You are here
Home > Election_2018 > ಕೊಪ್ಪಳದಲ್ಲಿ ಶಾಸಕ ಶ್ರೀರಾಮುಲು ಹೇಳಿದ್ದೇನು ?

ಕೊಪ್ಪಳದಲ್ಲಿ ಶಾಸಕ ಶ್ರೀರಾಮುಲು ಹೇಳಿದ್ದೇನು ?

ಕೊಪ್ಪಳ : ಡಿಕೆಶಿ ಆಪ್ತರ ಮೇಲೆ ಸಿಬಿಐ ದಾಳಿ ವಿಚಾರ. ಕಾಂಗ್ರೆಸ್ ನವರಿಗೆ ಇವತ್ತು ಹೊಟ್ಟೆ ನೋವು ಬಂದಿದೆ.ಯುಪಿಎ ಸರ್ಕಾರ ಇದ್ದಾಗಲೂ ಬಿಜೆಪಿ ನಾಯಕರ ಮೇಲೆ ದಾಳಿ ನಡೆದಿತ್ತು.ಅವಾಗ ಕಾನೂನು ಮಾತನಾಡೋರು ಇವಾಗ ಯಾಕೆ ಮಾತು ಬದಲಾಗಿದೆ ಎಂದ ರಾಮುಲು.ದಾಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ.ಡಿಕೆ ಶಿವಕುಮಾರ್ ಒಬ್ಬ ದೊಡ್ಡಮನುಷ್ಯನಾ.. ಕಾನೂನು ಗಿಂತ ಅವರೇನು ದೊಡ್ಡವರಾ..? ಕಾನೂನು ಅದರ ಕೆಲಸ ಮಾಡ್ತಾ ಇದೆ

ಯಾರೋ ಮೇಲೆ ದಾಳಿ ಮಾಡಿದ್ರೆ, ಕುಂಬಳಕಾಯಿ ಕಳ್ಳನ ತರಹ ಡಿಕಿಶಿ ಯಾಕೆ ಮಾಡಿಕೊಳ್ತಾರೆ.ಅವರು ತಪ್ಪು ಮಾಡಿದ್ದಾರೆ. ಅದಕ್ಕೆ ಮೊದಲು ಬಂದು ಪ್ರೆಸ್ಮಮಿಟ್ ಮಾಡ್ತಾರೆ

ಕಾಂಗ್ರೆಸ್-ಜೆಡಿಎಸ್ ಲೋಕಸಭಾಯಲ್ಲಿ ಮೈತ್ರಿಕೊಳ್ಳಲಿ.ನಮಗೆ ಏನು ಸಮಸ್ಯೆ ಆಗಲ್ಲ.ಮೋದಿಯವರೇ ಅಧಿಕಾರಿಕ್ಕೆ ಬರ್ತಾರೆ. ಉಪಚುನಾವಣೆ ಬಿಜೆಪಿಗೆ ಯಾವುದೇ ದಿಕ್ಸೂಚಿ ಆಗಲ್ಲ.ಉಪಚುನಾವಣೆಯಿಂದ ಬಿಜೆಪಿಗೆ ಏನು ಆಗಲ್ಲ.2019 ರಲ್ಲಿಯೂ ಸಹ ಮತ್ತೆ ನರೇಂದ್ರ ಮೋದಿಯವರು ಪ್ರಧಾನಿಮಂತ್ರಿಯಾಗ್ತಾರೆ. ತೃತೀಯರಂಗ , ಸಮೀಶ್ರಸರ್ಕಾರದಲ್ಲಿ ಅವಕಾಶವಾದಿಗಳು ಇರ್ತಾರೆ.ಸಣ್ಣ ಪುಟ್ಟ ವ್ಯತ್ಯಾಸ ಇದ್ರೆ ಅಲ್ಲಿ ಇರುವವರು ಬೇರೆ ಕಡೆ ಜಂಪ್ ಹಾಗ್ತಾರೆ.ಆದ್ರೀಂದ ತೃತೀಯರಂಗ ಮೋದಿಯನ್ನು ಏನು ಮಾಡೋಕೆ ಆಗಲ್ಲ.ಸಿಎಂ ಕುಮಾರಸ್ವಾಮಿ ರೈತರನ್ನು ಕರೆದ್ರೂ ನಾಟಕ ಮಾಡೋದು ಬೇಡ.ಮೊದಲು ಸಾಲಮನ್ನಾ ಮಾಡಿ ಮಾತು ಉಳಿಸಿಕೊಳ್ಳಿ.ಸಿಎಂ ಕುಮಾರಸ್ವಾಮಿರವರು 15 ದಿನ ಅಲ್ಲ‌ ಒಂದು ತಿಂಗಳು ಟೈಮ್ ತೆಗೆದುಕೊಳ್ಳಲಿ.ಮೊದಲು ಸಾಲಮನ್ನಾ ಮಾಡಲಿ ಎಂದ ರಾಮುಲು.

ನಮ್ಮ‌ ಸರ್ಕಾರ ಇದ್ದಿದ್ರೆ ನಾವು ಎಲ್ಲಾ ತರಹದ ಮಾಡ್ತಾ ಇದ್ದೇವು.ಆದ್ರೆ ನಮ್ಮ‌ಸರ್ಕಾರ ರಾಜ್ಯದಲ್ಲಿ ಇಲ್ಲ ಎಂದು ನುಣುಚಿಕೊಂಡ ರಾಮುಲು.ಇತಿಹಾಸದಲ್ಲಿ ಸಮ್ಮಿಶ್ರ ಸರಕಾರಗಳು ಅವಧಿಯನ್ನು ಪೂರ್ಣಗೊಳಿಸಿಲ್ಲ .. ಇದಕ್ಕೆ ಆಯುಷ್ಯ ಇಲ್ಲ ಎಂದು ಕೊಪ್ಪಳದಲ್ಲಿ ಶಾಸಕ ಬಿ.ಶ್ರೀರಾಮುಲು ಹೇಳಿಕೆ.

Top