fbpx

ಕೊಪ್ಪಳದಲ್ಲಿ ಮತ್ತೆ ೧೩ ಪಾಜಿಟಿವ್ : SSLC ಪರೀಕ್ಷಾ ವಿದ್ಯಾರ್ಥಿನಿಗೂ ಕನ್ಪರ್ಮ

Koppal ಕೊಪ್ಪಳದಲ್ಲಿ ಕರೋನಾ ಅಟ್ಟಹಾಸ ಮುಂದುವರೆದಿದೆ.ಇಂದು ಮತ್ತೆ ೧೩ ಪ್ರಕರಣಗಳು ಪತ್ತೆಯಾಗಿವೆ. ಗಂಗಾವತಿಯಲ್ಲಿ ೮, ಕೊಪ್ಪಳ ೨, ಕುಷ್ಟಗಿ ತಾಲೂಕಿನಲ್ಲಿ ೩ ಪ್ತಕರಣಗಳು ಪತ್ತೆ..ಕೊಪ್ಪಳ ನಗರ ಹಾಗೂ ಮುನಿರಾಬಾದ್ ನಲ್ಲಿ ತಲಾ ಒಂದು ಪ್ತಕರಣ.ಕುಷ್ಟಗಿಯ ದೊನ್ನೆಗುಡ್ಡದಲ್ಲಿ ಮೂರು ಪ್ರಕರಣಗಳು ಗಂಗಾವತಿ ನಗರದಲ್ಲಿ ೫ ಹಾಗೂ ಯರಡೋಣಿ, ಚಿಕ್ಕಜಂತಕಲ್, ವೆಂಕಟಗಿರಿಯಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿಯ ಒಟ್ಟು ಪಾಜಿಟಿವ್ ಪ್ರಕರಣಗಳು ೯೭ ತಲುಪಿದ್ದು ಜಿಲ್ಲೆಯ ಜನತೆಯಲ್ಲಿ ಹೆಚ್ಚಾದ ಆತಂಕ

ಇಷ್ಟೇ ಅಲ್ಲದೇ ಕೊರೊನಾ ಸೋಂಕಿತ 10 ನೇ ತರಗತಿ ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾಗಿದ್ದು ನೂರಾರು ವಿದ್ಯಾರ್ಥಿಗಳಿಗೆ ಆತಂಕಕ್ಕೆ ಒಳಗಾದ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನಡೆದಿದೆ. ಖಾಸಗಿ ಶಾಲೆಯಲ್ಲಿ ಪರೀಕ್ಷೆ ಬರುತ್ತಿದ್ದ ಸೋಂಕಿತೆ ಕಳೆದ ಎರಡು ಪರೀಕ್ಷೆಗಳನ್ನ ಎಲ್ಲರಂತೆ ಸಾಮೂಹಿಕವಾಗಿ ರೂಂ ನಂಬರ್ ಒಂದರಲ್ಲಿ ಬರೆದಿದ್ದಳು. ಇಂದು ಕೂಡ ಅದೇ ರೀತಿ ಪರೀಕ್ಷೆಗೆ ಹಾಜರಾಗಿದ್ದ ವೇಳೆ ವಿದ್ಯಾರ್ಥಿನಿಗೆ ಸೋಂಕು ಇರುವುದು ರಿಪೋರ್ಟ್ ಬಂದಿದೆ. ವರದಿ ಬರುತ್ತಿದ್ದಂತೆ ವಿದ್ಯಾರ್ಥಿನಿಯನ್ಮ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ರು. ಆದ್ರು ಸೋಂಕಿನಿಂದ ಭಯಭೀತಳಾದ ವಿದ್ಯಾರ್ಥಿನಿ ಪರೀಕ್ಷೆ ಅರ್ಧಕ್ಕೆ ನಿಲ್ಲಿಸಿ ಆಂಬ್ಯುಲನ್ಸ್ ನಲ್ಲಿ ಚಿಕಿತ್ಸೆ ಗೆ ತೆರಳಿದ್ದಾಳೆ. ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕೂಲಿ ಅರಸಿ ತೆರಳಿದ್ದ ತಂದೆ ತಾಯಿ ಜೊತೆ ತೆರಳಿದ್ದ ವಿದ್ಯಾರ್ಥಿನಿ, ಪರೀಕ್ಷೆ ಇರೋದ್ರಿಂದ ಕಾರಟಗಿಯ ತಮ್ಮ ನಿವಾಸಕ್ಕೆ ಬರದೆ ಸಿಂಧನೂರಿನಲ್ಲಿನ ಅವರ ಚಿಕ್ಕಮ್ಮಳ ಮನೆಯಲ್ಲಿ ಉಳಿದಿದ್ದಳು. ಅಲ್ಲಿಂದ ಪರೀಕ್ಷೆಗೆ ಬರುತ್ತಿದ್ದಳು. ಬೆಂಗಳೂರಿನಿಂದ ಬಂದಿದ್ದ ವಿದ್ಯಾರ್ಥಿನಿಯ ಸ್ವಾಬ್ ಟೆಸ್ಟ್ ಮಾಡಲಾಗಿತ್ತು. ಈ ವಿಷಯವನ್ನ ಪರೀಕ್ಷಾ ಕೇಂದ್ರದಲ್ಲಿ ಹೇಳದೆ ಇರೋದ್ರಿಂದ ಇಷ್ಟೆಲ್ಲ ಆತಂಕಕ್ಕೆ ಕಾರಣವಾಗಿದೆ. ಸಧ್ಯ ಸೋಂಕಿತ ವಿದ್ಯಾರ್ಥಿನಿ ಸಂಪರ್ಕದಲ್ಲಿದ್ದ ರೂಂ ನಂಬರ್ ಒಂದರಲ್ಲಿನ 18 ವಿದ್ಯಾರ್ಥಿಗಳು, 4 ಜನ‌ ರೂಂ ಸೂಪ್ರವೈಜರ್ ನ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ. ಸೋಂಕಿತ ವಿದ್ಯಾರ್ಥಿನಿಯನ್ನು ರ ರಾಯಚೂರಿಗೆ ಕರೆದೊಯ್ಯಲಾಗಿದೆ

Please follow and like us:
error
error: Content is protected !!