಮೋದನೆಗೊಂಡಿರುತ್ತವೆ . ಕವನ್ನು ರಾಜ್ಯ ಸರ್ಕಾರದ ಭಾರತ ಸರ್ಕಾರದ “ ಜಲಶಕ್ತಿ ಅಭಿಯಾನ ” ಕಾರ್ಯಕ್ರಮವನ್ನು ಆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು , ಕೊಪ್ಪಳ ಜಿಲ್ಲೆಯಲ್ಲಿ ಯಲಬುರ್ಗಾ ತಾಲ್ಲೂಕು ಯೋಜನೆಯಡಿ ಆಯ್ಕೆ ಮಾಡಲಾಗಿದೆ . ಅದರಂತೆ ಆಗಾಗಲೇ ಜಿಲ್ಲಾಡಳಿತ , ಜಿಲ್ಲಾ ಪಂಚಾಯತಿ ಮತ್ತು ಜಿಲ್ಲೆಯ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಸಮರೋಪಾದಿಯಲ್ಲಿ ಜಲ ಸಂರಕ್ಷಣೆ ಕಾಮಗಾರಿಗಳು , ಅರಣೀಕರಣ , ಬಲ ಸಾಕ ರತ , ಮಳೆ ನೀರಿನ ಕೊಯ್ದು , ಕೊಳವೆ ಭಾವಿ ಮುರುಪೂರಣ ಘಟಕಗಳು , ಕೃಷಿ ಹೊಂಡ ಸಮತಾತ ಬದು ನ ರ್ಮಾಣ , ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಕೆ ಮುಂತಾದ ಕಾಮಗಾರಿಗಳಿಗೆ 2019 – 20ನೇ ಸಾಲಿಗೆ ಅಂದಾಜು ಮೊತ್ತ ರೂ . 45 . 66 ಕೋಟಿಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಕೊಂಡು ಅನುಷ್ಠಾನಗೊಳಿಸಲಾಗುತ್ತಿದೆ . * ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ 2 , 35 , 835 ಕುಟುಂಬಗಳನ್ನು ನೋಂದಾಯಿಸಿ ಉದ್ಯೋಗ ಚೀಟಿಗಳನ್ನು ನವೀಕರಿಸಿ , ದೃಢೀಕರಣಗೊಳಿಸಲಾಗಿದೆ . ಜಿಲ್ಲೆಗೆ ರೂ . 203 . 50 ಕೋಟಿ ಕ್ರಿಯಾ ಯೋಜನೆಯನ್ನು ಗ್ರಾ . ಪಂ . ಮಟ್ಟದಲ್ಲಿ ತಯಾ ರಿಸಲಾಗಿದೆ . ಈ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಿ , ದಿನಾಂಕ : 25 – 10 – 2019 ರ ಅಂತ್ಯದವರೆಗೆ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ 37 . 58 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ . ಹಾಗೂ ರೂ . 171 . 55 ಕೋಟಿಗಳ ಅನುದಾನ ಬಳಕೆ ಮಾಡಲಾಗಿದೆ . ! * ಸಂಜೀವಿನಿ ‘ ಎನ್ ಆರ್ . ಎಲ್ . ಎಂ ಯೋಜನೆಯಡಿ 2019 – 20ನೇ ಸಾಲಿನಲ್ಲಿ ಒಟ್ಟು 181 ಹೊಸ ಮಹಿಳಾ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿರುತ್ತದೆ , ಹಾಗೂ ಅಸ್ತಿತ್ವದಲ್ಲಿ ಇರುವಂತಹ ಸ್ವಸಹಾಯ ಗುಂಪುಗಳಲ್ಲಿ 589 ಗುಂಪುಗಳಿಗೆ ವಿವಿಧ ಮಾದರಿಗಳಲ್ಲಿ ಸಾಮರ್ಥ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗಿದೆ . • ಲೋಕೋಪಯೋಗಿ ಇಲಾಖೆ ಕೊಪ್ಪಳ ವಿಭಾಗ ವ್ಯಾಪ್ತಿಯಲ್ಲಿ 2019 – 20ನೇ ಸಾಲಿಗೆ ರೂ . 20 . 57 ಕೋಟಿ ಅನುದಾನದಲ್ಲಿ 4 2 . 00 ಕಿ . ಮೀ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ ? ಜಿಲ್ಲಾ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ . ಈವರೆಗೂ 4 . ೧೦ ಕಿ . ಮೀ ರಾಜ್ಯ ಹೆದ್ದಾರಿ / ಜಿಲ್ಲಾ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ . • ಸಿಮೆಂಟ್ ಕಾಂಕ್ರೀಸ್ ರಸ್ತೆ ಕಾಮಗಾರಿಗಳಡಿ ಪ್ರಸಕ್ತ ಸಾಲಿನಲ್ಲಿ ಎಸ್ಸಿಪಿ ಹಾಗೂ ಕೃತಿಎಸ್ ‘ ಪಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ರೂ . 31 . 41 ಕೋಟಿಗಳ ಅನುದಾನದಲ್ಲಿ 2350 ಕಿ . ಮೀ ಕಾಂಕ್ರೀಟ್ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ . ಈವರೆಗೂ 4 . 63 ೬ . ಅಭಿವೃದ್ಧಿಪಡಿಸಲಾಗಿದೆ
, ಈ ಜಿಲ್ಲೆಯಲ್ಲಿ ನಬಾರ್ಡ ರಸ್ತೆ ಮತ್ತು ಸತುವೆ ಕಾಮಗಾರಿ ಯೋಜನೆ ಅಡಿಯಲ್ಲಿ ರೂ . 4 . 78 ಕೋಟಿಗಳ ಅನುದಾನದಲ್ಲಿ 1000 ಕಿ . ಮೀ ರಸ್ತೆ ಸುಧಾರಣೆ ಮಾಡಲು ಹಾಗೂ 1 ಸೇತುವೆಯನ್ನು ನಿರ್ಮಾಣ ಮಾಡಲು ಯೋಜಿಸಲಾಗಿದೆ . ಈವರೆಗೂ 11 . 00 ಕಿ . ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ . 1 * ತುವೆ ಕಾಮಗಾರಿ ಪೂರ್ಣಗೊಂಡಿದೆ . * ಉನ್ನತ ಶಿಕ್ಷಣ ಹಾಗೂ ಕೆ . ಕೆ . ಆರ್ . ಡಿ . ಜಿ . : ಅನುದಾನದಲ್ಲಿ ಕೊಪ್ಪಳ ಜಿಲ್ಲೆಯ ತಳಕಲ್ ಗ್ರಾಮದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ರೂ , 100 ಕೋಟಿಗಳ ಅನುದಾನ ಮಂಜೂರಾಗಿರುತ್ತದೆ . ಸದರಿ ಕಾಮಗಾರಿ ಪೂರ್ಣಗೊಂಡಿರುತ್ತದೆ . ತಳಕಲ್ ಗ್ರಾಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮತ್ತು ವೃತ್ತಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ರೂ . 85 ಕೋಟಿಗಳ ಅನುದಾನ ಮಂಜೂರಾಗಿರುತ್ತದೆ . ಸದರಿ ಕಾಮಗಾರಿ ಪ್ರಗತಿ ಹಂತದಲ್ಲಿರುತ್ತದೆ . ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ಸರ್ಕಾರಿ ಪಾಲಿಟೆಕ್ನ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯು ರೂ . 18 . 50 ಕೋಟಿಗಳ ಅನುದಾನ ಮಂಜೂರಾಗಿದ್ದು , ಸದರಿ ಕಾಮಗಾರಿ ಪ್ರಗತಿ ಹಂತದಲ್ಲಿರುತ್ತದೆ . * ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಯಾನ್ ನಿಧಿ ( PM – KISAN ) ” ಯೋಜನೆಯಡಿ ಭೂ ಒಡೆತನ ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ 3 ಕಂತುಗಳಲ್ಲಿ ವಾರ್ಷಿಕವಾಗಿ ಒಟ್ಟು ರೂ 6 , 000 / – ಗಳನ್ನು ನೀಡಲು ಉದ್ದೇಶಿಸಿದ್ದು , ಈ ಯೋಜನೆಯಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 1 , 63 , 413ರ ಗುರಿ ಪೈಕಿ 1 , 54186 ರೈತರಿಗೆ ನೋಂದಣಿ ಮಾಡಲಾಗಿದ್ದು , ಶೇ . 95 % ರಷ್ಟು ಪ್ರಗತಿ ಸಾಧಿಸಲಾಗಿದೆ . ಇದರಲ್ಲಿ 1ನೇ ಕಂತಿನಲ್ಲಿ 78 , 608 , 2ನೇ ಕಂತಿನಲ್ಲಿ 66 , 853 ಹಾಗೂ 3ನೇ ಕಂತಿನಲ್ಲಿ 11 , 561 ರೈತರಿಗೆ ಹಣ ಜಮೆ ಮಾಡಲಾಗುತ್ತಿದೆ . ಇದಲ್ಲದ : ರಾಜ್ಯ ಸರ್ಕಾರದಿಂದಲೂ ಸಹ ರೂ . 4 , 000 – ಹೆಚ್ಚಿನ ಪ್ರೋತ್ಸಾಹಧನ ನೀಡಲು ಕ್ರಮ ಕೈಗೊಳ್ಳಲಾಗಿದ್ದು , ಈಗಾಗಲೇ 85 , 254 ರೈತರಿಗೆ ಮೊದಲನೇ ಕಂತಿನ ಹಣ ಜಮೆ ಮಾಡಲಾಗಿದೆ . | * ಕೊಪ್ಪಳ ಜಿಲ್ಲೆಯ 7 ತಾಲೂಕಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು , ಶೇ . 99 % ರಷ್ಟು ಬಿತ್ತನೆಯಾಗಿದ್ದು ಒಳ್ಳೆಯ ಬೆಳಯ ನಿರೀಕ್ಷೆಯಲ್ಲಿರುತ್ತದೆ . ಜಿಲ್ಲೆಯಲ್ಲಿ 1 , 21 , 000 ಹೆಕ್ಟೇರ್‌ ಹಿಂಗಾರು ಬೆಳೆ ನಷ್ಟದ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು , ಈ ಪೈಕಿ 1 , 02000 ರೈತರಿಗೆ ರೂ . 84 . 00 ಕೋಟಿ ಅನುದಾನ ಪ್ರಸ್ತಾಪಿಸಿದ್ದು , 35000 ರೈತರಿಗೆ , 24 . 09 ಕೋ $ ಪಾವತಿಸಲಾಗಿದೆ , ಈ ವರ್ಷ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ವಾಡಿಕೆ ಮಳೆ 370 ಮಿ . ಮೀ . ಇದು 352 ಮಿ . ಮೀ . ವಾಸ್ತವಿಕ ಮಳೆಯಾಗಿರುತ್ತದೆ . 6 . ಮಳೆ ಕೊರತೆಯಾಗಿರುತ್ತದೆ . ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಬಿತ್ತನೆ ಗುರಿ 252500 ಹೆಕ್ಟರ್ ಇದ್ದು , ಇದರಲ್ಲಿ 249 485 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು , 99 % ಬಿತ್ತನೆ ಕಾರ್ಯ ಮುಗಿದಿರುತ್ತದೆ , ಹಿಂಗಾರು ಹಂಗಾಮಿನಲ್ಲಿ ಅಕ್ಬ ರ್ ತಿಂಗಳಿನಲ್ಲಿ ಜಿಲ್ಲೆಯ ವಾಡಿಕೆ ಮಳ 106 ಮೀ . ಮೀ . ಇದ್ದು , ವಾಸ್ತವಿಕ 206 ಮೀ . ಮೀ . , ಮಳೆಯಾಗಿದ್ದು , 95 % ಹೆಚ್ಚು ಮಳೆ ಬಂದಿರುತ್ತದೆ . ಹಿಂಗಾರು ಹಂಗಾಮಿನ ಬಿತ್ತನೆ ಗುರಿ 155200
ಪಕ್ಟರ್ ಇದ್ದು , 128378 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಂದುವರೆದಿತ್ತು . ಹಿಂಗಾರು ಹಂಗಾಮು ಜಿಲ್ಲೆಗೆ ಆಶಾದಾಯಕವಾಗಿರುತ್ತದೆ . . ! • ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ 273227 . 82 ಹೆಕ್ಟರ್ ಮುಂಗಾರು ಹಂಗಾಮಿನಲ್ಲಿ 273227 . 82 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು , ಇದರಲ್ಲಿ 197163 . 01 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು , 181768 41 ಪಕ್ಷ ‘ ಎV7 ರಲ್ಲಿ ಹೆಚ್ಚಿನ ಹಾನಿಯಾಗಿದ್ದು , ಹಾನಿಯಾದ ಕೆತಕೆ ಸವಿ ರೈತರಿಗೆ ರೂ 83 , 99 – ಕೊ ಹಾಗೂ ದೊಡ್ಡ ರೈತರಿಗೆ ರೂ 36 , 08 ಕೋಟಿ ಒಟ್ಟು ರೂ 121 . 07 / – ಕೊ೭೯ : ಬೆಳೆ ಪರಿಹಾರ ಆದಾಜಿಸಲಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ . ಮುಂಗಾರು ಹಂಗಾಮಿನಲ್ಲಿ ಹಾನಿಯಾದ ಬೆಳೆಗಳಿಗೆ ಇದುವರೆಗೆ 27890 ಫಲಾನುಭವಿಗಳಿಗೆ ರೂ 2 . 3 . 34 ಕೋಟಿ ಪರಿಹಾರವನ್ನು ಆರ್ ಟಿ . ಜ ಎಸ್ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ . ಕಳೆದ ವರ್ಷ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 131475 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು , 121648 ಹೆಕ್ಟೇರ್ ಪ್ರದೇಶದಲ್ಲಿ 50 % ಕ್ಕಿಂತ ಹೆಚ್ಚಿನ ಹಾನಿಯಾಗಿದ್ದು , ಸಣ್ಣ ರೈತರಿಗೆ ರೂ 5832 . 56 / – ಲಕ್ಷ , ದೊಡ್ಡ ರೈತರಿಗೆ ರೂ 2238 . 02 – ಲಕ್ಷ , ಒಟ್ಟು ರೂ 8070 . 58 – ಲಕ್ಷ ಪರಿಹಾರ ಅಂದಾಜಿಸಲಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ . ಈಗಾಗಲೇ ಪರಿಹಾರ ತಂತ್ರಾಂಶದಲ್ಲಿ ಡಾಟಾ ಎಂಟ್ರಿ ಮಾಡಲಾಗುತ್ತಿದ್ದು , ಇದುವರೆಗೂ 43865 ಫಲಾನುಭವಿಗಳಿಗೆ ರೂ 29 . 70 / ಕೋಟಿ ಪರಿಹಾರವನ್ನು ಆರ್ . ಟಿ . ಓ . ಎಸ್ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿರುತ್ತಾರೆ , ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃತಕ ಗರ್ಭದಾರಣೆ ಕಾರ್ಯಕ್ರಮದಡಿ 2019 – 20ನೇ ಸಾಲಿನಲ್ಲಿ ಗೋ ತಳಿ ಉನ್ನತೀಕರಣದ ಉದ್ದೇಶದೊಂದಿಗೆ ಕೃತಕ ಗರ್ಭಧಾರಣೆ ಕೈಗೊಳ್ಳಲು ಕೊಪ್ಪಳ ಜಿಲ್ಲೆಯು ಆಯ್ಕೆಯಾಗಿದ್ದು , ಜಿಲ್ಲೆಯಲ್ಲಿ 100 ಗ್ರಾಮ ; ಗುಚ್ಛಗ್ರಾಮಗಳನ್ನು ಆಯ್ಕೆ ಮಾಡಿ ಅಂದಾಜು 60 , 011 ಕೃತಕ ಗರ್ಭಧಾರಣೆ ಮಾಡಲಾಗುವುದು . . . ! ರಾಷ್ಟ್ರೀಯ ರೋಗ ನಿಯಂತ್ರಣ ( ಎನ್ . ಎ . ಡಿ , ಸಿ . ಪಿ ) ಈ ಕಾರ್ಯಕ್ರಮವು ಭಾರತ ಸರ್ಕಾರದ ನೂತನ ಕಾರ್ಯಕ್ರಮವಾಗಿದ್ದು , ಇದರಡಿ ಜಾನುವಾರು ರೋಗ ನಿಯಂತ್ರಣಕ್ಕಾಗಿ ಜಾನುವಾರುಗಳಿಗೆ ಲಸಿಕೆ ಹಾಕಲಾಗುವುದು . ಪ್ರಸ್ತುತ ಈ ಕಾಲರ್ರಕ್ರಮದಡಿ ದಿನಾಂಕ : 14 – 10 – 2019 ರಿಂದ 14 – 11 – 2019 ರವರೆಗೆ ಕಾಲು ಬಾಯಿ ರೋಗದ ವಿರುದ್ದ ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಅಭಿಯಾನ ಜಾರಿಯಲ್ಲಿದೆ . • ರೈತ ಸದಸ್ಯರುಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ವಿತರಣೆಯಡಿ ಕೊಪ್ಪಳ ಜಿಲ್ಲೆಯಲ್ಲಿ ದಿನಾಂಕ : 31 – 03 – 2019 ಕ್ಕೆ ಒಟ್ಟು 766 ಸಹಕಾರ ಸಂಘಗಳಿದ್ದು , ಅವುಗಳ ಪೈಕಿ 573 ಕಾರ್ಯನಿರತ , 119 ಸ್ಥಗಿತ ಮತ್ತು 74 ಸಮಾಪನೆಗೊಂಡ ಸಹಕಾರ ಸಂಘಗಳಿರುತ್ತವೆ . ಒಟ್ಟು ಕಾರ್ಯನಿರತ 115 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತ ಸದಸ್ಯರುಗಳಿಗೆ 2019 – 20 ನೇ ಸಾಲಿನಲ್ಲಿ ( ದಿನಾಂಕ 30 – 09 – 2019 ರವರೆಗೆ ) ಶೂನ್ಯ ಬಡ್ಡಿ ದರದಲ್ಲಿ ಒಟ್ಟು 19 , 976 ಸದಸ್ಯರುಗಳಿಗೆ ರೂ . 8429 . 55 ಲಕ್ಷ ಅಲ್ಪಾವಧಿ ಸಾಲ ವಿತರಣೆ ಮಾಡಲಾಗಿದೆ .

* ಅಲ್ಪಾವಧಿ ಸಾಲ ಮನ್ನಾದಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಹಾಗೂ ಪಿಕಾರ್ಡ್ ಬ್ಯಾಂಕುಗಳ ಮೂಲಕ ಅಲ್ಪಾವಧಿ ಬೆಳೆಸಾಲ ಪಡೆದು ದಿನಾಂಕ 10 – 7 – 2018 ಕ್ಕೆ ಹೋದ ಬಾಕಿ ಇದ್ದಂತಹ ರೈತರ ಅಲ್ಪಾವಧಿ ಸಾಲವನ್ನು ಸರ್ಕಾರವು ಮನ್ನಾ ಮಾಡಿದ್ದು , ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 23 , 976 ರೈತರು ರೂ . 104 . 25 ಕೋಟಿ ಸಾಲ ಮನ್ನಾ , ಪ್ರಯೋಜನ ಪಡೆಯುವರು . ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ 20 , 048 ರೈತ ಸದಸ್ಯರುಗಳಿಗೆ ರೂ . 80 . 46 ಕೋಟಿ ಸಾಲಮನ್ನಾ ಮೊತ್ತವು ಬಿಡುಗಡೆಯಾಗಿರುತ್ತದೆ . * ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿವರದನ್ವಯ 2018 – 19ನೇ ಸಾಲಿನಲ್ಲಿ ನೇಮಕಾತಿಗಾಗಿ ಅಧಿಸೂಚಿಸಲಾದ 6 ರಿಂದ 8 ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ 600 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ . ಸಿ . ಇ . ಟಿ ಪರೀಕ್ಷೆ ಮುಕ್ತಾಯಗೊಂಡಿದೆ ಫಲಿತಾಂಶ ಪ್ರಕಟಗೊಂಡಿದ್ದು , ದಾಖಲಾತಿ ಪರಿಶೀಲನೆ ಪ್ರಕ್ರಿಯೆಯನ್ನು ಕೊಡಲೇ ಪ್ರಾರಂಭಿಸಲಾಗುತ್ತದೆ . * ಕೊಪ್ಪಳ ಜಿಲ್ಲೆಗೆ ಅಲ್ಪಸಂಖ್ಯಾತರ ಸಮುದಾಯದವರಿಗೆ ಬಿದಾಯಿ ಯೋಜನೆಯಡಿ 2019 – 20ನೇ ಸಾಲಿಗಾಗಿ ಮುಸ್ಲಿಂ ಫಲಾನುಭವಿಗಳಿಗೆ ರೂ . 77 . 10 ಲಕ್ಷ ಹಾಗೂ ಕ್ರಿಶ್ಚಿಯನ್ ‘ ಫಲಾನುಭವಿಗಳಿಗೆ 4 . 00 ಲಕ್ಷ ಬಿಡುಗಡೆಯಾಗಿದ್ದು , 162 ಫಲಾನುಭವಿಗಳಿಗೆ ಸಹಾಯಧನ ಮಂಜೂರು ಮಾಡಿದೆ . ಮಾನ್ಯ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಯಡಿ ಕೊಪ್ಪಳ ಜಿಲ್ಲೆಗೆ 2018 – 19 ನೇ ಸಾಲಿಗಾಗಿ ಮಂಜೂರಾಗಿದ್ದ ಒಟ್ಟು 1825 . 00 ಲಕ್ಷ ಅನುದಾನದಲ್ಲಿ 2018 – 19 ನೇ ಸಾಲಿನಲ್ಲಿ 550 ಲಕ್ಷ ಬಿಡುಗಡೆಯಾಗಿದ್ದು , ಬಾಕಿ ಅನುದಾನದಲ್ಲಿ ರೂ . 750 . 00 ಲಕ್ಷ 2019 – 20ನೇ ಸಾಲಿನಲ್ಲಿ ಬಿಡುಗಡೆ ಮಾಡಲಾಗಿದೆ . ಜಿಲ್ಲೆಯಲ್ಲಿ 2019 – 20 ನೇ ಸಾಲಿಗಾಗಿ 1 ಸಮುದಾಯಭವನ ಹಾಗೂ 10 ಚಟ್೯ಗಳ ನವೀಕರಣಕ್ಕಾಗಿ ಒಟ್ಟು ರೂ . 64 . 38 ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ . ಈ ಸುಸಂದರ್ಭದಲ್ಲಿ , ಕನ್ನಡ ನಾಡು ನುಡಿ ಬಗ್ಗೆ ಮಾನ್ಯ ಕುವೆಂಪುರವರು ರಚಿಸಿದ “ ಎಲ್ಲಾದರು ಇರು ಎಂತಾದರು ಇರು , ಎಂದೆಂದಿಗೂ ನೀ ಕನ್ನಡವಾಗಿರು , ಕನ್ನಡವೇ ಸತ್ಯ , ಕನ್ನಡವೇ ನಿತ್ಯ ” ಗೀತೆಯನ್ನು ನನಪಿಸುತ್ತಾ ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ನಾನು ತಮ್ಮೆಲ್ಲರಿಗೂ ಮತ್ತೊಮ್ಮೆ ಶುಭ ಕೋರುತ್ತಾ , – ನನ್ನ ಭಾಷಣವನ್ನು ಮುಗಿಸುತ್ತೇನೆ , ನಿ : ಸಿರಿಗನ್ನಡಂ ಗೆಲ್ಗೆ , ಸಿರಿಗನ್ನಡಂ ಬಾಳ್ಮೆ , ಜೈ ಕರ್ನಾಟಕ :

Please follow and like us:
error