ಕೊಪ್ಪಳ : ಒಬ್ಬರೇ ನ್ಯಾಯಾಧೀಶರಿಗೆ ೪ ಸಾವಿರ ಕೇಸುಗಳ ಭಾರ

Koppal News ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ೧೦ ದಿನಗಳ ಕಾಲ ಕಾನೂನು ಸಾಕ್ಷರತೆ, ಉಚಿತ ಕಾನೂನು ನೆರವು ಮತ್ತು ಸಲಹೆಯನ್ನು ಕೊಡುವ ಅಭಿಯಾನವನ್ನು ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಅಂತ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಂಜೀವ ವಿ. ಕುಲಕರ್ಣಿ ಅವರು ಹೇಳಿದರು.

ಜಿಲ್ಲಾ ನ್ಯಾಯಾಧೀಶರ ಕೊಠಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಹೇಳಿದರು.ಜನತಾ ನ್ಯಾಯಾಲಗಳ ಮೂಲಕ ಪ್ರಕರಣಗಳನ್ನು ಕಡಿನೆ ಖರ್ಚಿನಲ್ಲಿ ಇತ್ಯರ್ಥಗೊಳಿಸುವ ಉದ್ದೇಶ ಈ ಕಾನೂನು ಅರಿವು ಕಾರ್ಯಕ್ರಮದ್ದಾಗಿದೆ. ಪರಿಶಿಷ್ಟಜಾತಿ, ಪರಿಶಿಷ್ಟವರ್ಗಕ್ಕೆ ಸೇರಿದವರು, ಮಹಿಳೆಯರ,ಮಕ್ಕಳ, ಕಾರ್ಖಾನೆಯ ಕೂಲಿ ಕೆಲಸಗಾರರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಭೂಕಂಪ ವಿನಾಶ, ಮತೀಯ ದೌರ್ಜನ್ಯ, ಮಾನಸಿಕ ಕಾಯಿಲೆ ಮುಂತಾದ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.ವಾರ್ಷಿಕ ಆದಾಯ ಒಂದು ಲಕ್ಷಕ್ಕಿಂತ ಕಡಿಮೆ ಇರುವ ಎಲ್ಲಾ ವರ್ಗದವರು ಉಚಿತ ಕಾನೂನು ನೆರವು ಪಡೆಯಬಹುದು ಎಂದರು. ಅಲ್ಲದೆ ಜಿಲ್ಲಾ ಮತ್ತು ತಾಲೂಕ ಸಂಬಂಧಿಸಿದ ವಕೀಲರ ಫೀಸು, ಮತ್ತು ನ್ಯಾಯಾಲಯದ ಶುಲ್ಕ ಹಾಗು ಇತರ ವೆಚ್ಚಗಳನ್ನು ಸಂಪೂರ್ಣ ಪ್ರಾಧಿಕಾರವೇ ಭರಿಸುತ್ತದೆ ಅಂತ ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಜೀವ ವಿ ಕುಲಕರ್ಣಿ ಹೇಳಿದರು.

ಕೊಪ್ಪಳ‌ ಜಿಲ್ಲಾ ಯಾಗಿ ಪರಿವರ್ತನೆಯಾಗಿದ್ದರೂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆಗಿಲ್ಲ. ಒಬ್ಬನೇ ನ್ಯಾಯಾಧೀಶರಿಗೆ ಸುಮಾರ ೪೦೦೦ ಕೇಸಗಳಿವೆ. ಕಾರಣ ಜಿಲ್ಲಾ ಸಂಕೀರ್ಣ ನ್ಯಾಯಾಲಯ ಕಟ್ಟಡಕ್ಕೆ ಮನವಿ ಮಾಡಲಾಗುವುದು ಅಂತ ಹೇಳಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮನು ಶರ್ಮಾ ಇದ್ದರು.

Please follow and like us:
error