ಕೊಪ್ಪಳದಲ್ಲಿ ವಿಕೃಗೋಕಾಕ್ ಸಮ್ಮೇಳನದಲ್ಲಿ ಕವಿಗೋಷ್ಠಿ

ಕೊಪ್ಪಳ, ಅ. ೧೫: ನಗರದ ಸಾಹಿತ್ಯ ಭವನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ.ಗೋಕಾಕ್ ನೆನಪಲ್ಲಿ ಮೂರು ದಿನಗಳ  ರಾಜ್ಯಮಟ್ಟದ ಅದ್ಧೂರಿ ಸಮ್ಮೇಳನ ಆಯೋಜಿಸಲಾಗಿದ್ದು ಅದರಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದು ಸಂಘಟಕರಾದ ರಮೇಶ ಸುರ್ವೆ ಮತ್ತು ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸುರ್ವೆ ಕಲ್ಚರಲ್ ಅಕಾಡೆಮಿಯ ೨೬ನೇ ವರ್ಷಾಚರಣೆ ನಿಮಿತ್ಯ ನವೆಂಬರ್-ಡಿಸೆಂಬರ್‌ನಲ್ಲಿ ಮೂರು ದಿನಗಳ ಕಾಲ ವಿಕೃಗೋಕಾಕ್ ರಾಷ್ಟ್ರೀಯ ಪ್ರತಿಭೋತ್ಸವ ಮತ್ತು ಕಲಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಅದರಲ್ಲಿ ನಮ್ಮ ಗೋಕಾಕರು ಎಂಬ ರಾಜ್ಯಮಟ್ಟದ ಕವಿಗೋಷ್ಠಿ ಏರ್ಪಡಿಸಲಾಗಿದೆ.
ವಿ.ಕೃ.ಗೋಕಾಕ್ ಅವರ ಬದುಕು ಬರಹ ಕುರಿತು ನಡೆಯುವ ಕವಿಗೋಷ್ಠಿಯಲ್ಲಿ ಪಾಲಗೊಳ್ಳಲು ಆಸಕ್ತರು ತಮ್ಮ ಕವಿತೆಯನ್ನು ಕಳುಹಿಸಿಕೊಡಬೇಕು, ಆಯ್ದ ೨೫ ಕವಿಗಳಿಗೆ ಸಮ್ಮೇಳನದಲ್ಲಿ ಅವಕಾಶ ನೀಡಲಾಗುತ್ತಿದೆ. ಆಯ್ದ ಕವಿಗಳ ಕವನ ಸಂಕಲನವನ್ನು ಸಹ ಮಾಡಲಾಗುವದು ಅದನ್ನು ಅಂದೇ ಬಿಡುಗಡೆಗೊಳಿಸಲಾಗುವದು ಹಾಗೂ ಎಲ್ಲಾ ಕವಿಗಳಿಗೆ ವೇದಿಕೆಯಲ್ಲಿ ನೆನಪಿನ ಕಾಣಿಕೆಯೊಂದಿಗೆ ೫ ಪುಸ್ತಕಗಳನ್ನು ಉಚಿತವಾಗಿ ನೀಡಿ ಗೌರವಿಸಲಾಗುವದು.
ಆಸಕ್ತರು ಅಕ್ಟೋಬರ್ ೩೦ ರೊಳಗೆ ಗೋಷ್ಠಿಯ ಉಸ್ತುವಾರಿ ಕವಿ ಬಿ. ಎನ್. ಹೊರಪೇಟೆ ಅವರನ್ನು ಸಂಪರ್ಕಿಸಿರಿ ಮೊ: ಸಂಖ್ಯೆ ೯೬೬೩೧೩೨೬೬೩ ಅಥವಾ ಮಂಜುನಾಥ ಜಿ. ಗೊಂಡಬಾಳ, ಅಕ್ಷರ ಡಿಜಿಟಲ್ ಪ್ರಿಂಟರ‍್ಸ್, ತಾಲೂಕ ಪಂಚಾಯತ್ ಕಾಂಪ್ಲೆಕ್ಸ್, ಕೊಪ್ಪಳ-೫೮೩೨೩೧. ಇವರನ್ನು ಸಂಪರ್ಕಿಸಿ ಕಳುಹಿಸಿಕೊಡಲು ಕೋರಿದ್ದಾರೆ.

Please follow and like us:
error