ಕೊಪ್ಪಳದಲ್ಲಿ ಗಣೇಶ ಹಬ್ಬದ ಸಂಭ್ರಮ

ಕೊಪ್ಪಳ:  ಕೊಪ್ಪಳ ಜಿಲ್ಲೆಯಲ್ಲಿ ಎಷ್ಟೇ ಬರಗಾಲ ಆವರಿಸಿದರೂ ಹಬ್ಬದ ಸಂಭ್ರಮಕ್ಕೆ ಯಾವುದೇ ಬರ ಅಡ್ಡಿಯಾಗುವುದಿಲ್ಲ. ಅದರಂತೆ ಗಣೇಶನ ಹಬ್ಬ ಜಿಲ್ಲೆಯಲ್ಲಿ ಈ ಬಾರಿ ಜೋರಾಗಿದೆ.  ಗಣೇಶ ಹಬ್ಬನ ನಿಮಿತ್ಯ ದೂರದ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರು, ಯುವಕರು ಗಣೇಶ ಮೂರ್ತಿಗಳನ್ನು ತಮ್ಮ ಊರುಗಳಿಗೆ ಟ್ರ್ಯಾಕ್ಟರ್ ಹಾಗು ಟಂ ಟಂ ವಾಹನಗಳಲ್ಲಿ ಕೊಂಡೆಯ್ಯುವುದು ಕಂಡು ಬಂದಿತು.
ಈಗಾಗಲೇ ಕೊಪ್ಪಳ ನಗರದಲ್ಲಿ ಗಲ್ಲಿ ಗಲ್ಲಿಗಳಲ್ಲಿ ಗಣಪನನ್ನು ಕೂರಿಸಲು ವೇದಿಕೆಗಳು ಸಜ್ಜಾಗಿವೆ. ಅಲಂಕಾರ ಮಾಡಲಾಗಿದೆ. ಹೂವು ಹಣ್ಣು ಹಾಗು ಬಾಳೆದಿಂಡುಗಳ ವ್ಯಾಪಾರ ಜೋರಾಗಿದೆ. ಅಲ್ದೆ ಪಟಾಕ್ಷಿಗಳ ಮಳಿಗೆಗಳನ್ನು ಸಾರ್ವಜನಿಕ ಮೈದಾಮನದಲ್ಲಿ ಹಾಕಲಾಗಿದೆ. ಕೊಪ್ಪಳದ ಮಾರುಕಟ್ಟೆ ಹಾಗು ಕೆಲ ಪ್ರಮುಖ ಸ್ಥಳಗಳಲ್ಲಿ ಗಣೇಶನ ಮೂರ್ತಿಗಳನ್ನು ಜನರು ಸಂಭ್ರಮದಿಂದ ತಮ್ಮ ಮನೆಗೆ ತಗೆದುಕೊಂಡು ಹೋಗುವ ದೃಶ್ಯಗಳು ಕಂಡುಬಂದವು. ಪರಿಸರ ಸ್ನೇಹಿ ಮಣ್ಣಿನ ಗಣಪ ಬೆಟಗೇರಿ, ಕಿನ್ನಾಳ ಹಾಗೂ ಭಾಗ್ಯನಗರದಲ್ಲಿ ತಯಾರಿಸಿದ್ದು ವಿಶೇಷವಾಗಿತ್ತು.
ಇಷ್ಟೆ ಅಲ್ಲದೆ ಮೋಹರಂ ಹಾಗು ಗಣೇಶ ಹಬ್ಬ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೂತನ ಎಸ್ಪಿ ರೇಣುಕಾ ಎಸ್ ಅವರು ಶಾಂತಿ ಸಭೆಯನ್ನು ಈಗಾಲೇ ಮಾಡಿದ್ದಾರೆ. ಎಲ್ಲಾ ಠಾಣೆಗಳಲ್ಲಿ ರೌಡಿಶೀಟರ್‌ಗಳನ್ನು ಕರೆದು ಎಚ್ಚರಿಕೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ೧೨೦೦ ಪೊಲೀಸ್ ಅಧಿಕಾರಿಗಳು ಸೇರಿದಂತೆ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ೪ ಕೆಎಸ್‌ಆರ್‌ಪಿ ತುಕುಡಿ ಮತ್ತು ೧೫ ಸಿಆರ್‌ಪಿ ತುಕುಡಿಗಳನ್ನು ನಿಯೋಜಿಸಲಾಗಿದ್ದು, ಪ್ರಮುಖ ರಸ್ತೆ ಹಾಗು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ೪೫೦ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಇಷ್ಟೆ ಅಲ್ಲದೆ ಅತಿ ಹೆಚ್ಚು ಸೌಂಡ್ ಡಿಜೆಗಳನ್ನು, ಧ್ವನಿವರ್ಧಕಗಳಿಗೆ ಪೊಲೀಸ್ ಇಲಾಖೆ ಹಾಗು ಜಿಲ್ಲಾಡಳಿತ ಕಡಿವಾಣ ಹಾಕಿದ್ದಾರೆ. ಒಟ್ಟಾರೆ ಈ ಬಾರಿಯೂ ಕೊಪ್ಪಳದಲ್ಲಿ ಜನರು ಗಣೇಶ ಹಬ್ಬವನ್ನು ಅತಿ ಸಂಭ್ರಮದಿಂದ ಆಚರಿಸುತ್ತಿರುವುದು ಕಂಡುಬರುತ್ತಿದೆ.
Please follow and like us:
error