fbpx

ಕೊಪ್ಪಳದಲ್ಲಿ ಮೂರು ಹೊಸ ಕೇಸ್ : ನಾಲ್ವರು ಡಿಸ್ಚಾರ್ಜ

ಕೊಪ್ಪಳ: ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್-19 ಸೋಂಕಿತರಲ್ಲಿ ಯಶಸ್ವಿ ಚಿಕಿತ್ಸೆಯ ನಂತರ ಗುಣಮುಖರಾದ ನಾಲ್ಕು ಜನರನ್ನು ಇಂದು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಎಸ್.ಬಿ. ದಾನರೆಡ್ಡಿ ತಿಳಿಸಿದ್ದಾರೆ.

ಜಿಲ್ಲಾ ಬೋಧಕ ಆಸ್ಪತ್ರೆ ಕಿಮ್ಸ್, ಕೊಪ್ಪಳದಲ್ಲಿ ಕೋವಿಡ್-19 ದೃಢಪಟ್ಟ ಕೆಪಿಎಲ್-69-ಪಿ-10989, ಕೆಪಿಎಲ್-41-ಪಿ-9815, ಕೆಪಿಎಲ್-54-ಪಿ-10671, ಕೆಪಿಎಲ್-75-ಪಿ-10995 ಇವರಿಗೆ ಯಶಸ್ವಿ ಚಿಕಿತ್ಸೆ ನೀಡಿದ ನಂತರ ಅನುಸರಣಾ ಸ್ವಾಬ್ ಋಣಾತ್ಮಕ ವರದಿ ಬಂದ ಕಾರಣ ಇವರನ್ನು ನಿಗದಿತ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾಗೆಯೇ ಜಿಲ್ಲೆಯಲ್ಲಿ ಶುಕ್ರವಾರ ಮೂರು ಕೋವಿಡ್-19ನ ಹೊಸ ಪ್ರಕರಣಗಳು ದೃಢಪ ಟ್ಟಿವೆ ಎಂಬ ಮಾಹಿತಿ ಖಚಿತವಾಗಿದೆ.

108ಕ್ಕೇರಿದ ಸೋಂಕಿತರ ಸಂಖ್ಯೆ:
ಜಿಲ್ಲೆಯಲ್ಲಿ ಇದುವರೆಗೂ 108 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 69 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇಬ್ಬರು ಸಾವನ್ನಪ್ಪಿದ್ದು, 37 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಕೊಪ್ಪಳದ ಕೋವಿಡ್-19 ಆಸ್ಪತ್ರೆ (ಜಿಲ್ಲಾಸ್ಪತ್ರೆ) ಯಲ್ಲಿ ಶುಕ್ರವಾರದವರೆಗೆ 100 ಕೊರೊನಾ ಕೇಸ್ಗಳ ಪೈಕಿ 62 ಜನರು ಗುಣಮುಖರಾಗಿ ಇಬ್ಬರು ಸಾವನ್ನಪ್ಪಿದ್ದಾರೆ. 36 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ ಗಂಗಾವತಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ (ಎಂಸಿಎಚ್) (ಆರೋಗ್ಯ ಇಲಾಖೆಯ ಕೊರೊನಾ ವಾರಿಯರ್ಸ್ಗೆ) ಶುಕ್ರವಾರದವರೆಗೆ 8 ಪ್ರಕರಣಗಳು ದೃಢಪಟ್ಟಿದ್ದು 7 ಜನರು ಸೋಂಕಿನಿಂದ ಗುಣಮುಖರಾಗಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿನ ಸಾವಿನ ಪ್ರಕರಣಗಳಿಲ್ಲ.

Please follow and like us:
error
error: Content is protected !!