ಕೊಪ್ಪಳದಲ್ಲಿ ಆಘೋರಿ ಬೆತ್ತಲೆ ಬಾಬಾ : ಸಿ.ವಿ.ಚಂದ್ರಶೇಖರ್ ಗೆ ಹೇಳಿದ್ದೇನು ?

cvchandrashekar-koppal-bjp cvc-koppalಆಘೋರಿ ಬೆತ್ತಲೆ ಬಾಬಾ ಒಬ್ಬರು ಕೊಪ್ಪಳದಲ್ಲಿಂದು  ಇದ್ದಕಿದ್ದಂತೆ ಪ್ರತ್ಯಕ್ಷರಾಗಿ ಜನ ಚಕಿತರಾಗುವಂತೆ ಮಾಡಿದರು. ಬಿಜೆಪಿ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕೊಪ್ಪಳದಲ್ಲಿಂದು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಆಘೋರಿ ಬಾಬಾ ಒಬ್ಬರು ಆಕಸ್ಮಿಕವಾಗಿ ಬೇಟಿ ನೀಡಿದ್ದು  ಎಲ್ಲರಿಗೂ ಆಶ್ಚರ್ಯಗೊಳ್ಳುವಂತೆ ಮಾಡಿತು.

ನಗರದ ಬಿಟಿ.ಪಾಟಿಲ್ ನಗರದಲ್ಲಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್ ಮನೆಯಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಆಚಾನಕ್ಕಾಗಿ ಅಲ್ಲಿಂದಲೇ ಸಾಗುತ್ತಿದ್ದ ಬೆತ್ತಲೆ ಅಘೋರಿ ಬಾಬಾ ತನ್ನ ಶಿಷ್ಯರೊಂದಿಗೆ ಒಳಗೆ ಆಗಮಿಸಿದ್ದರು. ಅಲ್ಲದೇ ಬಿಜೆಪಿಯ ನಾಯಕ ಸಿ.ವಿ.ಚಂದ್ರಶೇಖರ್ ವರಿಗೆ ಆಶೀರ್ವದಿಸಿ ಮುಂದಿನ ದಿನಗಳಲ್ಲೂ ಬಡವರ, ದೀನದಲಿತರ ಸೇವೆ ಮಾಡಿ ನಿನಗೆ ಒಳ್ಳೆಯದಾಗುತ್ತೆ ಎಂದು ಆಶೀರ್ವಾದ ಮಾಡಿದರು. ಇದು ನೆರೆದವರಲ್ಲಿ ಆಶ್ಚರ್ಯ ಮೂಡಿಸಿತು. ಸಿ.ವಿ.ಚಂದ್ರಶೇಖರ್ ಬರುವ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

Leave a Reply