ಕೊಪ್ಪಳದಲ್ಲಿ ಚಿತ್ರೀಕರಣಗೊಂಡಿದ್ದ ಓ ಪ್ರೇಮದೇವತೆ ಸಿನಿಮಾ ನಿರ್ದೇಶಕ ಶಂಕರ ಸುಗ್ನಳ್ಳಿ ನಿಧನ

koppal  ಕೊಪ್ಪಳದಲ್ಲಿ ಚಿತ್ರೀಕರಣಗೊಂಡಿದ್ದ ಓ ಪ್ರೇಮದೇವತೆ  ಸಿನಿಮಾ ನಿರ್ದೇಶಕ ಶಂಕರ ಸುಗ್ನಳ್ಳಿ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿರ್ದೇಶನದ ಈ ಪ್ರೇಮ ದೇವತೆ ಸಿನಿಮಾದಲ್ಲಿ ಕೊಪ್ಪಳ ಜಿಲ್ಲೆಯ ಬಹಳಷ್ಟು ಕಲಾವಿದರು ನಟಿಸಿದ್ದರು. ಸಿನಿಮಾ ಇದೇ ಭಾಗದಲ್ಲಿ ಚಿತ್ರೀಕರಣಗೊಂಡಿತ್ತು.  ಮಹಾಂತೇಶ ಮಲ್ಲನಗೌಡರು ಹಾಡುಗಳನ್ನು ಬರೆದಿದ್ದರು. ಎಚ್.ವಿ.ರಾಜಾಬಕ್ಷಿ ಸಾಹಸ ನಿರ್ದೇಶನ ಮಾಡಿದ್ದರು.

ಕೊಪ್ಪಳದ ಡಿಸಿ ಕೆ.ಶಿವರಾಂ ನಾಯಕನಟನಾಗಿ ಅಭಿನಯಿಸಿದ್ದರು.  ವಿಧಾನ ಪರಿಷತ್ ಸದಸ್ಯ ಹೆಚ್.ಆರ್.ಶ್ರೀನಾಥ, ಕರಿಯಣ್ಣ ಸಂಗಟಿ, ಅಮ್ಜದ್ ಪಟೇಲ್, ಮಹೇಂದ್ರ ಚೋಪ್ರಾ, ವಿಠ್ಠಪ್ಪ ಗೋರಂಟ್ಲಿ, ಚಿನ್ನಿನಾಯ್ಕರ್ , ಮುರಳಿ ಸೇರಿದಂತೆ ಕೊಪ್ಪಳ ಬಹಳಷ್ಟು ಜನ ನಟಿಸಿದ್ದರು.

Please follow and like us:
error