ಕೊಪ್ಪಳದಲ್ಲಿ ಮತ್ತೊಂದು ಕೊರೊನಾ ದೃಢ; ಒಟ್ಟು 22 ಕೇಸ್ ಪತ್ತೆ

ಕುಕನೂರಿನಲ್ಲಿ ಪತ್ತೆಯಾದ ಹೊಸ ಕೇಸ್

ಕೊಪ್ಪಳ; ಇದುವರೆಗೂ ಅಷ್ಟಾಗಿ ಕಂಡು ಬರದ ಕೊರೊನಾ ಪಾಸಿಟಿವ್ ಪ್ರಕರಣಗಳು ಕಳೆದ ವಾರದಿಂದ ಸತತವಾಗಿ ಏರಿಕೆ ಕಾಣತೊಡಗಿವೆ. ಬುಧವಾರ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಕೇಸ್ ಪತ್ತೆಯಾಗಿದ್ದು ರಾಜಸ್ಥಾನದ ಮೂಲದ ಮೂವತ್ತು ವರ್ಷದ ಕಾರ್ಮಿಕನೊಬ್ಬನಿಗೆ ಸೋಂಕು ದೃಢಪಟ್ಟಿದೆ. ಜೂನ್ 10ರಂದು ಸೋಕಿತ ವ್ಯಕ್ತಿ ರಾಜಸ್ಥಾನದಿಂದ ಕುಕನೂರಿಗೆ ಬಂದಿದ್ದು, ಕ್ವಾರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ಸೋಕಿತನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ನಡೆದಿದೆ. ಒಟ್ಟಾರೆ ಜಿಲ್ಲೆಯಲ್ಲಿ ಇದುವರೆಗೂ 22 ಕೊರೊನಾ ಪ್ರಕರಣಗಳು ದೃಢವಾಗಿದ್ದು. 11 ಜನರು ಗುಣಮುಖರಾಗಿದ್ದಾರೆ. 11 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್ ತಿಳಿಸಿದ್ದಾರೆ.

Please follow and like us:
error