ಕೊಪ್ಪಳದಲ್ಲಿ ಕರಡಿ ಕುಣಿತ : ಹಿಮಾಚಲ,ಗುಜರಾತ್ ಗೆಲುವು : ಕುಣಿದು ಕುಪ್ಪಳಿಸಿದ ಬಿಜೆಪಿ ಕಾರ್ಯಕರ್ತರು

ಹಿಮಾಚಲ ಮತ್ತು ಗುಜರಾತ್ ನಲ್ಲಿ ಬಿಜೆಪಿ ಗೆಲುವಿಗೆ ಕೊಪ್ಪಳ ಬಿಜೆಪಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ನಗರದ ಅಶೋಕ್ ಸರ್ಕಲ್ ನಲ್ಲಿ ಸಂಸದ ಕರಡಿ ಸಂಗಣ್ಣ ನೇತೃತ್ವದಲ್ಲಿ ಸಿ.ವಿ.ಚಂದ್ರಶೇಖರ್  ಹಾಗೂ ಕಾರ್ಯಕರ್ತರು  ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಇದೇ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ ಹುರುಪಿನಲ್ಲಿ ಹೆಜ್ಜೆ ಹಾಕಿ ಕುಣಿದರು. ಭಾಜಾ ಭಜಂತ್ರಿಯ ಜೋಷ್ ಗೆ ಮಹಿಳಾ ಕಾರ್ಯುಕರ್ತೆಯರು ಸಹ ಕುಣಿದು ಸಂಭ್ರಮಿಸಿದರು.

Video illide Nodi

ಸಿಹಿ ಹಂಚಿದ್ದಲ್ಲದೇ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು ನಂತರ ಜವಾಹರ ರಸ್ತೆಯಲ್ಲಿ ಮೆರವಣಿಗೆ ಮಾಡಿದರು.