You are here
Home > Koppal News > ಕೊಪ್ಪಳದಲ್ಲಿ ನಾಳೆ ಶರಿಯತ್ ರಕ್ಷಣಾ ಬೃಹತ್ ಸಮ್ಮೇಳನ

ಕೊಪ್ಪಳದಲ್ಲಿ ನಾಳೆ ಶರಿಯತ್ ರಕ್ಷಣಾ ಬೃಹತ್ ಸಮ್ಮೇಳನ

koppal-samavesha
ಕೊಪ್ಪಳ,ಮೇ.  : ನಗರದ ಸಾರ್ವಜನಿಕ ಮೈದಾನದಲ್ಲಿ ದಿ. ೨೩ ರ ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ಶರಿಯತ್ ರಕ್ಷಣಾ ಬೃಹತ್ ಸಮ್ಮೇಳನ ಏರ್ಪಡಿಸಲಾಗಿದೆ. ಇತ್ತೀಚಿಗಷ್ಟೆ ತ್ರಿವಳಿ ತಲಾಕ್ ಎಂಬ ವಿಷಯದ ಬಗ್ಗೆ ಅನಾವಶ್ಯಕ ಗೊಂದಲ ಸೃಷ್ಟಿಸಿ ಇಸ್ಲಾಂ ಧರ್ಮದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದ್ದು. ಇದರ ಕುರಿತು ತಿಳಿವಳಿಕೆ ನೀಡಲು ಮತ್ತು  ಶರೀಯತ್ ಬಗ್ಗೆ ಜಾಗೃತಿ ಮೂಡಿಸಲು ಈ ಬೃಹತ್ ಶರಿಯತ್ ರಕ್ಷಣಾ ಸಮ್ಮೇಳನ ಏರ್ಪಡಿಸಲಾಗಿದೆ.
ಸಮ್ಮೇಳನದ ದಿವ್ಯ ಸಾನಿಧ್ಯವನ್ನು ನಗರದ ಯೂಸುಫಿಯ ಮಸೀದಿ ಖತಿಬ್-ವ- ಇಮಾಮ ಮೌಲಾನ ಮುಫ್ತಿ ಮಹಮದ್ ನಜೀರ್ ಅಹ್ಮದ ಖಾದ್ರಿ ತಸ್ಕಿನಿರವರು ವಹಿಸಲಿದ್ದು, ಹೈದರಾಬಾದ್‌ನ ಮೌಲಾನ ಡಾ. ಶೇಖ್ ಮಹ್ಮದ್ ಅಬ್ದುಲ್ ಗಫೋರ್ ಖಾದ್ರಿ ರವರ ಕೌಟಂಬಿಕ ಕಲಹ ಮತ್ತು ಕಾರಣಗಳು, ಇಸ್ಲಾಮಿ ಶಿಕ್ಷಣಗಳ ದೃಷ್ಟಿಕೋನದಲ್ಲಿ ಪರಿಹಾರೋಪಾಯಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಅದರಂತೆ ಸಮಾನ ನಾಗರಿಕ ಸಂಹಿತಯ ಸಂಶೋಧನಾತ್ಮಕ ಪರಮರ್ಶೆ ಕುರಿತು ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹ್ಮದ್ ಕುಂಞ ರವರು ಉಪನ್ಯಾಸ ನೀಡಲಿದ್ದಾರೆ.
ಇಸ್ಲಾಮಿ ದೃಷ್ಟಿಕೋನದಲ್ಲಿ ಬಹುಪತ್ನತ್ವ ವಿಷಯ ಕುರಿತು ಹುಬ್ಬಳ್ಳಿಯ ಸಾಜಿದಾ ಲಾಲಾಮಿಯಾ ಮಾತನಾಡಲಿದ್ದು, ವಾರಿಸು ಸ್ವತ್ತುನ್ನಲ್ಲಿ ಮಹಿಳೆಯರ ಪಾಲು ವಿಷಯದ ಬಗ್ಗೆ ಅಹಲೆ ಹದೀಸ್ ಜಮಾತ್‌ನ ಮಹ್ಮದ ಅಲಿ ಹಿಮಾಯಿತಿ ಮಾತನಾಡಲಿದ್ದು, ಇಸ್ಲಾಂನಲ್ಲಿ ತಲಾಕ್‌ನ ವ್ಯವಸ್ಥೆಯ ಬಗ್ಗೆ ಅಬೂಬಕರ್ ಮಸೀದಿ ಪೇಷ ಇಮಾಮ ಮೌಲಾನ ಮಹ್ಮದ ಜಹೂರ ಆಲಂ ಖಾದ್ರಿ ಹಾಗೂ ಮುಸ್ಲಿಂ ವೈಯಕ್ತಿಕ ಕಾನೂನ ಸಂಪೂರ್ಣ ಪರಿಚಯವನ್ನು ಫಿರ್ದೋಸ ಮಸೀದಿ ಪೇಷ ಇಮಾಮ ಮೌಲಾನ ಸಿರಾಜುದ್ದೀನ್ ರಷಾದಿ ಮುಖ್ಯ ಭಾಷಣವನ್ನು ಮಾಡಲಿದ್ದಾರೆ.
ಸದರಿ ಸಮ್ಮೇಳನದಲ್ಲಿ ಕೊಪ್ಪಳ ಮತ್ತು ಸುತ್ತ ಮುತ್ತಲಿನ ಪ್ರದೇಶದ ಮುಸ್ಲಿಂ ಸಮಾಜದ ಭಾಂದವರು ಮತ್ತು ಮಹಿಳೆಯರು ಸುಮಾರು ೧೦ ಸಾವಿರಕ್ಕೂ ಅಧಿಕ ಜನ ಸಮೂಹ ಪಾಲ್ಗೊಳ್ಳಲಿದೆ ಎಂದು ಸಂಘಟಕ ಸಮಿಯ ಮುಖ್ಯಸ್ಥೆ ಮೌಲಾನ ಹಾಫೀಜ್ ಮಹ್ಮದ ಮೊಹೀಯೂದ್ದೀನ್ ರವರು ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.

Leave a Reply

Top