ಕೊಪ್ಪಳದಲ್ಲಿ ಆಶಾ ಕಾರ್ಯಕರ್ತೆರ ಬೃಹತ್ ಪ್ರತಿಭಟನೆ.

ಆಶಾ ಕಾರ್ಯಕರ್ತೆಯರಿಗೆ ೧೫ ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಎಂಸಿಟಿಎಸ್ ಪ್ರೋತ್ಸಾಹಧವನ್ನು ಕೂಡಲೇ
ಬಿಡುಗಡೆಗೊಳಿಸಬೇಕೆಂದು ಕೊಪ್ಪಳದಲ್ಲಿ ಆಶಾ ಕಾರ್ಯಕರ್ತೆರ ಬೃಹತ್ ಪ್ರತಿಭಟನೆ.

ಕೊಪ್ಪಳ : ದಿನಾಂಕ ೩ ರಿಂದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಆಶಾ ಕಾರ್ಯಕರ್ತೆರ ಪ್ರತಿಭಟನೆ ಮುಂದುವರಿದಿದ್ದು ಕೊಪ್ಪಳದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಮನೆಯಲ್ಲಿ ಕುಳಿತು ಧರಣಿ ಮುಂದುವರೆಸಿದ್ದಾರೆ. ಮುಂದುವರೆದು ಕೊಪ್ಪಳದಲ್ಲಿ ಈಶ್ವರಿ ಪಾರ್ಕನಿಂದ ಡಿ.ಸಿ. ಆಫೀಸ್‌ವರೆಗೆ ಜಿಲ್ಲೆಯಲ್ಲಿನ ಸಾವಿರಾರು ಆಶಾ ಕಾರ್ಯಕರ್ತೆರು ಕೆಲಸಕ್ಕೆ ಹೋಗದೆ ಹೋರಾಟದಲ್ಲಿ ಭಾಗವಹಿಸಿದ್ದರು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಂIUಖಿUಅ ರಾಜ್ಯ ಅಧ್ಯಕ್ಷರಾದ ಕಾಮ್ರೇಡ್ ಕೆ.ಸೋಮಶೇಖರ್ ಮಾತನಾಡುತ್ತಾ ಆಶಾ ಕಾರ್ಯಕರ್ತೆರ ಹೋರಾಟ ಇಡೀ ದೇಶಕ್ಕೆ ಸ್ಪೂರ್ತಿಯಾಗಿದೆ. ಸಮಸ್ಯೆಗಳನ್ನು ಕೂಡಲೇ ನಿವಾರಿಸಬೇಕು. ಅವರ ಕಳೆದ ೧೫ ತಿಂಗಳಿಂದ ಬಾಕಿ ವೇತನ ಬಿಡುಗಡೆಗೊಳಿಸಬೇಕು ಹಾಗೂ ಆಶಾ ಕಾರ್ಯಕರ್ತರು ನಿರಂತರ ಈ ರೀತಿ ಸಮಸ್ಯೆಗಳ ವಿರುದ್ಧ ಹೋರಾಟದಲ್ಲಿ ಭಾಗವಹಿಸಬೇಕು. ಯಾರು ಕೆಲಸಕ್ಕೆ ಹಾಜರಾಗಬಾರದೆಂದು ಕರೆಕೊಟ್ಟರು. ಸಮಾಜದ ಜನರಿಗೆ ಆರೋಗ್ಯ ಸೇವೆ ಒದಗಿಸಿದಂತೆ ಆಶಾ ಕಾರ್ಯಕರ್ತೆರನ್ನು ಸರ್ಕಾರ ಈ ರೀತಿ ಹೊರಾಟಕ್ಕೆ ಇಳಿಸಿ ಅವರ ಸೇವೆಗಳನ್ನು ತೊಂದರೆ ಮಾಡಲಿಕ್ಕೆ, ಈ ಸರ್ಕಾರವೇ ಕಾರಣ. ಈ ರೀತಿ ಹೋರಾಟ ಮಾಡಲಿಕ್ಕೆ ಸರ್ಕಾರವೇ ಹೊಣೆ ಎಂದು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕೆ.ಲಿಂಗರಾಜ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಂIUಖಿUಅ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಕೌಶಲ್ಯರವರು ಮಾತನಾಡಿ ಹೋರಾಟವನ್ನು ಮುಂದುವರೆಸಲು ಎಲ್ಲಾ ಆಶಾ ಕಾರ್ಯಕರ್ತರಿಗೆ ಕರೆ ಕೊಟ್ಟರು. ತಾಲೂಕು ನಾಯಕರುಗಳಾದ ಶೋಭಾ, ಶಾರದಾ, ವಿಜಯಲಕ್ಷ್ಮೀ, ದೀಪಾ, ವಿಜಯಲಕ್ಷ್ಮೀ ಭಾಗ್ಯನಗರ, ಗಾಯತ್ರಿ, ಗೀರಿಜಾ. ಸಂಘಟನೆಯ ಕಾರ್ಯಕರ್ತೆರಾದ ರಾಯಣ್ಣ, ದೇವರಾಜ ಹೊಸಮನಿ, ರಮೇಶ ವಂಕಲಕುಂಟಿ, ಮಂಜುಳಾ, ಆಶಾ ರ್ಕಾಕರ್ತೆರಾದ ಸವಿತಾ, ವಿಜಯಲಕ್ಷ್ಮೀ, ಅಮರಮ್ಮ, ನೀಲಮ್ಮ, ಸಂಗೀತಾ, ಶಾರದಾ, ಲಾಲಬೀ ಇನ್ನು ಮುಂತಾದ ಆಶಾಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error