ಜೇಬಿನಲ್ಲಿದ್ದ ಎಂ ಐ ಕಂಪನಿಗೆ ಸೇರಿದ ಮೋಬೈಲ್ ಫೋನ್ ವೊಂದು ಬ್ಲಾಸ್ಟ್ ಆಗಿ ಯುವಕನೊರ್ವ ಗಾಯಗೊಂಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ಸಿದ್ದಾಪೂರ
ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಹನುಮೇಶ್ ತಾವರಗೇರಾ ಎನ್ನುವ ಯುವಕನ ಫೋನ್ ಬ್ಲಾಸ್ಟ್ ಆಗಿದೆ. ಹನುನೇಶ್ ಎಂದಿನಂತೆ ವಾಕಿಂಗ್ ಗೆ ಹೋಗಿದ್ದ.
ವಾಕಿಂಗ್ ಮುಗಿಸಿ ಬಂದು ಬೈಕ್ ಮೇಲೆ ಕುಳಿತಿದ್ದ. ಆಗ ಏಕಾಏಕಿ ಆತನ ಎಡಗಡೆ ಜೇಬಿನಲ್ಲಿದ್ದ ಎಂ ಐ ಕಂಪನಿಯ ಕೂಲ್ ಪ್ಯಾಡ್ ನೋಟ್ ಫೈವ್ ಮಾಡಲ್ ನ ಫೋನ್ ನಲ್ಲಿ ಹೊಗಿ ಬರಲು ಆರಂಭ ಮಾಡಿದೆ. ಬಳಿಕ ಫೋನ್ ಬ್ಲಾಸ್ಟ್ ಆಗಿದೆ. ಆಗ ಹನುನೇಶ್ ಫೋನ್ ಹೊರಗಡೆ ತೆಗೆಯಲು ಪ್ರಯತ್ನ ಮಾಡಿದ್ದಾನೆ. ಆದ್ರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ಹನುಮೇಶ್ ತಾವರಗೇರಿಯ ಪ್ಯಾಂಟ್ ಛೀದ್ರವಾಗಿದ್ದು, ಎಡಗಾಲಿಗೆ ಗಂಭೀರವಾದ ಗಾಯಗಳಾಗಿವೆ. ಸದ್ಯ ಹನುಮೇಶ್ ತಾವರಗೇರಾಗೆ ಸಿದ್ದಾಪೂರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಪ್ರಾಣಾಪಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇನ್ನು ಫೋನ್ ಬ್ಲಾಸ್ಟ್ ಆಗಿರುವ ಸುದ್ದಿ ಕೇಳಿದ ಜನರು ಹನುಮೇಶ್ ತಾವರಗೇರಿಯನ್ನು ನೋಡಲು ಧಾವಿಸುತ್ತಿದ್ದಾರೆ. ಜೊತೆಗೆ ಫೋನ್ ಬ್ಲಾಸ್ಟ್ ಆಗಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.